ಸಮಾಜದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ, ಗೌರವಿಸಿ, ಪ್ರೊತ್ಸಾಹಿಸಿದಾಗ ಅವರ ಪ್ರತಿಭೆಗೆ ಮೆರಗು ಬರುತ್ತದೆ ಎಂದು ರಬಕವಿ ಪಿಕೆಪಿಎಸ್ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ (ದಕ್ಷಿಣ ವಲಯ) ಕಾರ್ಯಾಲಯದಲ್ಲಿ ಸಿಎ ಪರಿಕ್ಷೇಯಲ್ಲಿ ತೇರ್ಗಡೆ ಹೊಂದಿದ ಬನಹಟ್ಟಿಯ ನಾಗೇಶ ಶ್ರೀಶೈಲ ಸುಂಕದ ಅವರನ್ನು ಸನ್ಮಾನಿಸಿ ಮಾತನಾಡಿದರು.
ನಮ್ಮ ಮಧ್ಯದಲ್ಲಿರುವ ಸಾಕಷ್ಟು ಪ್ರತಿಭೆಗಳು ಇರುತ್ತವೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿದಾಗ ಅವರ ಭವಿಷ್ಯ ಉಜ್ವಲವಾಗುತ್ತದೆ. ಸಾಧಕರ ಸಾಧನೆಗಳು ಅವರ ಯಶಸ್ಸಿನ ಯಶೋಗಾಥೆ ಮತ್ತು ಅವರು ಉನ್ನತ ಸ್ಥಾನಕ್ಕೆ ಏರುವಾಗ ಪಟ್ಟ ಕಠಿಣ ಶ್ರಮ ಇವೆಲ್ಲವೂ ಇಂದಿನ ಯುವಕ ಯುವತಿಯರಿಗೆ ದಾರಿದೀಪವಾಗಲಿವೆ ಎಂದರು.
ಈ ಸಂದರ್ಭದಲ್ಲಿ ಶ್ರೀಶೈಲ ದಲಾಲ, ಮಹಾದೇವ ದೂಪದಾಳ, ಪರಪ್ಪ ಪೂಜಾರಿ, ಬಾಬು ಮಹಾಜನ, ಸಾತಪ್ಪ ಬಾಗಿ, ಬಸಪ್ಪ ಮಲ್ಲೋಡಿ, ರಾಜು ಮುಶ್ಯಪ್ಪಗೋಳ, ಸದಾಶಿವ
ನಾಯಕ, ಬಿಡಿಸಿಸಿ ಬ್ಯಾಂಕಿನ ಕ್ಷೇತ್ರ ಸಿಬ್ಬಂದಿಗಳಾದ ಶಿವಾನಂದ ಪಾಟೀಲ, ಮುಖ್ಯ ಕಾರ್ಯನಿರ್ವಾಹಕರಾದ ಸದಾಶಿವ ಚಿಂಚಲಿ, ಅಮೋಘಸಿದ್ದ ಶಿರೋಳ, ಬಸವರಾಜ ಕರಿಜಾಡರ ಸೇರಿದಂತೆ ಅನೇಕರು ಇದ್ದರು.
ರಬಕವಿ-ಬನಹಟ್ಟಿ : ರಬಕವಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ (ದಕ್ಷಿಣ ವಲಯ) ಕಾರ್ಯಾಲಯದಲ್ಲಿ ಸಿಎ ಪರಿಕ್ಷೇಯಲ್ಲಿ ತೇರ್ಗಡೆ ಹೊಂದಿದ ಬನಹಟ್ಟಿಯ ನಾಗೇಶ ಶ್ರೀಶೈಲ ಸುಂಕದ ಅವರನ್ನು ಸನ್ಮಾನಿಲಾಯಿತು