ಮೊಹಾಲಿ: ಇಲ್ಲಿನ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಹಾಗೂ ಪಂಜಾಬ್ ಕಿಂಗ್ಸ್ (Punjab Kings) ನಡುವಿನ ರಣರೋಚಕ ಪಂದ್ಯದಲ್ಲಿ ಕೆ.ಎಲ್.ರಾಹುಲ್ (KL Rahul) ನಾಯಕತ್ವದ ಲಕ್ನೋ ತಂಡ 56 ರನ್ಗಳ ಭರ್ಜರಿ ಜಯ ಸಾಧಿಸಿತು
ರನ್ ಹೊಳೆಯಲ್ಲಿ ತೇಲಾಡಿದ ಇತ್ತಂಡಗಳು ಕೊನೆಯವರೆಗೂ ಭರ್ಜರಿ ಬ್ಯಾಟಿಂಗ್ ನಡೆಸಿದವು. ಅಲ್ಲದೇ ಇದು ಐಪಿಎಲ್ನಲ್ಲಿ (IPL 2023) ಅತಿ ಹೆಚ್ಚು ರನ್ ದಾಖಲಾದ ಪಂದ್ಯ ಎನಿಸಿಕೊಂಡಿತು. ಆದ್ರೆ ಏಕೈಕ ತಂಡವಾಗಿ ಅತಿಹೆಚ್ಚು ರನ್ ಗಳಿಸಿ ನಂ.1 ಸ್ಥಾನದಲ್ಲಿರುವ ಆರ್ಸಿಬಿ ದಾಖಲೆ ಮುರಿಯುವಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿಫಲವಾಯಿತು.
2013ರ ಐಪಿಎಲ್ ಆವೃತ್ತಿಯಲ್ಲಿ ಪುಣೆ ವಾರಿಯರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 263 ರನ್ ಗಳಿಸಿತ್ತು. ಆದ್ರೆ ಎದುರಾಳಿ ಪುಣೆ ವಾರಿಯರ್ಸ್ 133 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು. ಈ ಪಂದ್ಯದಲ್ಲಿ ಆರ್ಸಿಬಿ 263 ರನ್ ಗಳಿಸಿದ್ದು ಈವರೆಗೆ ಯಾರೂ ಮುರಿಯದ ದಾಖಲೆಯಾಗಿದೆ. ಇದೀಗ ಲಕ್ನೋ ಸೂಪರ್ ಜೈಂಟ್ಸ್ ತಂಡ 257 ರನ್ ಗಳಿಸಿ 2ನೇ ಸ್ಥಾನಕ್ಕೇರಿದೆ. 7 ರನ್ಗಳ ಅಂತರದಲ್ಲಿ ನಂ1. ಪಟ್ಟದಿಂದ ತಪ್ಪಿಸಿಕೊಂಡಿದೆ. ವಿಶೇಷವೆಂದರೆ 3ನೇ ಸ್ಥಾನದಲ್ಲೂ ಆರ್ಸಿಬಿಯೇ (248 ರನ್ ಗಳಿಸಿ) ಇದ್ದು, 246 ರನ್ ಗಳಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ 4ನೇ ಸ್ಥಾನದಲ್ಲಿದೆ.
ದಾಖಲೆ ಬರೆದ ಕಿಂಗ್ಸ್, ಜೈಂಟ್ಸ್: 2023ರ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಪಂಜಾಬ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ಅತ್ಯಧಿಕ ರನ್ ಸಿಡಿಸಿದ ದಾಖಲೆ ಬರೆದಿದೆ. ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್ಸಿಬಿ ನಡುವಿನ ಪಂದ್ಯದಲ್ಲಿ 240 ಎಸೆತಗಳಲ್ಲಿ 444 ರನ್ ದಾಖಲಾಗಿತ್ತು. ಆದ್ರೆ ನಿನ್ನೆ ಪಂದ್ಯದಲ್ಲಿ 239 ಎಸೆತಗಳಲ್ಲಿ ಬರೋಬ್ಬರಿ 458 ರನ್ ದಾಖಲಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 257 ರನ್ ಗಳಿಸಿದರೆ, ಚೇಸಿಂಗ್ನಲ್ಲಿ ಪಂಜಾಬ್ 19.5 ಓವರ್ಗಳಲ್ಲಿ 201 ರನ್ ಗಳಿಸುವ ಮೂಲಕ ಪೈಪೋಟಿ ನೀಡಿತು.