ಚಿತ್ರದುರ್ಗು ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಜುಲೈ 4ರವರೆಗೆ ದರ್ಶನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಆದರೆ ಸದ್ಯಕ್ಕೆ ದರ್ಶನ್ ಗೆ ಜಾಮೀನು ಸಿಗುವುದು ಬಹುತೇಕ ಅನುಮಾನವಾಗಿದೆ.
ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪೊಲೀಸರು ಈಗಾಗಲೇ ಪ್ರಬಲ ಸಾಕ್ಷ್ಯವನ್ನು ಕಲೆ ಹಾಕಿದ್ದಾರೆ. ಒಂದೊಮ್ಮೆ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿದರೆ ಆಕ್ಷೇಪಣೆ ಸಲ್ಲಿಸಲು ಎಸ್ಪಿಪಿ ತಯಾರಿ ನಡೆಸಿದ್ದಾರೆ. ಕಳೆದ ಏಳು ದಿನದಿಂದ ಜೈಲಲ್ಲಿರುವ ನಟ ದರ್ಶನ್ಗೆ ಊಟ, ತಿಂಡಿ ಸೇರದೆ ಚಡಪಡಿಸುತ್ತಿದ್ದಾರೆ. ಯಾವಾಗ ಜೈಲಿನಿಂದ ಹೊರ ಹೋಗುವುದು ಎಂದು ದಿನಗಳನ್ನು ಲೆಕ್ಕಾ ಹಾಕುತ್ತಿದ್ದಾರೆ. ಈ ಮಧ್ಯೆ ದರ್ಶನ್ ವಿರುದ್ಧ ರೌಡಿಶೀಟರ್ ಪಟ್ಟಿಯನ್ನು ತೆಗೆಯಲು ಪೊಲೀಸರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ದರ್ಶನ್ ರನ್ನು ನೋಡಲು ಸಾಕಷ್ಟು ಮಂದಿ ಜೈಲಿನ ಬಳಿ ಬರುತ್ತಿದ್ದಾರೆ. ಆದರೆ ದರ್ಶನ್ ಮಾತ್ರ ಯಾರನ್ನೂ ಭೇಟಿ ಮಾಡುತ್ತಿಲ್ಲ. ಅಲ್ಲದೆ ತಮ್ಮ ಭೇಟಿಗೆ ಯಾರಿಗೂ ಅವಕಾಶ ಕೊಡಬಾರದು ಅಂತ ಜೈಲಾಧಿಕಾರಿಗಳ ಬಳಿಕ ದರ್ಶನ್ ಮನವಿ ಮಾಡಿದ್ದಾರೆ.