ಬೆಂಗಳೂರು ;– ಸಿಲಿಕಾನ್ ಸಿಟಿ ಬೆಂಗಳೂರಿನ ಬಾಡಿಗೆ ಮನೆ ಮಾಲೀಕರೇ ಹುಷಾರ್,, ಅಪರಿಚಿತರಿಗೆ ಬಾಡಿಗೆ ಮನೆ ಕೊಡೊ ಮುನ್ನ ಕೊಂಚ ಯೋಚನೆ ಮಾಡಿ ಕೊಟ್ಟರೆ ಒಳಿತು. ಇಲ್ಲವಾದರೆ ನಿಮ್ಮ ಮನೆ ಗುಡಿಸಿ ಗುಂಡಾಂತರವಾಗೋದು ಪಕ್ಕಾ.
ಹೌದು, ರಾಜಧಾನಿ ಬೆಂಗಳೂರಿನ ಮನೆ ಮಾಲೀಕರು ಸಿಕ್ಕ ಸಿಕ್ಕವರಿಗೆ ಬಾಡಿಗೆ ನೀಡುವುದಕ್ಕೂ ಮುನ್ನ ಸ್ವಲ್ಪ ಜಾಗೃತರಾಗಿರಬೇಕು. ಏಕೆಂದರೆ ರಾಜಧಾನಿ ಬೆಂಗಳೂರಿನಲ್ಲಿ ಬಾಡಿಗೆಗೆ ಬಂದ ಖತರ್ನಾಕ್ ಜೋಡಿ ಇಡೀ ಮನೆಯನ್ನೇ ಗುಡಿಸಿ ಗಂಡಾಂತರ ಮಾಡಿಬಿಟ್ಟಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಬಾಡಿಗೆಯಲ್ಲಿ ಇದ್ದುಕೊಂಡೇ ಲಿವಿಂಗ್ ಟುಗೆದರ್ ನಲ್ಲಿದ್ದ ಖತರ್ನಾಕ್ ಜೋಡಿ ಇಡೀ ಮನೆಯನ್ನೇ ಗುಡಿಸಿ ಗುಂಡಾಂತರ ಮಾಡಿದ್ದಾರೆ.
ಈ ಖತರ್ನಾಕ್ ಜೋಡಿ ಮನೆ ಕಳ್ಳತನ ಮಾಡಲು ಬರೊಬ್ಬರಿ ನಾಲ್ಕು ತಿಂಗಳು ಬಾಡಿಗೆಗಿದ್ದರು. ಈ ವೇಳೆ ಮನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿದ್ದಾರೆ. ಅದೇ ರೀತಿ ಮನೆಯಲ್ಲಿ ಬರೊಬ್ಬರಿ 4 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದಾರೆ.
ಬೆಂಗಳೂರು ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಜಿಎಸ್ ಲೇಔಟ್ನಲ್ಲಿ ಘಟನೆ ನಡೆದಿದ್ದು, ಪ್ರೇಮಲತ ಎಂಬುವವರ ಮನೆಯಲ್ಲಿ ಲಿಖಿತ ಹಾಗೂ ಸುಮಂತ್ ಎಂಬ ಜೋಡಿ ಈ ಕೃತ್ಯ ಎಸಗಿದೆ ಎಂದು ತಿಳಿದು ಬಂದಿದೆ.
ನಾಲ್ಕೂವರೆ ತಿಂಗಳು ಬಾಡಿಗೆ ಮನೆಯಲ್ಲಿ ವಾಸ ಮಾಡಿ ಮಾಲೀಕರ ಚಲನ ವಲನ ವೀಕ್ಷಿಸಿ, ಬಳಿಕ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದಾರೆ. ಸಿಸಿಟಿವಿಯಲ್ಲಿ ಆರೋಪಿಗಳ ಕೃತ್ಯ ಸೆರೆಯಾಗಿದ್ದು, ಸುಬ್ರಮಣ್ಯವಪುರ ಪೊಲೀಸರು ಖತರ್ನಾಕ್ ಜೋಡಿಯನ್ನು ಅರೆಸ್ಟ್ ಮಾಡಿದ್ದಾರೆ.
ಆರೋಪಿಗಳು, ಚಿನ್ನದ ಒಡವೆಗಳನ್ನ ಮಾರಿ ಶಿವಮೊಗ್ಗದಲ್ಲಿ ಸೆಟಲ್ ಆಗಿದ್ದರು. ಹಣ ಖಾಲಿಯಾದ ನಂತರ ಮತ್ತೊಂದು ಮನೆಯಲ್ಲಿ ಇದೇ ರೀತಿ ಕೃತ್ಯ ಎಸಗಲು ಸಂಚು ರೂಪಿಸಿದರು. ಈ ವೇಳೆ ಸುಬ್ರಹ್ಮಣ್ಯ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.