ಐಪಿಎಲ್ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು 27 ರನ್ಗಳಿಂದ ಸೋಲಿಸುವ ಮೂಲಕ ಆರ್ಸಿಬಿ ನಾಲ್ಕನೇ ಸ್ಥಾನ ಪಡೆದು ಪ್ಲೇಆಫ್ ಟಿಕೆಟ್ ಅನ್ನು ಗೆದ್ದುಕೊಂಡಿತು.
ಆರ್ಸಿಬಿ ತಂಡ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಸಂತಸ ಮುಗಿಲುಮುಟ್ಟಿದೆ. ನಿನ್ನೆ ಮ್ಯಾಚ್ ಮುಗಿದಾಗ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳ ಜಯೋದ್ಘೋಷಕ್ಕೆ ಇಡೀ ಬೆಂಗಳೂರೇ ನಡುಗುವಂತಿತ್ತು. ಬೆಂಗಳೂರು ಮಾತ್ರವಲ್ಲದೇ ಗಲ್ಲಿ ಗಲ್ಲಿಗಳಲ್ಲಿ ಮಧ್ಯರಾತ್ರಿಯೇ ಅಭಿಮಾನಿಗಳ ಆರ್ಸಿಬಿ ಗೆಲುವನ್ನು ಸಂಭ್ರಮಿಸಿದ್ದಾರೆ.
ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಿಸಿದ್ದು, ಒಂದೆಡೆ ಚೆನ್ನೈ ವಿರುದ್ಧ ಗೆದ್ದರೆ ಮತ್ತೊಂದೆಡೆ ಪ್ಲೇಆಫ್ಗೆ ಪ್ರವೇಶಿಸಿದ್ದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಈ ಹಿನ್ನೆಲೆ ಗಲ್ಲಿ ಗಲ್ಲಿಗಳಲ್ಲಿ ಪಟಾಕಿ ಹೊಡೆದು ಆರ್ಸಿಬಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಈತನ್ಮಧ್ಯೆ ಬರೀ ಪ್ಲೇಆಫ್ಗೆ ಪ್ರವೇಶಿದ್ದಕ್ಕೇ ಇಷ್ಟೊಂದು ಸಂಭ್ರಮಿಸ್ತಿದ್ದೇವೆ, ಇನ್ನು ಕಪ್ ಗೆದ್ದರೆ ಎಷ್ಟರ ಮಟ್ಟಿಗೆ ಸಂಭ್ರಮ ಇರಲ್ಲ ಅಂತಾ ಆರ್ಸಿಬಿ ಫ್ಯಾನ್ಸ್ ಹೇಳ್ತಿದ್ದಾರೆ.
ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದಾಗಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡವು ನಿಗದಿತ 20 ಓವರ್ಗೆ 5 ವಿಕೆಟ್ ನಷ್ಟಕ್ಕೆ 218 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್ಗೆ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸುವ ಮೂಲಕ 27 ರನ್ ಗಳಿಂದ ಸೋಲನ್ನಪ್ಪಿತು. ಆ ಮೂಲಕ ಆರ್ಸಿಬಿ ಪ್ಲೇಆಫ್ ತಲುಪಿತು
ಇನ್ನು, ಆರ್ಸಿಬಿ ನೀಡಿದ 219 ರನ್ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರಂಭದಿಂದಲೇ ಬೆಂಗಳೂರು ತಂಡದ ಬೌಲಿಂಗ್ ಎದುರು ತೆಣಕಾಡಲು ಆರಂಭಿಸಿತು. ಇದರ ಪರಿಣಾಮವಾಗಿ ಮೊದಲ ಓವರ್ನ ಮೊದಲ ಎಸೆತದಲ್ಲಿ ಚೆನ್ನೈ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಶೂನ್ಯಕ್ಕೆ ಔಟ್ ಆಗುವ ಮೂಲಕ ಆರಂಭದಲ್ಲಿಯೇ ಆಘಾತಕ್ಕೆ ಎದುರಾಯಿತು.
ಬಳಿಕ ಡ್ಯಾರೆಲ್ ಮಿಚೆಲ್ 4 ರನ್ಗೆ ಔಟ್ ಆದರು. ಇನ್ನು, ರಚಿನ್ ರವೀಂದ್ರ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ರಚಿನ್ 37 ಎಸೆತದಲ್ಲಿ 3 ಸಿಕ್ಸ್ ಹಾಗೂ 5 ಫೋರ್ ಸಹಿತ 61 ರನ್ ಗಳಿಸಿದರು. ಇವರಿಗೆ ಅಜಿಂಕ್ಯಾ ರಹಾನೆ ಉತ್ತಮ ಸಾಥ್ ನೀಡದರೂ ಅದು ಕೆಲಕಾಲಕ್ಕೆ ಮಾತ್ರ ಸೀಮಿತವಾಯಿತು. ರಹಾನೆ 22 ಎಸೆತದಲ್ಲಿ 1 ಸಿಕ್ಸ್ ಹಾಗೂ 3 ಫೊರ್ ಮೂಲಕ 33 ರನ್ ಗಳಿಸಿ ಪೆವೆಲಿಯನ್ ಸೇರಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರಂಭದಿಂದಲೇ ಅಬ್ಬರದಿಂದ ಬ್ಯಾಟಿಂಗ್ ಮಾಡಿತು. ಆದರೆ ಪವರ್ ಪ್ಲೇ ಸಮಯದಲ್ಲಿ ಮಳೆಯಿಂದ ಕೆಲ ಕಾಲ ಸ್ಥಗಿತಗೊಂಡಿತ್ತು. ಬಳಿಕ ಆರಂಭವಾದರೂ ಸಹ ಸಂಪೂರ್ಣ ಪಿಚ್ ನಿಧಾನವಾಯಿತು. ಆದರೂ ಸಹ ಆರ್ಸಿಬಿ ಬ್ಯಾಟರ್ಗಳು ಮಾತ್ರ ಚೆನ್ನೈ ಬೌಲರ್ಗಳ ಬೆಂಡೆತ್ತಿದರು.