ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿದ್ಯುತ್ ಬಳಕೆಯಲ್ಲಿ ದಾಖಲೆಯ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅತಿಹೆಚ್ಚು ಕರೆಂಟ್ ಬಳಕೆಯಾಗಿರುವುದು ತಿಳಿದು ಬಂದಿದೆ. ಹೀಗೆ ಮುಂದುವರೆದರೆ ಬೇಸಿಗೆಗಾಲದಲ್ಲಿ ಲೋಡ್ ಶೆಡ್ಡಿಂಗ್ ಘೋಷಣೆಯಾಗುತ್ತಾ ಎಂಬ ಆತಂಕ ಶುರುವಾಗಿದೆ.
ಬೇಸಿಗೆ ಆರಂಭದಲ್ಲಿಯೇ ಸೂರ್ಯ ನೆತ್ತಿ ಸುಡುತ್ತಿದ್ದಾನೆ. ರಣ ಬಿಸಿಲಿಗೆ ಸಿಲಿಕಾನ್ ಸಿಟಿ ಮಂದಿ ಸೊರಗಿ ಹೋಗುತ್ತಿದ್ದಾರೆ. ಅದರಲ್ಲೂ ಈ ಬಾರಿ ಬೇಸಿಗೆ ಆರಂಭದಲ್ಲಿಯೇ ಧಗೆ ಸ್ವಲ್ಪ ಹೆಚ್ಚಾಗಿ ಕಾಡುತ್ತಿದೆ. ಬಿರು ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಜನರು ಫ್ಯಾನ್, ಏಸಿ ಕೂಲರ್ ಮೊರೆ ಹೋಗಿದ್ದಾರೆ. ಇದರಿಂದ ವಿದ್ಯುತ್ ಬಳಕೆಯಲ್ಲಿ ಬೆಂಗಳೂರು ಜನ ಹೊಸ ದಾಖಲೆ ಮಾಡಿದ್ದಾರೆ. ಹೀಗಾಗಿ ಲೋಡ್ ಶೆಡ್ಡಿಂಗ್ನ ಆತಂಕ ಶುರುವಾಗಿದೆ
ಇನ್ಮುಂದೆ ಬೆಂಗಳೂರು ಸೇರಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧ!
ಬಿಸಿಲಿನ ಹಬೆಯಿಂದ ಬೆಂದಿರುವ ಜನರು ಫ್ಯಾನ್, ಏರ್ ಕಂಡಿಷನ್, ಏರ್ ಕೂಲರ್ ಬಳಸುವುದು ಹೆಚ್ಚಾಗಿದೆ. ಇದರಿಂದ ಬೆಂಗಳೂರು ವ್ಯಾಪ್ತಿಯಲ್ಲಿ ದಾಖಲೆಯ ವಿದ್ಯುತ್ ಬಳಕೆಯಾಗಿದೆ. ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸಾರ್ವಕಾಲಿಕ ಗರಿಷ್ಠ 8,128 ಮೆಗಾ ವ್ಯಾಟ್ ವಿದ್ಯುತ್ ಬಳಸುವ ಮೂಲಕ ಬೆಂಗಳೂರಿಗರು ಹೊಸ ರೆಕಾರ್ಡ್ ಸೃಷ್ಟಿಸಿದ್ದಾರೆ
ಕಳೆದ ವರ್ಷ ಫೆಬ್ರವರಿಯಲ್ಲಿ 7,496 ಮೆಗಾ ವ್ಯಾಟ್ ವಿದ್ಯುತ್ ಬಳಕೆಯಾಗಿತ್ತು. ಆದರೆ ಈ ವರ್ಷ ಫೆಬ್ರವರಿಯಲ್ಲಿ 632 ಮೆಗಾ ವ್ಯಾಟ್ ಹೆಚ್ಚಾಗಿದ್ದು 8,128 ಮೆಗಾ ವ್ಯಾಟ್ ಬಳಕೆಯಾಗಿದೆ. ಈ ಮೂಲಕ ಆಲ್ ಟೈಂ ರೆಕಾರ್ಡ್ ಬ್ರೇಕ್ ಆಗಿದೆ. ಏಸಿ, ಫ್ಯಾನ್ ಸಹ ಹೆಚ್ಚಾಗಿ ರನ್ ಆಗಿದ್ದು ವಿದ್ಯುತ್ ಹೆಚ್ಚಿನ ಬಳಕೆಗೆ ಕಾರಣ ಎನ್ನಲಾಗಿದೆ. ಅಲ್ಲದೇ ಹೆಚ್ಚುತ್ತಿರುವ ತಾಪಮಾನದಿಂದ ಜನರು, ಕೈಗಾರಿಕೆಗೆ ಹಾಗೂ ಮೋಟಾರ್ ಉಪಕರಣಗಳಿಗೆ ವಿದ್ಯುತ್ ಬಳಸಿದ್ದಾರೆ. ಅನಾವಶ್ಯಕವಾಗಿ ವಿದ್ಯುತ್ ಬಳಕೆ ಮಾಡದಂತೆ ಜಾಗ್ರತೆ ವಹಿಸಲು ಬೆಸ್ಕಾಂ ಮನವಿ ಮಾಡಿದೆ.