ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆದ ಅದ್ಧೂರಿ ರಥೋತ್ಸವ ತುಂತುರು ಮಳೆಯಲ್ಲಿಯೂ ಅತೀ ಸಡಗರದಿಂದ ನಡೆಯಿತು. ಅಂದ ಮಕ್ಕಳ ಆಶಾಕಿರಣ ಸಾವಿರಾರು ಅಂದ ವಿದ್ಯಾರ್ಥಿಗಳ ಬಾಳು ಬೆಳಗುತ್ತಿರೋ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯ ಶ್ರೀ ಕಲ್ಲಯ್ಯಜ್ಜನವರ ನೇತೃತ್ವದಲ್ಲಿ ಅದ್ಧೂರಿ ರಥೋತ್ಸವ ಜರುಗಿತು. 79ನೇ ಪುಣ್ಯಸ್ಮರೋತ್ಸವ ಹಾಗು ಡಾ. ಪಂಡಿತ ಪುಟ್ಟರಾಜ ಗವಾಯಿಗಳವರ 13ನೇ ಪುಣ್ಯಸ್ಮರಣೋತ್ಸವ ನಿಮಿತ್ಯ ಪ್ರತಿ ವರ್ಷ ರಥೋತ್ಸವ ನಡೆಯುತ್ತ ಬರ್ತಿದೆ.
ಇನ್ನು ರಥೋತ್ಸವದಲ್ಲಿ ನಾಡಿನ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ರಥೋತ್ಸವಕ್ಕೆ ಸಾಕ್ಷಿಯಾದರು. ಕಳೆದ ಗುರುವಾರದಿಂದ ಇಂದಿನವರೆಗೂ ಜಾತ್ರೆಯ ಅಂಗವಾಗಿ ಮಠದಲ್ಲಿ ಕೀರ್ತನ, ಸಂಗೀತ, ಉಪನ್ಯಾಸ, ವಿವಿಧ ಮನರಂಜನೆ ಕಾರ್ಯಕ್ರಮಗಳನ್ನು ಜರುಗಿದವು. ಇನ್ನು ಡೊಳ್ಳು, ಕರಡಿ ಮಜಲು, ವಾದ್ಯಗಳ ಮೆರುಗು ನೀಡಿದವು. ಇನ್ನು ಗಜರಾಜ ಭಕ್ತರ ಗಮನ ಸೆಳೆದಿದ್ದು ವಿಶೇಷವಾಗಿತ್ತು. ಹಲವು ಸ್ವಾಮೀಜಿಯವರು ಸಹ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.