ಕನ್ನಡ ಸಿನಿಮಾ ಇಂಡಸ್ಟ್ರಿಗೆ ಟಾನಿಕ್ ಆಗುವಂತಹ ಒಂದು ಹಿಟ್ ಬೇಕೇಬೇಕು ಎಂಬ ಕೂಗು ಕಳೆದ 5 ತಿಂಗಳಿಂದ ಕೇಳ್ತಾನೇ ಇದ್ವೀ, ಬಾಯಿ ಬಡ್ಕೊತಾನೇ ಬಂದ್ವಿ..! ಬಟ್, ಸ್ಟಾರ್ ಸಿನಿಮಾಗಳು ರಿಲೀಸ್ ಆಗೋವರೆಗೂ ಮತ್ತೆ ಚಿತ್ರಮಂದಿರಗಳು ಭರ್ತಿಯಾಗಲ್ಲ, ಗಲ್ಲಾಪೆಟ್ಟಿಗೆ ತುಂಬಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗ್ತಿದೆ. ಸ್ಟಾರ್ ಸಿನಿಮಾಗಳು ಇಲ್ಲದೇ ನಮ್ ಈ 5 ತಿಂಗಳು ನಲುಗಿಹೋಗಿದ್ದನ್ನ, ಯಾರು ತೆಗೆದು ಹಾಕೋ ಸೀನ್ ಇಲ್ಲ..!
ಚಿತ್ರರಂಗ ಬಂದ್ ಆಗಿಬಿಡುತ್ತಾ ಎಂಬ ಪ್ರಶ್ನೆ ನಮ್ಮಲ್ಲಿ ಮಾತ್ರವಲ್ಲ ಆಚೆಯೂ ಲೀಕ್ ಆಗಿಬಿಡ್ತು. ಇದರ ಪರಿಣಾಮವೇ ಚಿತ್ರೋದ್ಯಮದ ಇತರೆ ಬ್ಯುಸಿನೆಸ್ಗಳ ಮೇಲೂ ಪ್ರಭಾವ ತಟ್ಟಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯಾವಾಗ ಸದ್ಯಕ್ಕಂತೂ ಯಾವ್ ಬಂದ್ ಇಲ್ಲ ಬಿಡಿ ಅಂತ ಕೈ ಮುಗಿದು ಗೊಂದಲ ಬಗಿಹರಿಸಿತೋ ಮತ್ತೆ ಚಿತ್ರರಂಗದ ಕೆಲಸಗಳು ಆಕ್ಟಿವ್ ಆಗಿವೆ. ಸ್ಟಾರ್ ನಟರ ಸಿನಿಮಾಗಳು ಒಂದೊಂದಾಗಿ ಫ್ಯಾನ್ ಇಂಡಿಯನ್ ಲೆವೆಲ್ನಲ್ಲಿ ಸೌಂಡ್ ಮಾಡೋಕೆ ತಯಾರಾಗ್ತಿವೆ. ಘಟನುಘಟಿ ಸ್ಟಾರ್ಗಳ ಆಗಮನಕ್ಕೆ ನಿಧಾನವಾಗಿ ಮೆಜೆಸ್ಟಿಕ್ ಸರ್ಕಲ್ ರೆಡಿಯಾಗ್ತಿರೋದಂತೂ ಖರೇನೇ..!
ಆಡಿಯನ್ಸ್ ಸರಿಯಾದ ಪ್ರಮಾಣದಲ್ಲಿ ಥಿಯೆಟರ್ ಕಡೇ ಮುಖ ಇಟ್ಟು ಮಲಗ್ತಿಲ್ಲ ಎಂಬ ದೂರು ಬೃಹದಕಾರವಾಗಿ ಬೆಳೆದು ಈ ಗೊಂದಲ ಸೃಷ್ಟಿಯಾಗಿತ್ತು. ಈಗ ವರ್ಷದ ಸೆಕೆಂಡ್ ಹಾಫ್ ಸ್ಟಾರ್ ಸಿನಿಮಾಗಳಿಂದಲೇ ಕಂಗೊಳಿಸೋಕೆ ಸಜ್ಜಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಮುಂದಿನ ಅನೌನ್ಸ್ ಮೆಂಟ್ ಡೆವಿಲ್ ಮೂಲಕ ಈ ಸಂಪ್ರದಾಯಕ್ಕೆ ಕಿಕ್ ಸ್ಟಾರ್ಟ್ ಹೊಡೆದ್ರು ಎಂದ್ರೇ ಖಂಡಿತ ತಪ್ಪಿಲ್ಲ. ನಂತ್ರ ಧ್ರುವಸರ್ಜಾರ ಪ್ಯಾನ್ ಇಂಡಿಯನ್ ಕನಸು ‘ಮಾರ್ಟಿನ್’ ಅ.11ಕ್ಕೆ ಲೈನ್ ಅಪ್ ಆಯ್ತು. ನಾವೂ ಏನು ಕಡಿಮೆಯಿಲ್ಲ ಅಂತ ಜೋಗಿಪ್ರೇಮ್ ಡಿಸೆಂಬರ್ನಲ್ಲೇ ಡೆವಿಲ್ ಅಪೊಸಿಟ್ ಕೆಡಿ ರಿಲೀಸ್ಗೆ ರೆಡಿಯಾದ್ರು. ಇನ್ನೂ ಎರಡು ತಿಂಗಳಲ್ಲಿ 3 ಸ್ಟಾರ್ ಸಿನಿಮಾಗಳ ರಿಲೀಸ್ ಘೋಷಣೆ ಫಿಕ್ಸ್ ಅಂತಿದಾರೆ ಸಿನಿಮಾಸರ್ಕಲ್ ಬಲ್ಲವರು.
