ದಿನದಿಂದ ದಿನಕ್ಕೆ ನಟಿ ರಶ್ಮಿಕಾ ಮಂದಣ್ಣ ಖ್ಯಾತಿ ಹೆಚ್ಚುತ್ತಿದೆ. ಸಿನಿಮಾ ರಂಗದಲ್ಲಿ ಸದ್ದು ಮಾಡುತ್ತಿರುವ ಕನ್ನಡದ ನಟಿ ಪ್ರಸ್ತುತ ವಿಶ್ವಾದ್ಯಂತ ಫ್ಯಾಷನ್ ಕ್ಷೇತ್ರದಲ್ಲಿ ಛಾಪು ಮೂಡಿಸೋ ಮೂಲಕ ಸದ್ದು ಮಾಡುತ್ತಿದ್ದಾರೆ.
ಇಟಲಿಯ ಮಿಲನ್ನಲ್ಲಿ ನಡೆದ ಫ್ಯಾಷನ್ ಈವೆಂಟ್ನಲ್ಲಿ ರಶ್ಮಿಕಾ ಮಂದಣ್ಣ ಬ್ಲ್ಯಾಕ್ ಕೋಟ್ ಔಟ್ಫಿಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಫೆಬ್ರವರಿ 20ರಂದು ‘ಮಿಲನ್ ಫ್ಯಾಷನ್ ವೀಕ್ 2024’ ಪ್ರಾರಂಭವಾಗಿದ್ದು, 26ರವರೆಗೆ ನಡೆಯಲಿದೆ.
ರಶ್ಮಿಕಾ ಮಂದಣ್ಣ ಫೆ.21ರಂದು ಮಿಲನ್ ಫ್ಯಾಷನ್ ಈವೆಂಟ್ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ನಟಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಸ್ಟೋರಿಸ್ನಲ್ಲಿ ಫ್ಯಾಶನ್ ಶೋನ ಫೋಟೋಗಳನ್ನು ಹಂಚಿಕೊಂಡು, “ಮಿಲನ್ ಫಾರ್ ಎ ಮಿನಿಟ್” ಎಂದು ಬರೆದುಕೊಂಡಿದ್ದಾರೆ.
ಫ್ಯಾಶನ್ ಶೋನಿಂದ ತಮ್ಮ ಮತ್ತೊಂದು ಫೋಟೋವನ್ನು ಹಂಚಿಕೊಂಡು, ಹೇರ್ ಸ್ಟೈಲಿಸ್ಟ್ ಮತ್ತು ಮೇಕ್ಅಪ್ ತಂಡವನ್ನು ಟ್ಯಾಗ್ ಮಾಡಿದ್ದಾರೆ. ಆ ಫೋಟೋಗೆ “ವೆನ್ ದಿ ಗರ್ಲ್ಸ್ ಡು ದೇರ್ ಮ್ಯಾಜಿಕ್ ಆನ್ ಮಿ” ಎಂದು ಬರೆದುಕೊಂಡಿದ್ದಾರೆ.
ಮಿಲನ್ ಫ್ಯಾಷನ್ ವೀಕ್ ಪ್ರತಿವರ್ಷ ಇಟಲಿಯಲ್ಲಿ ನಡೆಯುತ್ತದೆ. ಈ ಬಾರಿ ಫೆಬ್ರವರಿ ತಿಂಗಳಲ್ಲಿ ಈ ಕಾರ್ಯಕ್ರಮ ನಡೆದಿದೆ. ದೇಶ ವಿದೇಶಗಳಿಂದ ಸೆಲೆಬ್ರಿಟಿಗಳು ಇಲ್ಲಿಗೆ ಆಗಮಿಸಿದ್ದಾರೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮುಂಬೈನಿಂದ ಹೈದರಾಬಾದ್ಗೆ ವಿಮಾನದಲ್ಲಿ ಪ್ರಯಾಣ ಕೈಗೊಂಡಾಗ, ಅಪಾಯಕ್ಕೆ ಸಿಲುಕಿದ್ದರು. ತಮ್ಮ ಆಘಾತಕಾರಿ ಅನುಭವವನ್ನು ನಟಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು.