ಹೇಳದೇ ಕೇಳದೇ ಬರುವ ಬಿಕ್ಕಳಿಕೆಯು ಒಮ್ಮೊಮ್ಮೆ ನಿಮಗೆ ಅತಿ ಕೆಟ್ಟದಾಗಿ ಪರಿಣಮಿಸಬಹುದು. ಡಯಾಫ್ರಾಮ್ ಸ್ನಾಯುಗಳು ಕೆಲ ಕಾಲ ಅನುದ್ದಿಷ್ಟವಾಗಿ ಕುಗ್ಗುವುದರಿಂದ ಹಲವು ಬಾರಿ ಅದನ್ನು ನಿವಾರಣೆ ಮಾಡುವುದೇ ಕಷ್ಟವಾಗುತ್ತೆ.
ಬಿಕ್ಕಳಿಕೆಗೆ ಸಾಮಾನ್ಯ ಕಾರಣಗಳು ಯಾವುವು ಗೊತ್ತೇ?
– ಒತ್ತಡದಿಂದ ಬಳಲುವುದು
-ಆತಂಕದಿಂದ ಬಳಲುವುದು
-ತುಂಬ ಅವಸರವಾಗಿ ತಿನ್ನುವುದು
– ಸ್ಟ್ರೋಕ್
– ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆ
ಡಯಾಫ್ರಾಮ್ ನರಗಳಿಗೆ ಯಾವುದರಿಂದ ಅಡ್ಡಿಪಡಿಸಬಹುದು ಗೊತ್ತಾ?
– ಕೆಲ ಔಷಧಗಳು
– ಬ್ರೈನ್ ಟ್ಯೂಮರ್
ಇನ್ನು, ಬಹುತೇಕ ಬಾರಿ ಬಿಕ್ಕಳಿಕೆ ತನ್ನಂತಾನೇ ನಿಲ್ಲುತ್ತದೆ. ಆದರೂ, ಅಪರೂಪಕ್ಕೊಮ್ಮೆ ಬಿಕ್ಕಳಿಕೆಗೆ ವೈದ್ಯಕೀಯ ಗಮನ ಬೇಕಾಗುತ್ತದೆ. ಇನ್ನೊಂದೆಡೆ, ನಿಮ್ಮ ನಿದ್ದೆ ಅಥವಾ ಜೀವನಶೈಲಿ ಮೇಲೆ ಬಿಕ್ಕಳಿಕೆಯು ಅಡ್ಡಿಪಡಿಸುತ್ತಿದ್ದರೆ ನೀವು ಆರೋಗ್ಯ ತಜ್ಞರ ಸಲಹೆ ಪಡೆಯುವುದು ಮುಖ್ಯವಾಗಿರುತ್ತದೆ.
ಬಿಕ್ಕಳಿಕೆ ನಿವಾರಿಸಲು ಮನೆಮದ್ದು ಹಾಗೂ ಹಲವು ಸುಲಭ ಪರಿಹಾರಗಳಿವೆ. ಅವು ಯಾವುವು ಗೊತ್ತಾ?
ಒಂದು ಚಮಚ ಸಕ್ಕರೆ: ತಕ್ಷಣಕ್ಕೆ ಬಿಕ್ಕಳಿಕೆ ನಿಲ್ಲಿಸಬೇಕೆಂದರೆ ಒಂದು ಚಮಚ ಸಕ್ಕರೆ ತಿನ್ನಬೇಕು.
ಆಳವಾಗಿ ಉಸಿರಾಡಿ: ಇನ್ನು, ಬಿಕ್ಕಳಿಕೆಯನ್ನು ತಕ್ಷಣವೇ ನಿಲ್ಲಿಸಲು ಮತ್ತೊಂದು ಹಳೆಯ ಹಾಗೂ ಉತ್ತಮ ಪರಿಹಾರವೆಂದರೆ ಆಳವಾಗಿ ಉಸಿರಾಡುವುದು.
ನೀರು ಕುಡಿಯಿರಿ: ಒಂದು ಲೋಟ ತುಂಬ ನೀರು ಕುಡಿಯಿರಿ. ಇನ್ನು, ನೀರು ಕುಡಿಯುವಾಗ ನೀವು ಬೇರೆ ಏನನ್ನೋ ಯೋಚಿಸುತ್ತಿರಬೇಕು. ಹೀಗಾಗಿ, ಇದೂ ಕೂಡ ಬಿಕ್ಕಳಿಕೆ ನಿಲ್ಲಿಸಲು ಪ್ರಮುಖ ವಿಧಾನವಾಗಿದೆ.
ವ್ಯಕ್ತಿಯನ್ನು ಹೆದರಿಸಿ: ಬಿಕ್ಕಳಿಕೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಹೆದರಿಸಿದರೆ ಅವನ ಅಥವಾ ಅವಳ ಗಮನ ಬೇರೆ ಕಡೆಗೆ ಕೇಂದ್ರೀಕರಿಸುತ್ತದೆ. ಇದರಿಂದಾಗಿ ಬಿಕ್ಕಳಿಕೆ ಕ್ರಮೇಣವಾಗಿ ನಿಲ್ಲುತ್ತದೆ.
ಹುಳಿಯ ಪದಾರ್ಥ ತಿನ್ನಿ: ವಿನೇಗರ್ ಅಥವಾ ನಿಂಬೆ ಹಣ್ಣನ್ನು ತಿನ್ನಬಹುದು. ಇದರಿಂದಾಗಿ ಉಸಿರಾಟಕ್ಕೆ ಅಡಚಣೆಯುಂಟಾಗಲಿದ್ದು, ಬಿಕ್ಕಳಿಕೆ ನಿಲ್ಲುತ್ತದೆ.
ಬಿಕ್ಕಳಿಕೆ ಬರದಂತೆ ತಡೆಯಲು ಇನ್ನೂ ಕೆಲ ವಿಧಾನಗಳಿವೆ. ಅವು ಯಾವುವೆಂದರೆ,
– ಅತಿಯಾಗಿ ತಿನ್ನುವುದನ್ನು ಬಿಡಿ
– ನಿಧಾನವಾಗಿ ತಿನ್ನಿ ಹಾಗೂ ಆಹಾರವನ್ನು ಚೆನ್ನಾಗಿ ಜಗಿಯಿರಿ
-ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ
-ಆಳವಾಗಿ ಉಸಿರಾಡುವ ವ್ಯಾಯಾಮಗಳನ್ನು ಪ್ರಾಕ್ಟೀಸ್ ಮಾಡಿ
-ಹೆಚ್ಚು ಸಕ್ರಿಯವಾಗಿರಿ