ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಸತತ 10ನೇ ಬಾರಿಗೆ ರೆಪೋ ದರವನ್ನು ಯಥಾಸ್ಥಿತಿಯಲ್ಲೇ ಮುಂದುವರಿಸಿದೆ. ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದಲ್ಲಿ 6 ಸದಸ್ಯರ ಹಣಕಾಸು ನೀತಿ ಸಮಿತಿ ಸಭೆ ನಡೆಸಿತು. ಈ ಪೈಕಿ ಮೂವರು ಹೊಸ ಸದಸ್ಯರನ್ನು ಎಂಪಿಸಿಗೆ ಸೇರ್ಪಡೆಗೊಳಿಸಲಾಯಿತು.
ದೆಹಲಿ ವಿವಿಯ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಿರ್ದೇಶಕ ಪ್ರೊಫೆಸರ್ ರಾಮ್ ಸಿಂಗ್, ಅರ್ಥಶಾಸ್ತ್ರಜ್ಷ ಸೌಗತ ಭಟ್ಟಾಚಾರ್ಯ, ಕೈಗಾರಿಕಾ ಅಭಿವೃದ್ಧಿಯ ಅಧ್ಯಯನಗಳ ಸಂಸ್ಥೆಯ ಸಿಇಒ ಡಾ.ನಾಗೇಶ್ ಕುಮಾರ್ ನೂತನ ಸದಸ್ಯರು.
ಸಭೆಯ ಬಳಿಕ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ ಶಕ್ತಿಕಾಂತ ದಾಸ್, 2024-25ನೇ ಸಾಲಿನ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು 7.2% ರಷ್ಟಾಗುವ ಮುನ್ಸೂಚನೆ ಇದೆ. ರೆಪೋ ದರದಲ್ಲಿ ಯಾವುದೇ ಬದಲಾವಣೆ ತರದೇ 6.5% ನಲ್ಲೇ ಮುಂದುವರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರಲ್ಲಿ ಪೈಕಿ 5:1 ರಷ್ಟು ಸದಸ್ಯರು ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದರು ಎಂದು ತಿಳಿಸಿದರು.