ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ ಎರಡು ತಿಂಗಳಾಗಿದೆ. ಈ ಮಧ್ಯೆ ಪೊಲೀಸರು ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದ್ದು ಸದ್ಯದ ಮಟ್ಟಿಗೆ ದರ್ಶನ್ ಹೊರ ಬರುವುದು ಅನುಮಾನವೇ ಅನ್ನೋಮಾತು ಕೇಳಿ ಬರ್ತಿದೆ. ಈ ಮಧ್ಯೆ ಘಟನೆಯ ಕುರಿತು ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದು ಇದೀಗ ನಟಿ ಶರ್ಮಿಳಾ ಮಾಂಡ್ರೆ ಮಾತನಾಡಿದ್ದಾರೆ. ದರ್ಶನ್ ಪ್ರಕರಣವನ್ನು ಕಾನೂನು ನಿರ್ಧಾರ ಮಾಡುತ್ತದೆ ಎಂದಿದ್ದಾರೆ.
‘ನವಗ್ರಹ’ ಟೈಮ್ನಲ್ಲಿ ದರ್ಶನ್ ಅವರ ಜೊತೆ ಕೆಲಸ ಮಾಡಿರುವ ಅನುಭವ ಚೆನ್ನಾಗಿತ್ತು. ದರ್ಶನ್ ಅವರ ಫುಲ್ ಫ್ಯಾಮಿಲಿ ನನಗೆ ಚೆನ್ನಾಗಿ ಗೊತ್ತು. ‘ನವಗ್ರಹ’ ಚಿತ್ರವನ್ನು ದರ್ಶನ್ ತಮ್ಮ ದಿನಕರ್ ಸರ್ ಡೈರೆಕ್ಷನ್ ಮಾಡುತ್ತಿದ್ದರು. ಸೆಟ್ನಲ್ಲಿ ದರ್ಶನ್ ಸರ್ ಚೆನ್ನಾಗಿರುತ್ತಿದ್ದರು. 2007ರಲ್ಲಿ ‘ನವಗ್ರಹ’ ಶೂಟಿಂಗ್ ಆಗಿತ್ತು ಎಂದಿದ್ದಾರೆ.
ಇನ್ನೂ ಈ ಪ್ರಕರಣದ ಬಗ್ಗೆ ನನಗೆ ವಿಷಯ ಗೊತ್ತಿರಲಿಲ್ಲ. ಆದರೆ ಇತ್ತೀಚೆಗೆ ಗೊತ್ತಾಯ್ತು. ಆದರೆ ಇದರ ಬಗ್ಗೆ ಕಾನೂನು ನಿರ್ಧರಿಸಲಿ ಎಂದಷ್ಟೇ ಶರ್ಮಿಳಾ ಮಾಂಡ್ರೆ ಮಾತನಾಡಿದ್ದಾರೆ.