ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಕೆಂಪಣ್ಣ ಆರೋಪ ಮಾಡಿದ ವಿಚಾರ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲೂ 40% ಕಮಿಷನ್ ಕೇಳುವ ಆರೋಪ ಕೆಂಪಣ್ಣ ಬಳಿ ಏನಾದ್ರೂ ದಾಖಲೆ ಇದ್ರೆ ಕೊಡಲಿ ಹಾಗೆ ಆ ರೀತಿ ಏನಾದರೂ ಇದ್ರೆ ದಾಖಲೆ ಕೊಡಲಿ ಎಂದು ಹೇಳಿದರು.
ಈಗಾಗಲೇ ನಾವು ತನಿಖೆಗೆ ಆಯೋಗವನ್ನು ರಚನೆ ಮಾಡಿದ್ದೇವೆ ಕಂಪಣ್ಣ ಹತ್ತಿರ ಕಮಿಷನ್ ಕೇಳಿರುವ ಬಗ್ಗೆ ದಾಖಲೆ ಇದ್ರೆ ಕೊಡಲಿ ದಾಖಲೆಗಳಿದ್ದರೆ ತನಿಖೆ ಮಾಡ್ತಿರುವ ಅಯೋಗಕ್ಕೆ ನೀಡಲಿ ಸಣ್ಣತಪ್ಪು ಆಗಿದ್ರೂ ದಾಖಲೆ ನೀಡಲಿ ಎಂದ ಪ್ರಿಯಾಂಕ್ ಖರ್ಗೆ ಕಮಿಷನ್ ಆರೋಪದ ಬಗ್ಗೆ ಹೇಳಿದರು
ಹಾಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿ, ನಮ್ಮ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ -ಸಾರಿಗೆ ಸಚಿವ ಬಿಜೆಪಿಯವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಬೊಮ್ಮಾಯಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ -ರಾಮಲಿಂಗಾರೆಡ್ಡಿ ನನ್ನ ಜೀವನದಲ್ಲೇ ಅಂತಹ ಸರ್ಕಾರ ನೋಡಿರಲಿಲ್ಲ ಎಂದ ಸಚಿವ ಮೂರು ವರ್ಷದಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಬಿಜೆಪಿಯವರು ಸಾಲದ ಗ್ಯಾರಂಟಿಯನ್ನು ಕೊಟ್ಟಿದ್ದಾರೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಿಡಿ ಕಾರಿದರು.