ಅಪಿಯಾ: ಟಿ20 ಪಂದ್ಯವೊಂದರಲ್ಲಿ ಸೋಮೊವಾದ ಡೇರಿಯಸ್ ವಿಸ್ಸೆರ್ಅ ವರು ಒಂದೇ ಓವರ್ನಲ್ಲಿ 39 ರನ್ ಬಾರಿಸುವ ಮೂಲಕ ಯುವರಾಜ್ ಸಿಂಗ್ಅ ವರ ದಾಖಲೆ ಮುರಿದಿದ್ದಾರೆ.
ಸೋಮೊವಾ ತಂಡದ ಪರವಾಗಿ ಡೇರಿಯಸ್ ವಿಸ್ಸೆರ್ ಆಡುತ್ತಿದ್ದರು. ಅಪಿಯಾದಲ್ಲಿ ನಡೆಯುತ್ತಿರುವ ಟಿ20 ಪಂದ್ಯದಲ್ಲಿ ವನವಾಟು ತಂಡದ ವಿರುದ್ಧ ಆಟವಾಡಿದ ಅವರು 15ನೇ ಓವರ್ವೊಂದರಲ್ಲೇ 39 ರನ್ ಚಚ್ಚಿದ್ದರು. ಈ ಮೂಲಕ ಅವರು ಯುವರಾಜ್ ಸಿಂಗ್ ಮತ್ತು ಕ್ರಿಸ್ ಗೇಲ್ ಅವರ ದಾಖಲೆ ಮುರಿದಿದ್ದಾರೆ.
ನಳಿನ್ ನಿಪೀಕೊ ಎಸೆದ 15ನೇ ಓವರ್ನಲ್ಲಿ 39 ರನ್ ಬಂದಿದೆ. ನೀಪಿಕೊ ಎಸೆದ ಮೊದಲ ಮೂರು ಬಾಲ್ಗಳನ್ನು ವಿಸ್ಸೆರ್ ಹ್ಯಾಟ್ರಿಕ್ ಸಿಕ್ಸ್ ಬಾರಿಸಿದರು. ಇದರಿಂದ ಕೊಂಚ ಮಾನಸಿಕವಾಗಿ ಕುಗ್ಗಿದ ನೀಪಿಕೊ ನಾಲ್ಕನೇ ಎಸೆತ ನೋ ಬಾಲ್ಹಾ ದರು. ನಂತರದ ಬಾಲ್ ಫ್ರೀ ಹಿಟ್ಸಿ ಕ್ಕ ಕಾರಣ ವಿಸ್ಸೆರ್ ಮತ್ತೆ ಸಿಕ್ಸ್ ಸಿಡಿಸಿದರು.
ಐದನೇ ಬಾಲ್ ಡಾಟ್ ಆಗಿದ್ದರಿಂದ ವನವಾಟು ತಂಡದ ಆಟಗಾರರು ಸ್ವಲ್ಪ ನಿಟ್ಟುಸಿರು ಬಿಟ್ಟರು. ಆದರೆ ಅವರ ಸಂತಸ ಹೆಚ್ಚು ಸಮಯವಿರಲಿಲ್ಲ. ಆರನೇ ಎಸೆತ ನೋಬಾಲ್ ಆಗಿದ್ದರಿಂದ ಇತರೇ ರೂಪದಲ್ಲಿ 1 ರನ್ ಬಂತು. ನಂತರದ ಫ್ರಿ ಹಿಟ್ ಎಸೆತ ನೋಬಾಲ್ ಆಗಿದ್ದರಿಂದ 7 ರನ್ ಬಂತು. ಕೊನೆಯ ಎಸೆತವನ್ನು ವಿಸ್ಸೆರ್ ಸಿಕ್ಸರ್ಗೆ ಅಟ್ಟಿದ ಪರಿಣಾಮ ಒಂದೇ ಓವರ್ನಲ್ಲಿ 39 ರನ್ ಬಂದಿದೆ
2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ಅ ವರ 6 ಎಸೆತವನ್ನು ಸಿಕ್ಸರ್ಗೆ ಅಟ್ಟಿ ವಿಶ್ವ ದಾಖಲೆ ನಿರ್ಮಿಸಿದ್ದರು.