ಪಾಕಿಸ್ತಾನ ಮೂಲದ ಕೆನಡಾದ ಖ್ಯಾತ ಅಂಕಣಕಾರ ಮತ್ತು ಪ್ರಸಿದ್ಧ ಟಿವಿ ನಿರೂಪಕ ತಾರೆಕ್ ಫತಾಹ್ ಇಂದು ನಿಧನರಾಗಿದ್ದಾರೆ.
ಫತಾಹ್ ದೀರ್ಘಕಾಲದಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದು ಅವರಿಗೆ 73 ವರ್ಷ ವಯಸ್ಸಾಗಿತ್ತು. ಫತಾಹ್ ಸಾವಿನ ಸುದ್ದಿಯನ್ನು ಪುತ್ರಿ ನತಾಶಾ ಫತಾಹ್ ತಮ್ಮ ಟ್ವಿಟರ್ ಪೋಸ್ಟ್ನಲ್ಲಿ ಖಚಿತಪಡಿಸಿದ್ದಾರೆ.
ಪಂಜಾಬ್ನ ಸಿಂಹ, ಹಿಂದುಸ್ತಾನದ ಮಗ, ಕೆನಡಾದ ಪ್ರೇಮಿ, ಸತ್ಯದ ಮಾತುಗಾರ, ನ್ಯಾಯಕ್ಕಾಗಿ ಹೋರಾಟಗಾರ, ದೀನದಲಿತರು, ಹಿಂದುಳಿದವರು ಮತ್ತು ತುಳಿತಕ್ಕೊಳಗಾದವರ ದನಿ ತಾರೆಕ್ ಫತಾಹ್ ನಿಧನರಾಗಿದ್ದಾರೆ. ಅವರ ಕ್ರಾಂತಿಯು ಅವನನ್ನು ತಿಳಿದಿರುವ ಮತ್ತು ಪ್ರೀತಿಸುವ ಎಲ್ಲರೊಂದಿಗೆ ಮುಂದುವರಿಯುತ್ತದೆ. ನೀವು ನಮ್ಮೊಂದಿಗೆ ಸೇರುತ್ತೀರಾ?’ ಎಂದು ನತಾಶಾ ಟ್ವೀಟ್ ಮಾಡಿದ್ದಾರೆ.
1949 ನವೆಂಬರ್ 20ರಂದು ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ತಾರೆಕ್ ಫತಾಹ್ 1980ರ ಆರಂಭದಲ್ಲಿ ದಶಕದಲ್ಲಿ ಕೆನಡಾಗೆ ವಲಸೆ ಹೋಗಿದ್ದರು. ಅಲ್ಲಿ ಅವರು ರಾಜಕೀಯ ಕಾರ್ಯಕರ್ತ, ಪತ್ರಕರ್ತ, ಟಿವಿ ನಿರೂಪಕರಾಗಿ ಕೆಲಸ ಮಾಡಿದ್ದರು. ಅವರು ‘ಚೇಸಿಂಗ್ ಎ ಮಿರಾಜ್: ದಿ ಟ್ರಾಜಿಕ್ ಇಲ್ಯೂಷನ್ ಆಫ್ ಆನ್ ಇಸ್ಲಾಮಿಕ್ ಸ್ಟೇಟ್’ ಮತ್ತು ‘The Jew is Not My Enemy: Unveiling the Myths that Fuel Muslim Anti-Smitism ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.