ಇಲ್ಲಿ ಮತ್ತೊಮ್ಮೆ ಸ್ಟಾರ್ ವಾರ್ ಕಾಂಪಿಟೇಶನ್ ಬಿಸಿ ಶುರುವಾಗುತ್ತಾ ಎಂಬ ಪ್ರಶ್ನೆ ಮೂಡೋದು ಕಾಮನ್. ಸ್ಪರ್ಧೆ ದೂರವಿದೆ. ಮೊದಲು ಥಿಯೆಟರ್ಗಳಿಗೆ ಆಡಿಯನ್ಸ್ ಬರಲೇಬೇಕು. ಅದು ಸ್ಟಾರ್ ಸಿನಿಮಾಗಳಿಂದ ಮಾತ್ರ ಸಾಧ್ಯ ಎಂಬುದನ್ನ ಅಲ್ಲಗೆಳೆಯೋಕೆ ಸಾಧ್ಯವಿಲ್ಲ. ಹೊಸ ಕಥೆಗಳ ಸೋಲು ಕೂಡ ಸಿನಿಮಾವಲಯವನ್ನ ಕಂಗಾಲಾಗಿಸ್ತಿದೆ. ಒಳ್ಳೆ ಸಿನಿಮಾ ಮಾಡಿದ್ರೂ ಅದು ಒಂದು ವಾರಕ್ಕೆ ಸೀಮಿತ ಎಂಬ ನಗ್ನಸತ್ಯ ಕಾಣಿಸ್ತಿದೆ. ಐದು ತಿಂಗಳಲ್ಲಿ 110ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆದ್ರೂ ಸೂಪರ್ಹಿಟ್ ಎಂಬ ಪದ ಮಾತ್ರ ಮಂಗಮಾಯ..! ಅದಕ್ಕಾಗಿಯೇ ಸ್ಟಾರ್ ಚಿತ್ರಗಳ ಮೇಲೆ ಈ ಪಾಟಿ ಬೇಡಿಕೆ ಕ್ರಿಯೆಟ್ ಆಗಿದೆ.
‘ಕಾಟೇರ’ ನಂತ್ರ ನಮ್ಮ ಸಿನಿಮಾ ಇಂಡಸ್ಟ್ರಿ ಯಾವ ಹಿಟ್ ನೋಡೊಕೆ ಸಾಧ್ಯವಾಗಿಲ್ಲ. ಜೊತೆಗೆ ಇಷ್ಟುದಿನ ಸುಮ್ಮನಿದ್ದ ಸೂಪರ್ಸ್ಟಾರ್ಗಳು ಒಂದೇ ಸಲ ರಿಲೀಸ್ ಘೋಷಿಸೋದರ ಹಿಂದೆಯೂ ಒಂದು ಭಯ ಕಾಡ್ತಿದೆ. ಡಿಸೆಂಬರ್ ತಿಂಗಳು ಲಕ್ಕಿ ಅನ್ನೋ ಕಾರಣಕ್ಕೋ ಏನೋ ಸಿನಿಮಾ ಟ್ರಾಫಿಕ್ ಆರಂಭವಾಗಿದೆ. ಕೆಡಿ ಹಾಗೂ ಡೆವಿಲ್ ಒಂದೇ ದಿನವೇನಾದ್ರೂ ಎದುರುಬದುರು ಟಕ್ಕರ್ ಕೊಡುತ್ತಾ ಎಂಬ ಲೇಟೆಸ್ಟ್ ಚರ್ಚೆ ಶುರುವಾಗ್ತಿದೆ.
