ನವದೆಹಲಿ:- ಪಿಜ್ಜಾ ವಿಚಾರಕ್ಕೆ ಒಂದೇ ಕುಟುಂಬದ ಇಬ್ಬರು ಮಹಿಳೆಯರ ನಡುವೆ ಮಾರಾಮಾರಿ ನಡೆದ ಘಟನೆ ದೆಹಲಿಯ ಸೀಲಂಪುರ್ ಪ್ರದೇಶದಲ್ಲಿ ಜರುಗಿದೆ
ಸೀಲಾಂಪುರ ಪ್ರದೇಶದಲ್ಲಿ ಪಿಜ್ಜಾ ತಿನ್ನುವ ವಿಚಾರಕ್ಕೆ ಜಗಳ ಸಂಭವಿಸಿದೆ ಮತ್ತು ಗುಂಡುಗಳನ್ನು ಹಾರಿಸಲಾಗಿದೆ.
ಅತ್ತಿಗೆ ಮತ್ತು ನಾದಿನಿಯ ನಡುವೆ ಅವರ ಅತ್ತೆಯ ಮನೆಯಲ್ಲಿ ಜಗಳ ನಡೆದ ನಂತರ ಅತ್ತಿಗೆ ತನ್ನ ಅಣ್ಣನನ್ನು ಕರೆದರು. ಆಗ ಅವರೆಲ್ಲರ ನಡುವೆ ವಾಗ್ವಾದ ನಡೆದಿದೆ. ಜೀಶಾನ್ ಎಂಬ ಅಣ್ಣ ತನ್ನ ಮನೆಯಲ್ಲಿ ಪಿಜ್ಜಾ ತಂದು ತಮ್ಮ ಮತ್ತು ಅವನ ಕುಟುಂಬಕ್ಕೆ ವಿತರಿಸಲು ಪ್ರಾರಂಭಿಸಿದನು.
ಜೀಶಾನ್ ಪಿಜ್ಜಾ ಹಂಚಿದ್ದಕ್ಕೆ ಆತನ ಪತ್ನಿ ಕೋಪಗೊಂಡರು. ಇದೇ ವಿಚಾರಕ್ಕೆ ಜಗಳ ಉಂಟಾಯಿತು. ಕೊನೆಗೆ ಆಕೆಯ ಅತ್ತಿಗೆ ತನ್ನ ಅಣ್ಣನನ್ನು ಮನೆಗೆ ಕರೆದರು. ಆಗ ಆತನೂ ಬಂದು ಜಗಳವಾಡಿ, ಕೋಪದಿಂದ ಜೀಶಾನ್ನ ಹೆಂಡತಿಯ ಮೇಲೆ ಗುಂಡು ಹಾರಿಸಿದ್ದಾನೆ. ಆಕೆಗೆ ಗಂಭೀರ ಗಾಯಗಳಾಗಿವೆ. ಮಹಿಳೆಯ ಹೊಟ್ಟೆಗೆ ಗುಂಡು ಹಾರಿಸಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು.