ಡಿವೈನ್ ಸ್ಟಾರ್ ನಟ ರಿಷಬ್ ಶೆಟ್ಟಿ ಸದ್ಯ ಕಾಂತಾರ ಅಧ್ಯಾಯ 1ರ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಬಿಡುವು ಮಾಡಿಕೊಂಡು ಪತ್ನಿ ಮಕ್ಕಳೊಂದಿಗೆ ಎಂಜಾಯ್ ಮಾಡ್ತಿದ್ದಾರೆ.
ಕಳೆದ ಕೆಲ ದಿನಗಳಿಂದ ಡಿವೈನ್ ಸ್ಟಾರ್ ದಂಪತಿಗಳು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಮೊದಲು ಚಿಕ್ಕಮಗಳೂರಿನ ಹರಿಹರದ ದೇವಸ್ಥಾನಕ್ಕೆ ಭೇಟಿ ನೀಡಿದ್ದ ದಂಪತಿ ಇದೀಗ ಶಾರದೆಯ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ.
ಮಗು ವಿದ್ಯಾಭ್ಯಾಸ ಆರಂಭಿಸುವ ಮುನ್ನ ಅಥವಾ ಶಾಲೆಗೆ ಸೇರಿಸುವ ಮುನ್ನ ಅಕ್ಷರಭ್ಯಾಸ ಮಾಡುವ ಪದ್ಧತಿ ಇದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಇದೀಗ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಮಗಳಿಗೆ ಅಕ್ಷರಭ್ಯಾಸ ಮಾಡಿಸಿದ್ದಾರೆ.
ಮಗಳು ರಾಧ್ಯಾಳಿಗೆ ಶೃಂಗೇರಿಯ ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ ಅಕ್ಷರಭ್ಯಾಸ ಮಾಡಿಸಿದ್ದಾರೆ ರಿಷಬ್ ಶೆಟ್ಟಿ.
ಕುಟುಂಬ ಸಮೇತ ದೇವಾಸ್ಥಾನಗಳಿಗೆ ಪ್ರವಾಸ ಕೈಗೊಂಡಿದ್ದ ರಿಷಬ್ ಶೆಟ್ಟಿ ಮಗಳು ಅಕ್ಷರಭ್ಯಾಸ ಮಾಡುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದಾರೆ. “ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ ನಮ್ಮ ಪುಟ್ಟ ರಾಧ್ಯಾಳ ಅಕ್ಷರ ಅಭ್ಯಾಸದ ಕ್ಷಣ…ಪುಟ್ಟ ಹೆಜ್ಜೆಗಳಿಂದ ಪುಟ್ಟ ಪದಗಳವರೆಗೆ..” ಎಂದು ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ ಮತ್ತು ಪ್ರಗತಿ ರಿಷಬ್ ಶೆಟ್ಟಿ ದಂಪತಿಯು ತಮ್ಮ ಮಕ್ಕಳಿಗೆ ರಣ್ವಿತ್ ಶೆಟ್ಟಿ ಮತ್ತು ರಾಧ್ಯಾ ಶೆಟ್ಟಿ ಎಂದು ಹೆಸರು ಇಟ್ಟಿದ್ದಾರೆ.
ಇತ್ತೀಚಿಗಷ್ಟೇ ಕಾಂತಾರ ಸಿನಿಮಾ ಬಗ್ಗೆ ಮಾಧ್ಯಮಗಳ ಜೊತೆ ಮಾತಾಡಿದ ನಟ ರಿಷಬ್ ಶೆಟ್ಟಿ, ಕಾಂತಾರ ಚಾಪ್ಟರ್ 1 ಸಿನಿಮಾ ಕಥೆ ಬಗ್ಗೆ ಏನನ್ನು ಹೇಳೋದಿಲ್ಲ. ಎಲ್ಲರೂ ಥಿಯೇಟರ್ನಲ್ಲೇ ಸಿನಿಮಾ ನೋಡಬೇಕು ಎಂದ್ರು. ಅಲ್ಲದೇ ಕಾಂತಾರ ಸಿನಿಮಾ ಬಗ್ಗೆ ಹೊಂಬಾಳೆ ಸಂಸ್ಥೆಯವರೇ ಅಪ್ಡೇಟ್ ನೀಡುವುದು ಸೂಕ್ತ ಎಲ್ಲವನ್ನು ಅವರೇ ಘೋಷಣೆ ಮಾಡ್ತಾರೆ ಎಂದು ಹೇಳಿದ್ದರು.
ಕಾಂತಾರ ಚಾಪ್ಟರ್ 1 ಸಿನಿಮಾ ಬಗ್ಗೆ ಹೊಸ ಅಪ್ಡೇಟ್ಗಳು ಹೊರಬಿದ್ದಿದೆ. ಕಾಂತಾರ ಚಾಪ್ಟರ್ 1 ಶೂಟಿಂಗ್ 1 ವಾರದೊಳಗೆ ಪ್ರಾರಂಭವಾಗಲಿದೆ. 20 ದಿನಗಳ ವೇಳಾಪಟ್ಟಿಯೊಂದಿಗೆ. ಈ ಶೆಡ್ಯೂಲ್ನಲ್ಲಿ ತಂಡವು ಅರಣ್ಯದಲ್ಲಿ ಸಿನಿಮಾ ಪ್ರಮುಖ ಭಾಗಗಳನ್ನು ಶೂಟ್ ಮಾಡಲಿದ್ದು, ಚಿತ್ರದ ಕಥೆಗೆ ಹೊಂದಿಕೆಯಾಗುವಂತೆ ಕುಂದಾಪುರದ ಕರಾವಳಿ ಪ್ರದೇಶದಲ್ಲಿ 200×200 ಅಡಿಯ ಬೃಹತ್ ಸೆಟ್ ನಿರ್ಮಿಸಲಾಗಿದೆ.
ಕುಂದಾಪುರದಲ್ಲಿ ಸೆಟ್ ನಿರ್ಮಿಸಲು ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ನಿಂದ 600 ಕಾರ್ಪೆಂಟರ್ಗಳು ಮತ್ತು ಸ್ಟಂಟ್ ಮಾಸ್ಟರ್ಗಳನ್ನು ನೇಮಿಸಲಾಗಿದೆ. ಅಲ್ಲದೆ, ಸೆಟ್ ಮಾಡುವ ಮೊದಲು, ನಟರಿಗೆ ತರಬೇತಿಯನ್ನು ನೀಡಲಾಗುತ್ತಿದೆ.