ಹಿಂದೂ ಧರ್ಮದಲ್ಲಿ, ಪೂಜೆ ಮತ್ತು ಧಾರ್ಮಿಕ ಆಚರಣೆಗಳಲ್ಲಿ ದೀಪವನ್ನು ಬೆಳಗಿಸುವುದಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಪೂಜೆ-ಪುನಸ್ಕಾರ ಅಥವಾ ಶುಭ ಕಾರ್ಯಕ್ರಮಗಳಲ್ಲಿ ದೀಪವನ್ನು ಹಚ್ಚುವುದು ಬಹಳ ಮುಖ್ಯವಾದ ಕೆಲಸವೆಂದು ಪರಿಗಣಿಸಲಾಗಿದೆ. ಋಗ್ವೇದ ಕಾಲದಿಂದಲೂ ಕಲಿಯುಗದವರೆಗೂ ದೀಪಗಳನ್ನು ಹಚ್ಚುವ ಸಂಪ್ರದಾಯ ನಡೆದುಕೊಂಡು ಬಂದಿದೆ.
ವೇದಗಳಲ್ಲಿ, ಅಗ್ನಿಯನ್ನು ನೇರ ದೇವತೆ ಎಂದು ಪರಿಗಣಿಸಲಾಗಿದೆ.
ಅದರಂತೆ ಹೆಣ್ಣು ಮಕ್ಕಳೇ, ದೇವರಿಗೆ ದೀಪ ಹಚ್ಚುವಾಗ ಇದು ನೆನಪಿರಲಿ: ಸಂಪತ್ತಿನ ಹೊಳೆಯೇ ಹರಿದು ಬರುತ್ತೆ!
ಹಿಂದೂ ಧರ್ಮದ ಪ್ರತಿಯೊಂದು ಮನೆಯಲ್ಲೂ ಸಂಜೆ ಮತ್ತು ಮುಂಜಾನೆ ಎರಡು ಸಮಯದಲ್ಲಿ ದೀಪವನ್ನು ಬೆಳಗಿಸಲಾಗುತ್ತದೆ. ಕೇವಲ ದೇವರ ಕೋಣೆಯಲ್ಲಿ ಮಾತ್ರವಲ್ಲ ತುಳಸಿಯ ಮುಂದೆ ಕೂಡ ದೀಪವನ್ನು ಬೆಳಗುವ ಸಾಂಪ್ರದಾಯ ಹಿಂದೂ ಧರ್ಮದಲ್ಲಿದೆ. ದೀಪವನ್ನು ಬೆಳಗುವಾಗ ಸರಿಯಾದ ದಿಕ್ಕಿನಲ್ಲಿ ದೀಪ ಬೆಳಗುವುದು ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ದೀಪವನ್ನು ಬೆಳಗುವುದಕ್ಕೆ ಅದರದ್ದೇ ಆದ ನಿಯಮಗಳಿವೆ.ಈ ನಿಯಮಗಳಿಗೆ ಅನುಗುಣವಾಗಿ ದೀಪವನ್ನು ಬೆಳಗುವುದರಿಂದ ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದು
1. ದೀಪ ಬೆಳಗುವಾಗ ಈ ಮಂತ್ರ ಪಠಿಸಿ:
ದೀಪಜ್ಯೋತಿಃ ಪರಬ್ರಹ್ಮಃ
ದೀಪಜ್ಯೋತಿಃ ಜನಾರ್ದನಃ
ದೀಪೋಹರ್ತಿಮೇ ಪಾಪಂ ಸಂಧ್ಯಾದೀಪಂ ನಮೋಸ್ತುತೇ…
ಶುಭಂ ಕರೋತು ಕಲ್ಯಾಣಮಾರೋಗ್ಯಂ ಸುಖಂ ಸಂಪದಾಂ
ಶತ್ರುವೃದ್ಧಿ ವಿನಾಶಂ ಚ ದೀಪಜ್ಯೋತಿಃ ನಮೋಸ್ತುತಿ…
2. ದೀಪ ಬೆಳಗುವುದಕ್ಕೆ ಸಂಬಂಧಿಸಿದ ನಿಯಮಗಳು:
ದೀಪ ಬೆಳಗಿದಾಗ ಅದರ ಮುಖವನ್ನು ಉತ್ತರ ದಿಕ್ಕಿಗೆ ಇಡುವುದು ನಿಮಗೆ ಆರ್ಥಿಕ ಲಾಭವನ್ನು ತರುತ್ತದೆ.
