ಬಾಲಿವುಡ್ ನಟಿ ರಾಖಿ ಸಾವಂತ್ ಪತಿಯ ಕುರಿತು ನಿತ್ಯ ಒಂದಲ್ಲ ಒಂದು ಹೇಳಿಕೆಯನ್ನು ನೀಡುತ್ತಲೇ ಇರುತ್ತಾರೆ. ಸದ್ಯದಲ್ಲೇ ರಂಜಾನ್ ಹಬ್ಬ ಬರುತ್ತಿರುವ ಹಿನ್ನೆಲೆಯಲ್ಲಿ ಪತಿಯನ್ನು ರಿಲೀಸ್ ಮಾಡಿ ಎಂದು ಕಣ್ಣೀರಿಟ್ಟಿದ್ದಾರೆ.
ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಮಾತನಾಡಿರುವ ನಟಿ ರಾಖಿ ಸಾವಂತ್, ತಾವು ಮುಸ್ಲಿಂ ಧರ್ಮಕ್ಕೆ ಮತಾಂತಗೊಂಡಿದ್ದರಿಂದ ಈ ಬಾರಿ ಉಮ್ರಾಗೆ ಹೋಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಮುಸ್ಲಿಮರ ಪವಿತ್ರ ಸ್ಥಳವಾಗಿರುವ ಉಮ್ರಾನಲ್ಲಿ ಪತಿ ಆದಿಲ್ ಖಾನ್ ಗಾಗಿ ಪ್ರಾರ್ಥಿಸುವೆ ಎಂದಿದ್ದು, ರಂಜಾನ್ ಇರುವುದರಿಂದ ಪತಿಯನ್ನು ಕ್ಷಮಿಸಿರುವೆ. ಹಾಗಾಗಿ ಆತನನ್ನು ಬೇಗನೇ ಜೈಲಿನಿಂದ ಬಿಡುಗಡೆ ಮಾಡಿ ಎಂದು ಕೇಳಿಕೊಂಡಿದ್ದಾರೆ.
ರಾಖಿ ಸಾವಂತ್ ಮಾತಿಗೆ ಗೊಂದಲಕ್ಕೀಡಾಗಿದ್ದಾರೆ ಅಭಿಮಾನಿಗಳು. ಮೈಸೂರಿನ ಹುಡುಗ ಆದಿಲ್ ಖಾನ್ ನಿಂದ ರಾಖಿಗೆ ಮೋಸವಾಗಿದೆ ಎಂದು ಹೇಳುತ್ತಿದ್ದವರು, ಇದೀಗ ರಾಖಿ ಆಡಿದ ಮಾತಿನಿಂದಾಗಿ ತಲೆಚಚ್ಚಿಕೊಳ್ಳುತ್ತಿದ್ದಾರೆ. ಈವರೆಗೂ ಆದಿಲ್ ಗೆ ಶಿಕ್ಷೆಯಾಗಬೇಕು, ಅವನು ಜೈಲಿನಲ್ಲಿ ಇರಬೇಕು, ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಕ್ಯಾಮೆರಾ ಮುಂದೆ ಹೇಳುತ್ತಿದ್ದ ರಾಖಿ, ಈಗ ಉಲ್ಟಾ ಹೊಡೆದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಇಂದು ಬೆಳಗ್ಗೆ ಪ್ರಾರ್ಥನೆ ಮಾಡುವಾಗ ಒಂದು ಆಲೋಚನೆ ಹೊಳೆಯಿತು. ರಂಜಾನ್ ಅಂದರೆ, ಅದು ಕ್ಷಮಿಸುವ ಹಬ್ಬ. ಏನೇ ನೋವನ್ನುಂಟು ಮಾಡಿದರೂ ಕ್ಷಮಿಸಿಬಿಡಿ ಎಂದು ಹೇಳುತ್ತದೆ ಪ್ರಾರ್ಥನೆ. ಹಾಗಾಗಿ ನಾನು ಆದಿಲ್ ಬಗ್ಗೆ ಸಾಫ್ಟ್ ನಿಲುವು ಪಡೆದಿದ್ದೇನೆ. ನಾನು ಅವನಿಗೆ ಕ್ಷಮಿಸದೇ ಇರಬಹುದು. ಆದರೆ, ಅವನಿಗೆ ಬೇಲ್ ಸಿಗಲಿ’ ಎಂದು ಪ್ರಾರ್ಥಿಸಿದೆ ಎಂದಿದ್ದಾರೆ.