ಹಾಲಿವುಡ್ ನ ಆಪನ್ ಹೈಮರ್ ಚಿತ್ರಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರು ಚಿತ್ರದಲ್ಲಿನ ದೃಶ್ಯವೊಂದಕ್ಕೆ ಭಾರಿ ವಿವಾದ ಹುಟ್ಟಿಕೊಂಡಿದೆ. ಚಿತ್ರದಲ್ಲಿ ಸೆಕ್ಸ್ ಮಾಡುವ ವೇಳೆ ಕಥಾನಾಯಕ ಭಗವದ್ಗೀತೆಯ ಸಾಲುಗಳನ್ನು ಓದುವ ದೃಶ್ಯವಿದ್ದು, ಈ ದೃಶ್ಯವು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಚಿತ್ರದಲ್ಲಿ ಸೆಕ್ಸ್ ಇರುವ ದೃಶ್ಯದ ಕುರಿತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರತಿಕ್ರಿಯೆ ನೀಡಿದ್ದು, ‘ಈ ದೃಶ್ಯವನ್ನು ಸಿನಿಮಾದಲ್ಲಿ ಹೇಗೆ ಬಿಡಲಾಯಿತು ಎಂದು ಸೆನ್ಸಾರ್ ಮಂಡಳಿಯ ಅಧಿಕಾರಿಯನ್ನು ಕೇಳಲಾಗುವುದು. ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
‘ಆಪನ್ಹೈಮರ್’ ಸಿನಿಮಾದ ರಿಲೀಸ್ಗೂ ಮುನ್ನವೇ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ಜುಲೈ 21ರಂದು ರಿಲೀಸ್ ಆಗಿರೋ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವ ಸಿನಿಮಾದಲ್ಲಿನ ಸೆಕ್ಸ್ ದೃಶ್ಯವೊಂದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ರಿಲೀಸ್ ಆಗುವ ಮುನ್ನವೇ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಆಪನ್ಹೈಮರ್’ ಸಿನಿಮಾ, 2 ಸಾವಿರ ರೂಪಾಯಿಗೆ ಟಿಕೆಟ್ ಸೇಲ್ ಆಗಿತ್ತು. ರಿಲೀಸ್ ಬಳಿಕ ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಈ ಬೆನ್ನಲ್ಲೇ ಸಿನಿಮಾದಲ್ಲಿ ಹಿಂದೂ ಧರ್ಮಕ್ಕೆ ಅವಮಾನವಾಗಿದೆ ಎಂದು ಚಿತ್ರತಂಡದ ವಿರುದ್ಧ ಭಾರತೀಯರು ಗರಂ ಆಗಿದ್ದಾರೆ. ಹೀರೋ ಸೆಕ್ಸ್ ಮಾಡುವಾಗ ಭಗವದ್ಗೀತೆ ಹೇಳುವ ಸಂಭಾಷಣೆ ಬಗ್ಗೆ ಕೇಂದ್ರ ಸರ್ಕಾರದ ಮಾಹಿತಿ ಆಯುಕ್ತ ಉದಯ್ ಮಹುರ್ಕರ್ ತಕರಾರು ತೆಗೆದಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ‘ಆಪನ್ಹೈಮರ್’ ಚಿತ್ರತಂಡಕ್ಕೆ ಪ್ರಶ್ನೆ ಮಾಡಿದ್ದು, ಸದ್ಯದಲ್ಲೇ ಈ ದೃಶ್ಯಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ನಿತ್ಯ ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರು ಕುಡಿಯುತ್ತೀರಾ!? – ಸ್ತನ ಕ್ಯಾನ್ಸರ್ ಬರಬಹುದು ಎಚ್ಚರ