ಹಾಸನ : ಬೇನಾಮಿ ಆಸ್ತಿ ಸಂಪಾದನೆ ಹೊತ್ತಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ರೈತರ ಪಾಲಿಗೆ ವಿಲನ್ ಆಗಿದ್ದು ಅವರ ಕುಟುಂಬ ಅನ್ನದಾತರ ಹೆಸರು ಹೇಳಿಕೊಂಡು ದ್ರೋಹ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ವಾಗ್ದಾಳಿ ನಡೆಸಿದರು.
ಸಂಸದ ಪ್ರಜ್ವಲ್ ರೇವಣ್ಣರ ಮಾಜಿ ಕಾರು ಚಾಲಕ ಕಾರ್ತಿಕ್ರ ಪತ್ನಿ ಗರ್ಭಪಾತಕ್ಕೆ ಕಾರಣರಾದ ಭವಾನಿ ರೇವಣ್ಣ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಟನೆ ವೇಳೆ ಜಿಲ್ಲಾಧಿಕಾರಿ ಕಚೇರಿ ಎದುರು ಮಾತನಾಡಿದ ಅವರು, ಕಾರ್ತಿಕ್ ಹೆಸರಿನಲ್ಲಿದ್ದ ೧೩.೫ ಎಕರೆ ಜಮೀನನ್ನು ಬರೆದುಕೊಡುವಂತೆ ಒತ್ತಾಯ ಹೇರಿದ್ದ ಭವಾನಿ ರೇವನ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರು ಅವರ ಹೆಂಡತಿ ಶಿಲ್ಪಾ ಅವರನ್ನು ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ಆಕೆ ಮೂರು ತಿಂಗಳ ಗರ್ಭಿಣಿ ಎಂಬುದನ್ನೂ ನೋಡದೇ ಅಮಾನವಿಯವಾಗಿ ವರ್ತಿಸಿ ಆಕೆಗೆ ಚಿತ್ರ ಹಿಂಸೆ ನೀಡಿದ್ದರಿಂದ ಗರ್ಭಪಾತವಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಯೂರಿಯಾ ಕೃತಕ ಅಭಾವ ಸೃಷ್ಟಿ ಹಾಗೂ ಅಕ್ರಮ ದಾಸ್ತಾನು ಪ್ರಕರಣಗಳ ಮೇಲೆ ಬೆಳಕು ಚಎಲ್ಲಿ ರಐತರಿಗೆ ಆಗುತ್ತಿರುವ ಅನ್ಯಾಯ ತಡೆಯಬೇಕಿದ್ದ ರೇವಣ್ಣ ಅವರು ಜಾಣಮೌನ ತಳೆದಿದ್ದಾರೆ. ಕೆಎಂಎಫ್ ನಿರ್ದೇಶಕ ಹಾಗೂ ಹಾಮುಲ್ ಅಧ್ಯಕ್ಷರಾಗಿರುವ ಅವರು ದಂಧೆಕೋರೊಂದಿಗೆ ಶಾಮೀಲಾಗಿ ರಐತರ ಕಣ್ಣಿಗೆ ಮಂಕು ಬೀದಿ ಎರಚುತ್ತಿದ್ದಾರೆಯೇ ಎಂಬ ಗುಮಾನಿ ಇದೆ. ಕಿರಣ್ ರೆಡ್ಡಿ ಎಂಬುವನ ಮೂಲಕ ಕೋಟ್ಯಂತರ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿ ಸಂಪಾದಿಸುತ್ತಿರುವ ರೇವಣ್ಣ ಹಾಗೂ ಕುಟುಂಬದವರನ್ನು ತನಿಖೆಗೆ ಒಳಪಡಿಸಬೇಕು. ರೈತರ ಹೆಸರು ಹೇಳಿಕೊಂಡು, ಅಧಿಕಾರಿಗಳನ್ನು ಹೆಸದರಿಸಿ ಜಿಲ್ಲೆಯಲ್ಲಿ ಪ್ರಭುತ್ವ ಸಾಧಿಸುತ್ತಿರುವ ಆ ಕುಟುಂಬಕ್ಕೆ ಜನರೇ ತಕ್ಕ ಪಾಠ ಕಲಿಸಬೇಕು ಎಂದು ಕಿಡಿ ಕಾರಿದರು.