ಬೆಂಗಳೂರು:- ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಮೊದಲ ಬಾರಿಗೆ RCM ತಂಡ ಟ್ರೋಫಿಯನ್ನು ಗೆದ್ದು, ಅಭಿಮಾನಿಗಳ ಆಸೆ ಈಡೇರಿಸಿದೆ.
ಆರ್ಸಿಬಿ ಜಯಗಳಿಸುತ್ತಿದ್ದಂತೆ ಬೆಂಗಳೂರಿನ ಹಲವೆಡೆ ಅಭಿಮಾನಿಗಳು ಪಟಾಕಿ ಸಿಡಿಸಿ ರಸ್ತೆಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಬೆಂಗಳೂರು ಮಾತ್ರವಲ್ಲ ದೆಹಲಿಯ ಮೆಟ್ರೋದಲ್ಲೂ ಅಭಿಮಾನಿಗಳ ಆರ್ಸಿಬಿ ಆರ್ಸಿಬಿ ಎಂದು ಹೇಳಿ ಘೋಷಣೆ ಮೊಳಗಿಸುತ್ತಿದ್ದರು.
ಈ ಸಂಭ್ರಮಕ್ಕೆ ಕಾರಣವೂ ಇತ್ತು. ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಗ್ಲೇನ್ ಮ್ಯಾಕ್ಸ್ವೆಲ್ರಂತಹ ಘಟಾನುಘಟಿ ಆಟಗಾರರಿದ್ದರೂ ಇಲ್ಲಿಯವರೆಗೆ ಕಪ್ ಗೆದ್ದಿರಲಿಲ್ಲ.
ಕಳೆದ 16 ಐಪಿಎಲ್ (IPL) ಟೂರ್ನಿ ಪೈಕಿ ಪುರುಷರ ತಂಡ 2009, 2011, 2016 ಫೈನಲ್ ಪ್ರವೇಶಿಸಿದ್ದರೂ ರನ್ನರ್ ಅಪ್ಗೆ ತೃಪ್ತಿಪಟ್ಟಿತ್ತು. ಆದರೆ ಮಹಿಳಾ ಪ್ರೀಮಿಯರ್ ಲೀಗ್ನ ಎರಡನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ಆರ್ಸಿಬಿ ಅಭಿಮಾನಿಗಳ ಬಹು ವರ್ಷದ ಕನಸು ಈಡೇರಿತು.