ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರು ಪತ್ನಿ ಸೈರಾ ಭಾನು ಅವರಿಗೆ ವಿಚ್ಚೇಧನ ಘೋಷಿಸಿದ್ದಾರೆ. ಈ ಮೂಲಕ 29 ವರ್ಷಗಳ ಸಂಸಾರಿಕ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ರೆಹಮಾನ್ ವಿಚ್ಚೇಧನದ ಸುದ್ದಿ ಸದ್ದು ಮಾಡುತ್ತಿದ್ದಂತೆ ಅವರದ್ದೇ ತಂಡದಲ್ಲಿದ್ದ ಮೋಹಿನಿ ಡೇ ಕೂಡ ತಮ್ಮ ಪತಿಗೆ ವಿಚ್ಚೇದನ ನೀಡಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. ಕೆಲವೇ ಗಂಟೆಗಳ ಅಂತರದಲ್ಲಿ ಈ ಎರಡೂ ಡಿವೋರ್ಸ್ ಘೋಷಣೆ ಆಗಿದ್ದು, ಅನೇಕರು ಈ ಎರಡು ಪ್ರಕರಣಗಳ ಮಧ್ಯೆ ಲಿಂಕ್ ಮಾಡಲು ಶುರು ಮಾಡಿದ್ದಾರೆ. ಈ ಬಗ್ಗೆ ಸೈರಾ ಬಾನು ವಕೀಲರು ಸ್ಪಷ್ಟನೆ ನೀಡಿದ್ದು, ಎರಡೂ ಪ್ರಕರಣಗಳ ಮಧ್ಯೆ ಯಾವುದೇ ಲಿಂಕ್ ಇಲ್ಲ ಎಂದಿದ್ದಾರೆ.
ಸೈರಾ ಬಾನು ರೆಹಮಾನ್ ರಿಂದ ದೂರವಾಗುತ್ತಿರುವ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಮೋಹಿನಿ ಡೇ ಕೂಡ ತಮ್ಮ ಪತಿ ಮಾರ್ಕ್ ಅವರಿಂದ ಬೇರೆ ಆಗುತ್ತಿರುವುದಾಗಿ ಹೇಳಿದ್ದಾರೆ. ಇದನ್ನು ಕೆಲವರು ಲಿಂಕ್ ಮಾಡಿದ್ದಾರೆ. ಇಬ್ಬರ ಮಧ್ಯೆ ಏನೋ ನಡೆದಿರಬಹುದು ಇದೇ ಕಾರಣಕ್ಕೆ ಎರಡು ಜೋಡಿಗಳು ದೂರ ದೂರವಾಗಿದ್ದಾರೆ ಎಂದಿದ್ದರು. ಇದೀಗ ಸೈರಾ ಬಾಬು ಸ್ಪಷ್ಟನೆ ನೀಡಿದ್ದಾರೆ.
‘ಈ ಎರಡೂ ಪ್ರಕರಣಗಳ ಮಧ್ಯೆ ಯಾವುದೇ ಕನೆಕ್ಷನ್ ಇಲ್ಲ. ಸೈರಾ ಹಾಗೂ ರೆಹಮಾನ್ ಅವರದ್ದು ಇದು ಸ್ವಂತ ನಿರ್ಧಾರ’ ಎಂದು ಹೇಳಿದ್ದಾರೆ ಸೈರಾ ಪರ ವಕೀಲೆ ವಂದನಾ. ‘ಮದುವೆ ಆಗಿ ಹಲವು ವರ್ಷಗಳ ಬಳಿಕ ಜೀವನದಲ್ಲಿ ಏರಿಳಿತ ಇದ್ದೇ ಇರುತ್ತದೆ. ಇಬ್ಬರೂ ಒಳ್ಳೆಯ ರೀತಿಯಲ್ಲಿ ಸಂಬಂಧ ಕೊನೆ ಮಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಬೆಂಬಲ ನೀಡಿಕೊಳ್ಳುವುದಾಗಿ ಹೇಳಿದ್ದಾರೆ’ ಎಂದಿದ್ದಾರೆ ಸೈರಾ.
ಸದ್ಯ ವಂದನಾ ಅವರು ಸೈರಾ ಹಾಗೂ ರೆಹಮಾನ್ ಅವರ ಸಂಬಂಧ ಕೊನೆ ಆಗಲು ಕಾರಣ ಏನು ಎಂಬುದನ್ನು ರಿವೀಲ್ ಮಾಡಿಲ್ಲ. ‘ಅವರ ವಿಚ್ಛೇದನವು ಸೌಹಾರ್ದಯುತವಾಗಿದೆ ಮತ್ತು ಸದ್ಯಕ್ಕೆ ಹಣಕಾಸಿನ ಅಂಶದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನೂ ರೆಹಮಾನ್ ತಂಡದ ಜೊತೆ ಗುರುತಿಸಿಕೊಂಡಿರುವ ಕೋಲ್ಕತ್ತಾ ಮೂಲಕ 29 ವರ್ಷದ ಮೋಹಿನಿ ಬಾಸಿಸ್ಟ್ ಪ್ಲೇಯರ್ ಆಗಿದ್ದು, ಗಾನ್ ಬಾಂಗ್ಲಾ ಅವರ ವಿಂಡ್ ಆಫ್ ಚೇಂಜ್ನಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ. ವಿಶ್ವಾದ್ಯಂತ 40 ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ರೆಹಮಾನ್ ಅವರೊಂದಿಗೆ ಮೋಹಿನಿ ನೀಡಿದ್ದಾರೆ. ಆಗಸ್ಟ್ 2023 ರಲ್ಲಿ ಅವರ ಚೊಚ್ಚಲ ಆಲ್ಬಂ ಅನ್ನು ಬಿಡುಗಡೆ ಮಾಡಿದ್ದಾರೆ.