ಇದು ಕಾಕತಾಳೀಯವೋ ಅಥವಾ ಪೂರ್ವನಿಯೋಜಿತವೋ ಗೊತ್ತಿಲ್ಲ..! ಮೊದಲು ಅನೌನ್ಸ್ ಮಾಡಿದ್ದು ‘ಡೆವಿಲ್’ ಚಿತ್ರತಂಡವೇ. ನಂತ್ರ ಕೆ.ವಿ.ಎನ್ ಪ್ರೊಡಕ್ಷನ್ ತನ್ನ ಹೆಜ್ಜೆ ‘ಕೆ.ಡಿ’ಯನ್ನ ಪರಿಚಯಿಸಿದ್ದು. ಇಂದಿನ ಸಿನಿಮಾ ಮಾರ್ಕೆಟ್ ಅರ್ಥ ಮಾಡ್ಕೊಂಡೇ ಕೆಡಿಯಿಂದ ಜೋಗಿಪ್ರೇಮ್ ತಮ್ಮ ದಾಳ ಬಿಡ್ತಿದಾರೆ. ಅತ್ತ ದರ್ಶನ್, ‘ಕಾಟೇರ’ ವಿನ್ನಿಂಗ್ ಮುಮೆಂಟ್ ಜೊತೆ ಡೆವಿಲ್ ಎಂಟ್ರಿಗೆ ವೈಟ್ ಮಾಡ್ತಿದಾರೆ. ಸಿನಿಮಾ ಟ್ರಾಫಿಕ್ನಿಂದ ಸಮಸ್ಯೆಗಳೇ ಹೆಚ್ಚು. ಆದರೆ ಅಂತರವಿದ್ರೆ, ಅದು ನಾಟ್ ಎ ಬಿಗ್ ಥಿಂಗ್..!
ದುನಿಯಾವಿಜಯ್ ನಟನೆಯ ‘ಭೀಮ’, ಉಪೇಂದ್ರ ಮುಂದಿನ ಡೈರೆಕ್ಷನ್ ವೆಂಚರ್ ‘ಯುಐ’, ಸುದೀಪ್ ಅಭಿನಯದ ‘ಮ್ಯಾಕ್ಸ್’, ಶ್ರೀಮುರಳಿಯ ‘ಬಘೀರ’ ಹಾಗೂ ಡಾಲಿಧನಂಜಯ್ ‘ಉತ್ತರಕಾಂಡ’ ಲೈನ್ಅಪ್ನಲ್ಲಿವೆ. ರಿಲೀಸ್ ಯಾವಾಗ ಎಂಬ ಹಳೇ ಪ್ರಶ್ನೆಗೆ ಉತ್ತರ ಕೊಡೋಕೆ ಸಜ್ಜಾಗಿವೆ. ಈ ವರ್ಷವೇ ಈ ಸಿನಿಮಾಗಳು ರಿಲೀಸ್ ಆಗೋದು ಬಹುತೇಕ ಫಿಕ್ಸ್. ನೆನಪಿರಲಿ, ಕಾಲ ಬದಲಾಗಿದೆ, ಆಡಿಯನ್ಸ್ ಅಭಿರುಚಿಯೂ ಬೇರೆ ಬಣ್ಣ ಪಡೆದುಕೊಂಡಿದೆ. ‘ವಾವ್ ಫ್ಯಾಕ್ಟರ್’ ಇದ್ದರೇ ಮಾತ್ರ ಗೆಲುವು ಗ್ಯಾರಂಟಿ..! ಇಲ್ಲವಾದ್ರೆ ನೂರರಲ್ಲಿ ನಾವು ಒಬ್ಬರು ಎನ್ನುವ ಕಹಿಸತ್ಯ ಅನುಭವಿಸೋಕೆ ಧೈರ್ಯವಿರಬೇಕು. ಕೆಜಿಎಫ್ ಹಾಗೂ ಕಾಂತಾರ ಇಂಡಸ್ಟ್ರಿಗೆ ಹೊಸ ಮಜಲು ಕೊಟ್ಟಿದೆ ನಿಜ, ಇದುವೇ ಬೇರೆ ನಾರ್ಮಲ್ ಕಂಟೆಂಟ್ಗಳಿಗೆ ಕೊಂಚ ಕಡಿವಾಣ ಹಾಕಿರೋದು ಅಷ್ಟೇ ಸತ್ಯ. ಒಟ್ಟೊಟ್ಟಿಗೆ ಬರ್ತಿರೋ ಸ್ಟಾರ್ ಚಿತ್ರಗಳು ವಾರ್ ಸೃಷ್ಟಿಸದಿರಲಿ, ಸಿನಿಮಾ ಸಂಭ್ರಮ ಮಾತ್ರ ನಮ್ಮದಾಗಲಿ ಎಂಬುದೇ ಸಿನಿಮಾಪ್ರಿಯನ ಕಾಳಜಿ..!
-ಮಾವಳ್ಳಿ ಕಾರ್ತಿಕ್. ಫಿಲಂ ಡೆಸ್ಕ್. ಪ್ರಜಾಟಿವಿ