ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಪಟ್ಟಣಗೆರೆಯಲ್ಲಿರುವ ಶೆಡ್ಗೆ ಕರೆದುಕೊಂಡು ಹೋಗಲಾಗಿತ್ತು. ಇದೆಲ್ಲ ಪ್ಲ್ಯಾನ್ ಮಾಡಿದ್ದು ದರ್ಶನ್ ಎನ್ನುವ ಆರೋಪ ಇದೆ. ಹಾಗೆ ಮೈಸೂರಿದಾಸಲ್ಲಿ ನಟ ದರ್ಶನ್ ಬಂಧಿಸಿದೇ ರೋಚಕ ಸಂಗತಿ ಹೇಗೆಲ್ಲಾ ಸಿದ್ಧತೆ ಆಗಿತ್ತು ಗೊತ್ತಾ ಇಲ್ಲಿದೆ ನೋಡಿ.
ಮೊದಲಿಗೆ ಪೊಲೀಸರಿಗೆ ದಾರಿತಪ್ಪಿಸಿದ್ದ ಹೊಟೇಲ್ ಸಿಬ್ಬಂದಿ ದರ್ಶನ್ ಇದ್ದ ರೂಮ್ ನಂಬರ್ ಹೇಳದೇ ಸತಾಯಿಸಿದ್ದ ಸಿಬ್ಬಂದಿ ನಂತರ ಹೊಟೇಲ್ ನಲ್ಲಿ ಕೆಲಕಾಲ ಕಾದಿದ್ದ ಪೊಲೀಸರು. ಆಗ ದಿಢೀರನೆ ಬಂದಿದ್ದ ಮೂವರು ಬಾಡಿ ಗಾರ್ಡ್ಸ್ಪೊಲೀಸರನ್ನ ಕಂಡು ತರಾತುರಿಯಲ್ಲಿ ಹೋಗುತ್ತಿದ್ದ ಬಾಡಿ ಗಾರ್ಡ್ಸ್
ದರ್ಶನ್ ಕಾರಿನಲ್ಲಿ ಹೊರ ಹೋಗ್ತಿದ್ದ ಬಾಡಿ ಗಾರ್ಡ್ ಗಳು ಅವರನ್ನ ಅಡ್ಡ ಹಾಕಿ ಮೊಬೈಲ್ ಕಿತ್ಕೊಂಡಿದ್ದ ಪೊಲೀಸರು. ದರ್ಶನ್ ರೂಂ ತೋರಿಸುವಂತೆ ಬಾಡಿ ಗಾರ್ಡ್ಸ್ ಗೆ ಗದರಿದ್ದ ಪೊಲೀಸರು ಬಳಿಕ ರೂಮ್ ತೋರಿಸಲು ಕರೆದುಕೊಂಡು ಹೋಗಿದ್ದ ಬಾಡಿ ಗಾರ್ಡ್ಸ್ ಮತ್ತೊಂದು ಕೀ ಬಳಸಿ ದರ್ಶನ್ ಇದ್ದ ರೂಮ್ ಓಪನ್ ಮಾಡಿದ್ದ ಪೊಲೀಸರು.
ಈ ವೇಳೆ ರೂಮ್ ನಲ್ಲಿ ಸ್ನಾನ ಮಾಡುತ್ತಿದ್ದ ನಟ ದರ್ಶನ್ ಪೊಲೀಸರು ರೂಮ್ ಒಳಗೆ ಹೋಗ್ತಿದಂತೆ ಶಾಕ್ ಆಗಿದ್ದ ದರ್ಶನ್ ರೂಮ್ ಒಳ ಹೋಗಿ ವಿಚಾರಣೆಗೆ ಬರಬೇಕು ಅಂತ ಹೇಳಿದ್ದ ಪೊಲೀಸರು ಕೂಡಲೇ ಎರಡೇ ನಿಮಿಷದಲ್ಲಿ ಬಾತ್ ರೂಮ್ ನಿಂದ ಹೊರ ಬಂದಿದ್ದ ದರ್ಶನ್ ಬಟ್ಟೆ ಹಾಕಿಕೊಂಡು ಹೋಗೋಣಾ ಸಾರ್ ಎಂದಿದ್ದ ದರ್ಶನ್ ರೂಮ್ ನಲ್ಲೇ ನಟ ದರ್ಶನ್ ವಶಕ್ಕೆ ಪಡೆದಿದ್ದ ಎಸಿಪಿ ಚಂದನ್ ಹಾಗೂ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್.
ನಂತರ ಪೊಲೀಸ್ ಜೀಪ್ ಹತ್ತಿಸಿಕೊಂಡು ಬೆಂಗಳೂರಿಗೆ ಕರೆತಂದಿದ್ದ ಪೊಲೀಸರು ಅಲ್ಲದೇ ರೇಣುಕಾಸ್ವಾಮಿ ಸಾವಿನ ಬಳಿಕ ಆತಂಕದಲ್ಲೆ ಇದ್ದ ದರ್ಶನ್ ಘಟನೆ ನಂತ್ರ ಪುಲ್ ಡಲ್ ಆಗಿ ನರ್ವಸ್ ಆಗಿದ್ದ ದರ್ಶನ್ ಹೊಟೇಲ್ ನಲ್ಲೂ ಮಂಕು ಕವಿದಂತೆ ಇದ್ದ ದಾಸ ಪೊಲೀಸರು ಬರಬಹುದು ಅನ್ನೋ ಭೀತಿಯಲ್ಲೆ ಇದ್ದ ದರ್ಶನ್ ಆದ್ರೂ ಕೊನೆಗೂ ಪೊಲೀಸರ ಅಥಿಯಾಗಿಯೇ ಬಿಟ್ಟ ನಟ ದರ್ಶನ್!