ನಟಿ ರಶ್ಮಿಕಾ ಮಂದಣ್ಣ ಸ್ಟಾರ್ ಬ್ಯೂಟಿಯಾಗಿ ಮಿಂಚುತ್ತಿದ್ದಾರೆ. ಸದ್ಯ ಬಾಲಿವುಡ್ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ರಶ್ಮಿಕಾ ಜೊತೆ ನಟಿಸಲು ಸ್ಟಾರ್ ನಿರ್ದೇಶಕರು ಕ್ಯೂ ನಲ್ಲಿ ನಿಂತಿದ್ದಾರೆ. ಆದರೆ ರಶ್ಮಿಕಾಗೆ ಮಾತ್ರ ಆ ಒಬ್ಬ ನಿರ್ದೇಶಕರ ಜೊತೆ ಕೆಲಸ ಮಾಡೋ ಮನಸಾಗಿದೆಯಂತೆ.
ಇತ್ತೀಚೆಗೆ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಟನೆಯ ಸಿನಿಮಾ ‘ಗಂ ಗಂ ಗಣೇಶಾ’ ಈವೆಂಟ್ಗೆ ಅತಿಥಿಯಾಗಿ ತೆರಳಿದ್ದರು. ಈ ವೇಳೆ ರಶ್ಮಿಕಾ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಅವರು ‘ಬೇಬಿ’ ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರ ನಿರ್ದೇಶಕ ಸಾಯಿ ರಾಜೇಶ್ ನೀಲಂ ಜೊತೆ ಸಿನಿಮಾ ಮಾಡೋ ಬಯಕೆ ವ್ಯಕ್ತಪಡಿಸಿದ್ದಾರೆ.
‘ನಾನು ಬೇಬಿ ಸಿನಿಮಾ ನೋಡಿ ಕಣ್ಣೀರು ಹಾಕಿದೆ. ಅವರ ಜೊತೆ ಕೆಲಸ ಮಾಡಬೇಕು ಎನ್ನುವ ಬಯಕೆ ಇದೆ. ಸಾಯಿ ರಾಜೇಶ್ ನಿರ್ದೇಶನ ನಿಜಕ್ಕೂ ಮೆಚ್ಚಿಕೊಳ್ಳುವಂಥದ್ದು. ಅವರ ನಿರ್ದೇಶನದಲ್ಲಿ ಒಂದು ಸಂಕೀರ್ಣ ಪಾತ್ರವನ್ನು ಮಾಡುವ ಬಯಕೆ ನನ್ನದು’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.
‘ಗಂ ಗಂ ಗಣೇಶಾ’ ಸಿನಿಮಾದಲ್ಲಿ ಆನಂದ್ ದೇವರಕೊಂಡ, ವೆನ್ನೆಲ್ಲಾ ಕಿಶೋರ್, ರಾಜ್ ಅರ್ಜುನ್ ಮೊದಲಾದವರು ನಟಿಸಿದ್ದಾರೆ. ಉದಯ್ ಶೆಟ್ಟಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಬೇಬಿ’ ಬಳಿಕ ಬರುತ್ತಿರುವ ಸಿನಿಮಾ ಇದಾಗಿರುವುದರಿಂದ ಸಾಕಷ್ಟು ನಿರೀಕ್ಷೆ ಇದೆ.