ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಗರ ಸಭಾ ಭವನದಲ್ಲಿ ಸಾಮಾನ್ಯ ಸಭೆ ನಡೆಯಿತು.
ರಬಕವಿ ಬನಹಟ್ಟಿ ನಗರದಲ್ಲಿ ಲೇಔಟಗಳು ಮತ್ತು ಸಾರ್ವಜನಿಕರ ಶೌಚಾಲಗಳದ್ದೇ ಒಂದು ಸದ್ದು ಕೇಳಿಬಂದಿದೆ.
ನಗರಸಭಾ ಅಧಿಕಾರಿಗಳ ನಿರ್ಲಕ್ಷದಿಂದ ರಿಯಲ್ ಎಸ್ಟೇಟ್ ಕೇಲಸ ಮಾಡುವವರು ಉದ್ಯಾವನ ನಿರ್ಮಿಸಲಾರದೆ ಫ್ಲಾಟಗಳನ್ನು ಹಾಕಿ ಮಾರಾಟ ಮಾಡುತ್ತಿದ್ದು ಇದರಿಂದ ನಮ್ಮ ನಗರಸಭೆಗೆ ಸಾಕಷ್ಟು ಆದಾಯದ ಹೊಡೆತ ಬೀಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಈಗಾಗಲೇ ನಿರ್ಮಾಣವಾಗಿರುವ ಲೇಔಟ್ ಗಳಿಗೆ ಉದ್ಯಾವನ ನಿರ್ಮಿಸಿದ ನಂತರ ಪ್ಲಾಟಿನ ಉತಾರ ನೀಡಬೇಕು ಮತ್ತು ನಮ್ಮ ಸದಸ್ಯರ ಗಮನಕ್ಕೆ ತರಲಾರದೆ ಉತಾರನ್ನು ನೀಡಿದರೆ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಸದಸ್ಯರು ಎಚ್ಚರಿಕೆ ನೀಡಿದರು.
31 ವಾರ್ಡ್ಗಳಲ್ಲಿ ಸುರಕ್ಷಿತವಾದ ಮತ್ತು ಸ್ವಸಜ್ಜಿತವಾದ ಸಾರ್ವಜನಿಕರಿಗೆ ಅನುಕೂಲವಾಗುವ ಶೌಚಾಲಯ ನಿರ್ಮಿಸಿ.
ರಬಕವಿ ಬನಹಟ್ಟಿ ರಾಂಪುರ ಹೊಸೂರ್ ನಗರದ ಜನತೆ ನಮಗೆ ಮತವನ್ನು ಕೊಟ್ಟು ಈ ನಗರವನ್ನು ಸೌಂದರ್ಯೀಕರಣ ಮಾಡಲು ನಮ್ಮನ್ನು ಆಯ್ಕೆ ಮಾಡಿ ಕಳಿಸಿದ್ದಾರೆ ನಗರವನ್ನು ಸೌಂದರೀಕರಣ ಮಾಡುವುದೇ ನಮ್ಮ ಮೂಲ ಉದ್ದೇಶ ನಮ್ಮ ನಗರಸಭಾ ಅಧಿಕಾರಿಗಳು ನಮ್ಮ ಸದಸ್ಯರ ಜೊತೆ ಕೈಜೋಡಿಸಿ ನಗರ ಸೌಂದರ್ಯಕ್ಕಾಗಿ ಕೆಲಸ ಮಾಡೋಣ ಎಂದು ಹೇಳಿದರು.
ನಗರದಲ್ಲಿ ಕೊಳವೆ ಬಾವಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಸಮಗ್ರವಾಗಿ ತನಿಖೆ ಮಾಡಿ ತಪ್ಪಿಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಸದಸ್ಯ ಯುನೂಸ್ ಚೌಗುಲ ಆಗ್ರಹಿಸಿದರು.
ಟೆಂಡರ್ ಪ್ರಕ್ರಿಯೆಯನ್ನು ಮಾರ್ಚ್ ದಿಂದ ಮಾರ್ಚ್ ಅವಧಿಗೆ ಆಗುವಂತೆ ಟೆಂಡರ್ ಪ್ರಕ್ರಿಯೆಯನ್ನು ನಡೆಸಿ ಮಧ್ಯಂತರ ಟೆಂಡರ್ ಮಾಡುವ ಅವಶ್ಯಕತೆ ಇಲ್ಲ ಎಂದು ಸದಸ್ಯ ಬಸವರಾಜ ಗುಡೋಡಗಿ ಹೇಳಿದರು.
ನಗರದಲ್ಲಿ ಸಾರ್ವಜನಿಕರಿಗೆ ಅಡ್ಡಿಯಾಗದಂತೆ ಶೌಚಾಲಯ ನಿರ್ಮಿಸಲು ಮೊದಲು ಆದ್ಯತೆ ನೀಡಿ.
ರಬಕವಿ ಬನಹಟ್ಟಿ ರಾಂಪುರ ಹೊಸೂರ ನಗರದಲ್ಲಿ ಇರುವ ಸ್ಮಶಾನಗಳಿಗೆ ದೀಪ ಮತ್ತು ಕುಡಿಯುವ ನೀರು ಸಾರ್ವಜನಿಕರಿಗೆ ಕೂಡಲು ಹಾಸನದ ವ್ಯವಸ್ಥೆ ನಿರ್ಮಿಸಬೇಕೆಂದು ಸದಸ್ಯ ಸಂಜಯ ತೆಗ್ಗಿ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ದಬಾಡಿ. ಉಪಾಧ್ಯಕ್ಷರಾದ ಶ್ರೀಮತಿ ದೀಪಾ ಗಾಡಿವ್ಡರ. ಸ್ಥಾಯಿ ಸಮಿತಿ ಚೇರ್ಮನ್ನರಾದ ಅರುಣ ಬುದ್ನಿ. ಪೌರಾಯ್ತಕರು ಜಗದೀಶ ಈಟಿ. ಸದಸ್ಯರಾದ ಯಲ್ಲಪ್ಪ ಕಟಗಿ. ಶ್ರೀಮತಿ ಬಾಳವ್ವಾ ಕಾಖಂಡಕಿ. ರಾಜು ಶಾಸ್ತ್ರಿಗೊಲ್ಲರ. ಶ್ರೀಮತಿ ಗೌರಿ ಮಿಳಿ.ವಿಜಯ ಕಲಾಲ. ಶ್ರೀಶೈಲ ಆಲಗೂರ. ಶ್ರೀಮತಿ ರೂಪ ಕೊರ್ತಿ ನಗರಸಭಾ ಸಿಬ್ಬಂದಿಗಳಾದ ಹಿಪ್ಪರಗಿ ಮುತ್ತು ಚೌಡಕರ ಶೋಭಾ ಹೊಸಮನಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.