ರೇಣುಕಾ ಸ್ವಾಮಿ ಕೊಲೆ ಪ್ರಕರಣ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಪ್ರಕರಣದಲ್ಲಿ ಈಗಾಗಲೇ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಸಾಕಷ್ಟು ಮಾಹಿತಿಗಳು ಹೊರ ಬೀಳುತ್ತಿದೆ. ಇದೀಗ ಪವಿತ್ರಾಗೆ ಮೃತಾ ರೇಣುಕಾಸ್ವಾಮಿ ಗುಪ್ತಾಂಗದ ಫೋಟೋ ಕಳುಹಿಸಿ ದರ್ಶನ್ ಗಿಂತ ನಾನೇನು ಕಡಿಮೆ ಬಾ ಎಂದು ಅಸಭ್ಯವಾಗಿ ಮೆಸೇಜ್ ಮಾಡಿದ್ದ ಎನ್ನುವುದು ವಿಚಾರಣೆ ವೇಳೆ ಬಯಲಾಗಿದೆ.
ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಪವಿತ್ರಾ ಗೌಡ ಎಂಟ್ರಿ ಆಗಿದ್ದಾರೆ ಎನ್ನುವ ಮಾತಿದೆ. ಈ ವಿಚಾರದಲ್ಲಿ ಪವಿತ್ರಾ ಹಾಗೂ ವಿಜಯಲಕ್ಷ್ಮಿ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಿರಿಕ್ ಆಗಿತ್ತು. ದರ್ಶನ್ ಹಾಗೂ ವಿಜಯಲಕ್ಷ್ಮಿ ಸಂಸಾರ ಚೆನ್ನಾಗಿರಬೇಕು ಎಂದು ಬಯಸಿದ ರೇಣುಕಾಸ್ವಾಮಿ ಪವಿತ್ರಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ.
ಕೊಲೆಯಾದ ರೇಣುಕ ಸ್ವಾಮಿ ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡೋಕೆ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ ಮಾಡಿದರೂ ಹೊಸ ಅಕೌಂಟ್ ಓಪನ್ ಮಾಡಿ ಅಶ್ಲೀಲವಾಗಿ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಇದರಿಂದ ಪವಿತ್ರಾ ಸಾಕಷ್ಟು ಚಿಂತೆಗೆ ಒಳಗಾಗಿದ್ದರು ಎನ್ನಲಾಗುತ್ತಿದೆ.
ರೇಣುಕಾ ಸ್ವಾಮಿಯ ವಿಕೃತಿಯನ್ನು ಪವಿತ್ರಾ ಗೌಡ ಮನೆ ಕೆಲಸದವನಾದ ಪವನ್ಗೆ ಹೇಳಿದ್ದರು. ‘ಯಾವುದೇ ಕಾರಣಕ್ಕೂ ದರ್ಶನ್ಗೆ ಹೇಳಬೇಡ. ಅವನು ಏನಾದ್ರು ಮಾಡಿಬಿಡ್ತಾನೆ’ ಎಂದು ಪವನ್ಗೆ ಕಿವಿಮಾತು ಕೂಡ ಹೇಳಿದ್ದರು. ಆದರೆ ಪವನ್ ದರ್ಶನ್ಗೆ ವಿಚಾರ ತಿಳಿಸಿದ್ದಾನೆ. ಆಮೇಲೆ ದರ್ಶನ್ ಹಾಗೂ ಗ್ಯಾಂಗ್ ರೇಣುಕಾ ಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.