ಬೆಂಗಳೂರು: ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ನಗರದ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುವ ಯೋಜನೆ.ಆದ್ರೆ ಈ ಯೋಜನೆ ಇನ್ನೂ ಕಾಗದ ಮೇಲಿನ ಘೋಷಣೆಯಾಗೇ ಉಳಿಸಿದೆ.ಹೀಗಾಗಿ ಮಹತ್ವಾಕಾಂಕ್ಷೆಯ ಯೋಜನೆ ಕಾರ್ಯರೂಪಕ್ಕೆ ಬರುವ ಲಕ್ಷಣ ಕಾಣ್ತಿಲ್ಲ.ಯೋಜನೆ ಉಸ್ತುವಾರಿ ಹೊತ್ತುಕೊಂಡ ಬಿಡಿಎ ಬರೀ ಟೆಂಡರ್ ಪ್ರಕ್ರಿಯೆಯಲ್ಲೇ ಕಾಲಹರಣ ಮಾಡ್ತಿದೆ.ಆದ್ರೆ ಇದೀಗ ಕಾಂಗ್ರೆಸ್ ಸರ್ಕಾರ ಈ ಯೋಜನೆಗೆ ಮರುಜೀವ ನೀಡಲು ಮುಂದಾಗಿದೆ. ಈ ಸಂಬಂಧ ಇವತ್ತು ಡಿಸಿಎಂ ಭೂಮಿ ಕೊಟ್ಟ ರೈತರ ಜತೆ ಸಭೆ ನಡೆಸಿ ಸಮಸ್ಯೆ ಆಲಿಸಿದ್ದಾರೆ. .
ಬೆಂಗಳೂರು ಬೃಹತ್ ಆಕಾರವಾಗಿ ಬೆಳೆದಿದೆ.ನಗರದ ಬೆಳೆದಂತೆ ಟ್ರಾಫಿಕ್ ಕೂಡ ವಿಪರೀತವಾಗಿ ಹೆಚ್ಚಾಗ್ತಿದೆ.ಭವಿಷ್ಯದಲ್ಲಿ ಬೆಂಗಳೂರು ಟ್ರಾಫಿಕ್ ದಟ್ಟನೆ ಹಿತದೃಷ್ಟಿ ಇಟ್ಟುಕೊಂಡು ನಿರ್ಮಾಣ ಮಾಡ್ತಿರೋ ಫೆರಿಫೆರೆಲ್ ರಿಂಗ್ ಯೋಜನೆ ದಿನೇ ದಿನೇ ಹಳ್ಳ ಹಿಡಿಯುತ್ತಿದೆ.ಈ ಯೋಜನೆ 2006 ರಲ್ಲೇ ಘೋಷಣೆಯಾಗಿತ್ತು.ಆದ್ರೆ ಭೂಸ್ವಾಧೀನ ಪ್ರಕ್ರಿಯೆ ಪರಿಸರ ಇಲಾಖೆ ಅನುಮತಿಯಲ್ಲಿನ ವಿಳಂಬದಿಂದ ಕಾರ್ಯರೂಪಕ್ಕೆ ಬರಲು ಇನ್ನೂ ಸಾಧ್ಯವಾಗಿಲ್ಲ.ಆದ್ರೆ ಕಳೆದ 18 ವರ್ಷದಿಂದ ನೆನಗುದಿಗೆ ಬಿದ್ದಿರುವ ಪೆರಿಫೆರೆಲ್ ರಸ್ತೆ ನಿರ್ಮಾಣಕ್ಕೆ ಇದೀಗ ಮರುಜೀವ ಸಿಕ್ಕಿದೆ.ದಶಕಗಳಿಂದ ಬೆಂಗಳೂರಿಗರು ಎದುರು ನೋಡ್ತಿರುವ ಪಿಆರ್ಆರ್ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮತ್ತೆ ಒಲವು ತೋರಿದೆ.
ಹೌದು ಇವತ್ತು ನಗರ ಸೆಂಟ್ರಲ್ ಕಾಲೇಜ್ ಜ್ಙಾನಜ್ಯೋತಿ ಆಡಿಟೋರಿಯಂನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪೆರಿಫೆರಲ್ ರಸ್ತ್ತೆ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರ ಜೊತೆ ಸಭೆ ನಡೆಸಿದರು. ಕಳೆದ 18 ವರ್ಷದಿಂದ ನೆನೆಗುದಿಗೆ ಬಿದ್ದಿರುವ ಪೆರಿಫೆರಲ್ ರಸ್ತೆ ನಿರ್ಮಾಣ ಸಂಬಂಧ ರೈತರ ಜತೆ ಚರ್ಚೆ ನಡೆಸಿದರು.ಸಭೆಯಲ್ಲಿ ಹಲವು ರೈತರು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು.18 ವರ್ಷದಿಂದ ಯೋಜನೆ ಮಾಡೋಕ್ಕೆ ಆಗಿಲ್ಲ. ಹೀಗಾಗಿ ಯೋಜನೆಯನ್ನ ಕೈಬಿಡಿ,ಭೂಮಾಲೀಕರಿಗೆ ಎನ್ ಓಸಿ ನೀಡಿ,ರೈತರಿಗೆ ಈ ಪೆರಿಫೆರಲ್ ರಸ್ತೆ ಅವಶ್ಯಕತೆ ಇಲ್ಲ ಅಂತ ಮನವಿ ಮಾಡಿಕೊಂಡರು.
