ಮೈಸೂರು: ದಕ್ಷಿಣ ಭಾರತದ ಮೇಲೆ ಉತ್ತರ ಭಾರತದವರ ಯಜಮಾನಿಕೆ ಜಾಸ್ತಿಯಾಗುತ್ತಿದೆ. ಕರ್ನಾಟಕದ ಮೇಲೆ ಕೇಂದ್ರದ ಯಜಮಾನಿಕೆ ಹೆಚ್ಚಾಗುತ್ತಿದೆ. ಪ್ರತಿಯೊಂದು ವಿಚಾರಕ್ಕೂ ಜಿಎಸ್ಟಿ ಪಾವತಿ ಮಾಡಬೇಕಾಗಿದೆ. ಅಗತ್ಯ ವಸ್ತುಗಳ ಬೆಲೆ ಏರುತ್ತಿದ್ದು, ಹೆಣ್ಣು ಮಕ್ಕಳು ಶಾಪ ಹಾಕುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಲ್ಲಿ ಮಾತನಾಡಿದ ಅವರು, ರಾಜ್ಯದ ಜಿಎಸ್ಟಿ ಪಾಲು ಸರಿಯಾಗಿ ಸಿಗುತ್ತಿಲ್ಲ. ನಮ್ಮ ರಾಜ್ಯದ ಜಿಎಸ್ಟಿ ಪಾಲು ಉತ್ತರದ ರಾಜ್ಯಗಳತ್ತ ಹರಿದು ಹೋಗುತ್ತಿದೆ. ನಮ್ಮ ಹೆಮ್ಮೆಯ ಅಸ್ಮಿತೆ ನಂದಿನಿಯ ಮೇಲೂ ಕಣ್ಣು ಬಿದ್ಧಿದೆ. ಉತ್ತರದವರ ಯಜಮಾನಿಕೆಯಿಂದ ನಾವು ತತ್ತರಿಸುವಂತಾಗಿದೆ ಎಂದು ಕಿಡಿಕಾರಿದರು.
ಪ್ರತಾಪ್ ಸಿಂಹ ನಿನ್ನ ದರ್ಪ ತೋರಿಸಬೇಡ, ಮಾಧ್ಯಮದ ಮುಂದೆ ನಿನ್ನ ವರಸೆ ಸಲ್ಲದು. ನೀನೇನು ಬೆತ್ತಲೆ ಜಗತ್ತು ಬರೆಯೋದು. ನಿನ್ನನ್ನು ನಾನೇ ಬೆತ್ತಲೆ ಮಾಡುತ್ತೇನೆ. ನಿನ್ನ ಕರ್ಮಕಾಂಡ ನನ್ನ ಬಳಿಯಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಂಎಲ್ಸಿ ಎಚ್ ವಿಶ್ವನಾಥ್ ಟೀಕೆ ಮಾಡಿದರು.