ದೇವದುರ್ಗ: ಪರಿಶಿಷ್ಟರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆದು, ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ವತಿಯಿಂದ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಇನ್ನೂ ಕೂಡ ಕೆಲ ಜಿಲ್ಲೆಗಳಲ್ಲಿ ಅಸ್ಪೃಶ್ಯರಿಗೆ ಇದುವರೆಗೂ ಗುಡಿ -ಗುಂಡಾರಗಳಲ್ಲಿ, ಚಹಾ ಹೋಟೆಲ್ಗಳಲ್ಲಿ, ಮತ್ತು ಅತಿ ಹೆಚ್ಚು ದಲಿತ ಅತ್ಯಾಚಾರ ಕೊಲೆ ಸುಲಿಗೆಯ ಘಟನೆಗಳು ಇನ್ನೂ ಜೀವಂತ ವಾಗಿವೆ ಎನ್ನುವುದಕ್ಕೆ ಮೊನ್ನೆ ನಡೆದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಾಂಗನಾಳ ಗ್ರಾಮದಲ್ಲಿ ಸೆಲ್ಯೂನ್ ಅಂಗಡಿಗೆ ತೆರಳಿದ ದಲಿತ ಯುವಕನಾದ ಯಮನೂರಪ್ಪ ತಂದೆ ಈರಪ್ಪ ಬಂಡಿಹಾಳ 23ವಯಸ್ಸು, ಅದೇ ಗ್ರಾಮದ ಮುದುಕಪ್ಪ ತಂದೆ ಆದಪ್ಪ ಹಡಪದ ನೀನು ಕೆಳ ಜಾತಿಯವನು ನಾನು ಮಾಡುವುದಿಲ್ಲ ಜಾತಿ ನಿಂದನೆ ಮಾಡಿ, ನಂತರ ನಾನು ಮನುಷ್ಯನಲ್ಲವೇ ನನಗ್ಯಾಕೆ ಕಟಿಂಗ್
ಮಾಡುವುದಿಲ್ಲ ಎಂದು ಪ್ರಶ್ನೆ ಮಾಡಿರುವುದರಿಂದ ಏಕಾಏಕಿಯಾಗಿ ಮುದುಕಪ್ಪ ಆತನಿಗೆ ಕತ್ತರಿಯಿಂದ ತಿವಿದು ಕೊಲೆ ಮಾಡಿರುತ್ತಾನೆ ಆದ್ದರಿಂದ ಕೊಲೆಯಾದ ಕುಟುಂಬಕ್ಕೆ ಸರಕಾರ ಪರಿಹಾರ ನೀಡಬೇಕು, ಕೊಲೆ ಮಾಡಿದ ಆರೋಪಿಯ ಆಸ್ತಿ ಸರ್ಕಾರ ಮುಟ್ಟು ಗೊಲು ಹಾಕಬೇಕು, ನೊಂದ ಕುಟುಂಬಕ್ಕೆ ಪೊಲೀಸ್ ಬಂದೋಬಸ್ತ್ ನೀಡಬೇಕು ಕೊಪ್ಪಳ ಜಿಲ್ಲೆಯ ಎಲ್ಲಾ ದಲಿತ ಕಾಲೋನಿಗಳಿಗೆ ಪೊಲೀಸ್ ರಕ್ಷಣೆ ನೀಡಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಗೃಹ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಗ್ರೇಡ್ 2 ತಹಸೀರ್ಲ್ದಾ ವೆಂಕಟೇಶ್ ಕುಲಕರ್ಣಿ ಅವರಿಗೆ ನೀಡಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಎಮ್.ಆರ್.ಎಚ್.ಎಸ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರ, ಗೌರವ ಸಲಹೆಗಾರ ಬಸವರಾಜ (ಜಯಂ) ಮಸರಕಲ್, ಬುರಪ್ಪ ಮರೆಡ್ಡಿ, ವಿಜಯಕುರ್ಮಾ ಬಲ್ಲಿದವ್, ಸೇರಿದಂತೆ ಇತರರು ಇದ್ದರು
ವರದಿಗಾರರು ರಂಗನಾಥ್ H J…………..