ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಕೆಲವು ಆರೋಪಿಗಳಿಗೆ ಜಾಮೀನು ಸಿಕ್ಕಿ ಹೊರ ಬಂದಿದ್ದಾರೆ. ಅವರಲ್ಲಿ ಪ್ರಕರಣದ ಎ8 ಆರೋಪಿ ರವಿಶಂಕರ್ ಗೆ ಜಾಮೀನು ಮಂಜೂರಾಗಿ 6 ದಿನ ಕಳೆದರೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ನಡೆಸಿ 57ನೇ ಸಿಸಿಹೆಚ್ ನ್ಯಾಯಾಲಯ ಕಳೆದ ಸೋಮವಾರ ಆರೋಪಿ ರವಿಶಂಕರ್ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಅಲ್ಲದೇ 2 ಲಕ್ಷ ರೂ. ಬಾಂಡ್ ಹಾಗೂ ಇಬ್ಬರ ಶ್ಯೂರಿಟಿಯನ್ನೂ ನೀಡುವಂತೆನ್ಯಾಯಾಲಯ ಆದೇಶಿಸಿದೆ. ಆದರೆ ಶ್ಯೂರಿಟಿದಾರರು ಸಿಗದೇ ರವಿಶಂಕರ್ ಕುಟುಂಬ ಪರದಾಡುತ್ತಿದ್ದು ಇದೇ ಕಾರಣಕ್ಕೆ ರವಿಶಂಕರ್ ಜೈಲಿನಿಂದ ಹೊರ ಬರದೆ ಅಲ್ಲಿಯೇ ಉಳಿದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಇಂದು ಬಹುತೇಕ ಶ್ಯೂರಿಟಿ ಪ್ರಕ್ರಿಯೆ ಮುಗಿಯುವ ಸಾಧ್ಯತೆಯಿದ್ದು, ಪ್ರಕ್ರಿಯೆ ಮುಗಿದ ಬಳಿಕ ತುಮಕೂರು ಜೈಲಾಧಿಕಾರಿಗೆ ಮೇಲ್ ಮೂಲಕ ಜಾಮೀನು ಪ್ರತಿ ತಲುಪಲಿದೆ. ಜಾಮೀನು ಪ್ರತಿ ಜೈಲಾಧಿಕಾರಿಗೆ ತಲುಪಿದ ಬಳಿಕ ಆರೋಪಿ ರವಿಶಂಕರ್ ಬಿಡುಗಡೆಯಾಗುವ ಸಾಧ್ಯತೆಯಿದೆ. ಬಹುತೇಕ ಇಂದು (ಶನಿವಾರ) ಸಂಜೆ ಒಳಗೆ ಆರೋಪಿ ರವಿಶಂಕರ್ ಬಿಡುಗಡೆಯಾಗುವ ಸಾಧ್ಯತೆ ಇದೆ.