ಪೆರಿಫೆರಲ್ ರಸ್ತೆ ತುಮಕೂರು ರಸ್ತೆಯಿಂದ ಹಳೆ ಮದ್ರಾಸ್ ರಸ್ತೆ ಮಾರ್ಗವಾಗಿ ಹೊಸೂರು ರಸ್ತೆಯವರಿಗಿನ 77 ಕಿಮೀ ಉದ್ದ ಹಾಗೂ 100 ಮೀಟರ್ ಅಗಲದ ರಸ್ತೆ ನಿರ್ಮಿಸಲು ಉದ್ದೇಶಿಸಿದೆ. ಬೆಂಗಳೂರು ನಗರ, ಗ್ರಾಮಾಂತರದ 77 ಗ್ರಾಮಗಳ ಮೂಲಕ ರಸ್ತೆ ಹಾದುಹೋಗಲಿದೆ. ರಸ್ತೆ ನಿರ್ಮಾಣಕ್ಕೆ 2596 ಎಕರೆ ಜಾಗವನ್ನ ಬಿಡಿಎ ಗುರುತಿಸಿದೆ.ಈ ಯೋಜನೆಗೆ ಭೂಮಿ ಕೊಟ್ಟ ರೈತರಿಗೆ ಹಳೆ ಆಕ್ಟ್ ಪ್ರಕಾರ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ,ಆದ್ರೆ ಇದಕ್ಕೆ ರೈತರು ಒಪ್ಪುತ್ತಿಲ್ಲ.2013 ಆಕ್ಟ್ ಪ್ರಕರವೇ ಪರಿಹಾರ ಬೇಕು ಅಂತ ರೈತರು ಪಟ್ಟು ಹಿಡಿದಿದ್ದಾರೆ. ಬಿಡಿಎ ಮಾತ್ರ ಹೊಸ ಆಕ್ಟ್ ನಮಗೆ ಅನ್ವಯಿಸಲ್ಲ ಅಂತ ಹೇಳ್ತಿರೋದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇವತ್ತು ರೈತರ ಜೊತೆ ಸಭೆ ಬಳಿಕ ಡಿಸಿಎಂ ರೋಡ್ ಮಾಡೇ ಮಾಡುತ್ತೇವೆ.ವಿಳಂಬ ಮಾಡಲ್ಲ. ಕಾನೂನು ತಜ್ಜರು ಹಾಗೂ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಹೊಸ ಆಕ್ಟ್ ಪ್ರಕಾರ ಭೂಪರಿಹಾರ ನೀಡೋ ಸಂಬಂಧ ಚರ್ಚಿಸುತ್ತೇವೆ ಅಂತ ಭರವಸೆ ನೀಡಿದರು.
ಅನೇಕ ವಿಘ್ನಗಳ ಬಳಿಕ ಬಿಡಿಎ ಕೆಲ ತಿಂಗಳ ಹಿಂದೆ ಈ ಯೋಜನಗೆ ಬಿಡ್ ಕೂಡ ಆಹ್ವಾನಿಸಿತ್ತು.ಆದ್ರೆ ಬಿಡ್ ನಲ್ಲಿ ಕಂಪನಿಗಳು ಭಾಗಿಯಾಗದ ಕಾರಣ ಟೆಂಡರ್ ಪ್ರಕ್ರಿಯೆಯನ್ನ ರದ್ದು ಮಾಡಬೇಕಾದ ಪರಿಸ್ಥಿತಿ ಎದುರಾಯಿತು.ಇದೀಗ ಮತ್ತೆ ರೈತರ ಭೂಪರಿಹಾರ ಘೋಷಿಸಿ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧಾರ ಮಾಡಿದೆ. ಬಿಡಿಎ ಬಳಿ ಸೈಟ್ ಫ್ಲ್ಯಾಟ್ ಗಳನ್ನ ಅಡವಿಟ್ಟರು 500 ಕೋಟಿ ನೀಡೋದು ಗ್ಯಾರೆಂಟಿ ಇಲ್ಲದಿರುವಾಗ ಬಿಡಿಎ ಫೆರಿಫೆರಲ್ ರಿಂಗ್ ರೋಡ್ ಮಾಡೇ ತಿರುತ್ತೇನೆ ಅಂತ ಹೊರಟ್ಟಿದೆ.ಇತ್ತ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ನಿರ್ಮಿಸೋಣ ಅಂತ ಹೋದ್ರೆ ಬಿಡ್ ನಲ್ಲಿ ಕಂಪನಿಗಳು ಭಾಗಿಯಾಗದೆ ಇರೋದು ಬಿಡಿಎಗೆ ಭಾರಿ ತಲೆನೋವು ತಂದಿದೆ.ಆದ್ರೆ ಇದೀಗ ಸರ್ಕಾರ ಯಾವ ರೀತಿ ಯೋಜನೆ ಕೈಗೆತ್ತಿಕೊಳ್ಳುತ್ತೆ ಅನ್ನೋದು ಕುತೂಹಲ ಕೆರಳಿಸಿದೆ.