ಹಸಿ ಹಾಲು ಕುಡಿಯುವ ಜನತೆಗೆ ಬಿಗ್ ಶಾಕಿಂಗ್ ಸುದ್ದಿ ಒಂದು ಹೊರ ಬಿದ್ದಿದೆ. ಹಸು ಹಾಲು ಕುಡಿದ್ರೆ ಮಾರಣಾಂತಿಕ ಕಾಯಿಲೆ ತುತ್ತಾಗಬಹುದು ಎಂಬ ವರದಿ ಆಗಿದೆ
ಇತ್ತೀಚೆಗೆ, ಕೇರಳ ಮೂಲದ ಹೆಪಟಾಲಜಿಸ್ಟ್ ಒಬ್ಬರು ಹಸಿ ಹಾಲಿನ ಸೇವನೆಯಿಂದ ಉಂಟಾಗಬಹುದಾದ ಗಂಭೀರ ಸೋಂಕುಗಳನ್ನು ಎತ್ತಿ ತೋರಿಸಿದ್ದಾರೆ.
ಹಸಿ ಹಾಲಿನಲ್ಲಿ ಇ.ಕೋಲಿ, ಕ್ಯಾಂಪಿಲೋಬ್ಯಾಕ್ಟರ್, ಯೆರ್ಸಿನಿಯಾ, ಬ್ರೂಸೆಲ್ಲಾ, ಕಾಕ್ಸಿಯೆಲ್ಲಾ ಮತ್ತು ಲಿಸ್ಟೇರಿಯಾದಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇರಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಬ್ಯಾಕ್ಟೀರಿಯಾಗಳು ಮೆದುಳು ಮತ್ತು ಹೃದಯದ ಮೇಲೆ ದಾಳಿ ಮಾಡುವ, ರೋಗಗ್ರಸ್ತವಾಗುವಿಕೆಗಳು ಮತ್ತು ಸಾವಿಗೆ ಕಾರಣವಾಗುವ” ಹಲವಾರು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಈ ಬಗ್ಗೆ ವೈದ್ಯರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಹಸಿ ಹಾಲಿನ ಪರಿಣಾಮಗಳ ಬಗ್ಗೆ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ, ಸಾವಿರಾರು ಪ್ರತಿಕ್ರಿಯೆ ಬಂದಿವೆ. ಪಂಜಾಬ್ನ ಮಹಿಳೆಯೊಬ್ಬರು ಮಗುವಿಗೆ ಬಕೆಟ್ನಿಂದ ಹಸಿ ಹಾಲನ್ನು ನೀಡುವ ವೀಡಿಯೊವನ್ನು ಹಂಚಿಕೊಂಡಿರುವ ವೈದ್ಯರು, “ದಯವಿಟ್ಟು ನಿಮ್ಮ ಮಕ್ಕಳಿಗೆ ಹಸಿ ಹಾಲನ್ನು ಕುಡಿಸಬೇಡಿ.
ನಮ್ಮ ಪೂರ್ವಜರು ಮಾಡಿದಂತೆ ನೀವು ಅದನ್ನು ಅನುಕರಣೆ ಮಾಡುತ್ತಿದ್ದೀರಿ ಎಂದು ಭಾಸವಾಗುತ್ತದೆ, ಆದರೆ ನಮ್ಮ ಪೂರ್ವಜರು 25-30 ವರ್ಷಗಳಷ್ಟು ಸುದೀರ್ಘ ಜೀವನವನ್ನು ನಡೆಸಿದರು ಎಂಬುದನ್ನು ನೆನಪಿಡಿ ಎಂದು ಪೋಸ್ಟ್ ಮಾಡಿದ್ದಾರೆ.