ನ್ಯಾಶನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಸಿನಿಮಾಗಳ ಜೊತೆಗೆ ವೈಯಕ್ತಿಕ ವಿಚಾರವಾಗಿಯೂ ಸದಾ ಸುದ್ದಿಯಲ್ಲಿರುತ್ತಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇದೀಗ ರಶ್ಮಿಕಾ ಹಂಚಿಕೊಂಡಿರುವ ಸ್ಪೆಷನ್ ಪೋಸ್ಟ್ ಒಂದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ನಟಿ ರಶ್ಮಿಕಾ ಮಂದಣ್ಣ, ಇನ್ಸ್ಟಾದಲ್ಲಿ ಸ್ಟೋರಿ ಒಂದನ್ನು ಪೋಸ್ಟ್ ಮಾಡಿದ್ದಾರೆ. ಸ್ಟೋರಿಯಲ್ಲಿ ಹೂಗುಚ್ಛದ ಫೋಟೋವನ್ನ ಶೇರ್ ಮಾಡಿರುವ ನಟಿ, ಕುತೂಹಲ ಮೂಡಿಸುವಂತೆ ಕ್ಯಾಪ್ಷನ್ ನೀಡಿದ್ದಾರೆ.
ನನ್ನ ಮುಖದ ಮೇಲೆ ನಗು ಮೂಡಿಸುವುದು ಹೇಗೆ ಅನ್ನೋದು ನಿನಗೆ ಯಾವಾಗಲೂ ಗೊತ್ತು ಎಂದು ನಟಿ ರಶ್ಮಿಕಾ ಮಂದಣ್ಣ ಬರೆದಿದ್ದಾರೆ. ಆದ್ರೆ ಈ ರೆಡ್ ರೋಸ್ ಹೂಗುಚ್ಛ ನೀಡಿದ ವ್ಯಕ್ತಿ ಯಾರು ಅನ್ನೋದನ್ನು ಮಾತ್ರ ನಟಿ ತಿಳಿಸಿಲ್ಲ.
ರಶ್ಮಿಕಾ ಮಂದಣ್ಣ ಫೋಟೋ ವೈರಲ್ ಆಗಿದ್ದು, ಹೂ ಗುಚ್ಛ ನೀಡಿದವನು ಹೈದರಾಬಾದ್ ಹುಡುಗನೇನಾ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡ್ತಿದೆ. ಆದ್ರೆ ಈ ಬಗ್ಗೆ ಇಬ್ಬರು ಬಹಿರಂಗವಾಗಿ ಹೇಳಿಕೊಂಡಿಲ್ಲ.
ಸಿನಿಮಾಗಳ ಹೊರತಾಗಿ ರಶ್ಮಿಕಾ ಮಂದಣ್ಣ ತಮ್ಮ ಲವ್ ಲೈಫ್ ಬಗ್ಗೆಯೂ ಸುದ್ದಿಯಲ್ಲಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹಲವು ವರ್ಷಗಳಿಂದಲೂ ಹರಿದಾಡ್ತಿದೆ. ನಾವಿಬ್ಬರು ಒಳ್ಳೆ ಫ್ರೆಂಡ್ಸ್ ಎನ್ನುತ್ತಿರುವ ರಶ್ಮಿಕಾ, ವಿಜಯ್ ದೇವರಕೊಂಡ ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
