ಪ್ರವಾಹದ ವೇಳೆ ಹಾನಿಯಾದ ಮನೆ ಹಂಚಿಕೆಯಲ್ಲಿ ಅಕ್ರಮ ಆರೋಪ ಸಂಬಂಧ ‘ಕೈ’ ಶಾಸಕ ಶಾಂತನಗೌಡ ಆರೋಪಕ್ಕೆ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಅತಿವೃಷ್ಟಿಯಿಂದ ಮನೆ ಹಾನಿಯಾದಾಗ ಪ್ರತಿ ಹಳ್ಳಿಗೂ ಭೇಟಿ ನೀಡಿದ್ದೇನೆ. ಮನೆ ಕಳೆದುಕೊಂಡವರಿಗೆ ಪಕ್ಷಾತೀತವಾಗಿ ಮನೆಗಳನ್ನು ನಿರ್ಮಿಸಿಕೊಟ್ಟಿದ್ದೇನೆ.
ಆದರೆ ಹಾಲಿ ಶಾಸಕರು ನನ್ನ ವಿರುದ್ಧ ಬಿಜೆಪಿಯವರಿಗೆ ಮಾತ್ರ ಮನೆ ಕೊಡಿಸಿದ್ದಾರೆಂದು, ಕಾಂಗ್ರೆಸ್ನವರಿಗೆ ನೀಡಿದ್ದ ಮನೆ ಕ್ಯಾನ್ಸಲ್ ಮಾಡಿದ್ದಾರೆಂದು ಆರೋಪಿಸಿದ್ದಾರೆ. 500 ಕ್ಕೂ ಹೆಚ್ಚು ಮನೆಗಳು ಬೋಗಸ್ ಆಗಿದ್ದು ಇದರಲ್ಲಿ ನನ್ನ ಹಸ್ತಕ್ಷೇಪ ಇದೇ ಎಂದು ಆರೋಪ ಮಾಡಿದ್ದಾರೆ ಎಂದರು.