ರಿಷಬ್ ಪಂತ್ ಅವರು ಮುಂದಿನ ಐಪಿಎಲ್ನಲ್ಲಿ ಆಡಲಿದ್ದಾರೆ ಎಂದು ದೆಹಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕ ಸೌರವ್ ಗಂಗೂಲಿ ಹೇಳಿದರು. ದೆಹಲಿ ತಂಡದ ನಾಯಕರೂ ಆಗಿರುವ ಪಂತ್, ಕಳೆದ ವರ್ಷದ ಡಿಸೆಂಬರ್ನಲ್ಲಿ ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು.
ದೆಹಲಿ- ಡೆಹ್ರಾಡೂನ್ ಹೆದ್ದಾರಿಯ ರೂರ್ಕಿ ಬಳಿ ಅವರು ಚಲಾಯಿಸುತ್ತಿದ್ದ ಮರ್ಸಿಡಿಸ್ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಹೊಡೆದಿತ್ತು.
ಜಾಧವಪುರ ವಿಶ್ವವಿದ್ಯಾಲಯದ ಸಾಲ್ಟ್ಲೇಕ್ ಕ್ಯಾಂಪಸ್ ಮೈದಾನದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ಆಟಗಾರರ ಜೊತೆ ಪಂತ್ ಗುರುವಾರ ಕೆಲ ಕಾಲ ಕಳೆದರು.
‘ಪಂತ್ ಗುಣಮುಖರಾಗಿದ್ದಾರೆ. ಬರುವ ಐಪಿಎಲ್ನಲ್ಲಿ ಆಡಲಿದ್ದಾರೆ’ ಎಂದು ಗಂಗೂಲಿ ವರದಿಗಾರರಿಗೆ ತಿಳಿಸಿದರು. ಪಂತ್ ಅನುಪಸ್ಥಿತಿಯಲ್ಲಿ ಕಳೆದ ಐಪಿಎಲ್ ಆವೃತ್ತಿಯಲ್ಲಿ ಡೇವಿಡ್ ವಾರ್ನರ್ ತಂಡವನ್ನು ಮುನ್ನಡೆಸಿದ್ದರು. ಆದರೆ ತಂಡ ಕೊನೆಯಿಂದ ಎರಡನೇ ಸ್ಥಾನ ಗಳಿಸಿ ದಯನೀಯ ಹಿನ್ನಡೆ ಕಂಡಿತ್ತು.
‘ಅವರು ಗುರುವಾರ ಅಭ್ಯಾಸ ನಡೆಸಿಲ್ಲ. ಅದಕ್ಕಾಗಿ ಅವರಿಗೆ ಸಾಕಷ್ಟು ಸಮಯವಿದೆ. ಜನವರಿಯೊಳಗೆ (2024) ಅವರು ಇನ್ನಷ್ಟು ಫಿಟ್ ಆಗಲಿದ್ದಾರೆ’ ಎಂದು ಗಂಗೂಲಿ ಹೇಳಿದರು.