ಮಂಗಳಾರತಿ ಮಾಡುವ ಸಮಯದಲ್ಲಿ ದೀಪವನ್ನು ಬೆಳಗಿಸುವುದು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ.
;>- ಮುಂಜಾನೆ ನೀವು ದೇವರಿಗೆ ದೀಪವನ್ನು ಹಚ್ಚುವುದಾದರೆ ಬೆಳಿಗ್ಗೆ 5:00ಗಂಟೆಯಿಂದ 10 ಗಂಟೆಯ ಒಳಗೆ ದೀಪವನ್ನು ಹಚ್ಚಬೇಕು. ಹಾಗೂ ಸಂಜೆ 6:30ರ ಒಳಗೆ ದೀಪವನ್ನು ಹಚ್ಚಬೇಕು.
>- ಸೂರ್ಯಸ್ತದ ನಂತರ ಅಂದರೆ ಮುಸ್ಸಂಜೆ ಸಮಯದಲ್ಲಿ ದೀಪವನ್ನು ಬೆಳಗಿಸಲು ಪ್ರದೋಷ ಕಾಲವನ್ನುಆಯ್ದುಕೊಳ್ಳಿ.
>- ಧರ್ಮಗ್ರಂಥಗಳ ಪ್ರಕಾರ, ಪ್ರದೋಷಕಾಲವು ಸೂರ್ಯಾಸ್ತದಿಂದ 2 ಗಂಟೆಗಳವರೆಗೆ (48 ನಿಮಿಷಗಳು) ಇರುತ್ತದೆ.
ಮಣ್ಣಿನಿಂದ ಮಾಡಿದ ಅಥವಾ ಹಿತ್ತಾಳೆಯಂತಹ ಲೋಹದಿಂದ ಮಾಡಿದ ದೀಪವನ್ನು ಮನೆಯಲ್ಲಿ ಬೆಳಗುವದರಿಂದ ನಿಮ್ಮ ಹಣಕಾಸಿನ ಸಮಸ್ಯೆಯೂ ದೂರಾಗುತ್ತದೆ.
;>- ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಸದಾ ನಿಲ್ಲಿಸಬೇಕೆಂದು ಬಯಸಿದರೆ ಏಳು ಮುಖದ ದೀಪವನ್ನು ಹಚ್ಚಬೇಕು.
– ಹಣಕಾಸಿನ ಅಥವಾ ಆರ್ಥಿಕ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬೇಕಾದರೆ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಪ್ರತಿನಿತ್ಯವೂ ಶುದ್ಧ ತುಪ್ಪದ ದೀಪವನ್ನು ಹಚ್ಚಿಡಬೇಕು.
;>- ಇನ್ನು ನೀವು ಅಖಂಡ ದೀಪವನ್ನು ಬೆಳಗಿಸಬೇಕೆಂದು ಬಯಸಿದರೆ, ಅಂತಹ ಸಂದರ್ಭದಲ್ಲಿ ಶುದ್ಧ ತುಪ್ಪವನ್ನು ಅಥವಾ ಎಳ್ಳೆಯನ್ನು ದೀಪದಲ್ಲಿ ಹಾಕಿ ಬೆಳಗಿಸಬೇಕು.
ಈ ಮೇಲಿನ ವಿಧಿ ವಿಧಾನಗಳ ಪ್ರಕಾರ ನೀವು ದೀಪವನ್ನು ಬೆಳಗುವುದರಿಂದ ಹಣಕಾಸಿನ ಲಾಭವನ್ನು ಪಡೆಯುತ್ತೀರಿ. ನಿಮ್ಮ ಜೀವನಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳು ಕೂಡ ಪರಿಹಾರವಾಗುವುದು. ಸಂಕಷ್ಟಗಳು ಕಳೆದು ಪ್ರಗತಿಯನ್ನು ಸಾಧಿಸುವ ಮಾರ್ಗಗಳು ತೆರೆದುಕೊಳ್ಳುತ್ತವೆ