ನಟ ರಿಷಬ್ ಶೆಟ್ಟಿ ಸದ್ಯ ‘ಕಾಂತಾರ ಚಾಪ್ಟರ್ 1’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಕುಂದಾಪುರದ ಕೆರಾಡಿಗೆ ಬಂದ ತೆಲುಗು ನಟ ರಾಣಾ ದಗ್ಗುಬಾಟಿ ಅವರನ್ನು ಭೇಟಿಯಾಗಿ ರಿಷಬ್ ಶೆಟ್ಟಿ ಕನ್ನಡ ಕಲಿಸಿದ್ದಾರೆ. ಇದರ ಜೊತೆಗೆ ರಿಷಬ್ ಶೆಟ್ಟಿ ಬಳಿ ರಾಜ್ಕುಮಾರ್ ಸಿನಿಮಾದ ಡೈಲಾಗ್ ಕೂಡ ಕಲಿತಿದ್ದಾರೆ ನಟ ರಾಣಾ ದಗ್ಗುಬಾಟಿ.
ಒಟಿಟಿಗಾಗಿ ‘ದಿ ರಾಣಾ ದಗ್ಗುಬಾಟಿ ಶೋ’ ಎಂಬ ಹೆಸರನ್ನೇ ಇದಕ್ಕೆ ಇಟ್ಟಿದ್ದಾರೆ. ರಿಷಬ್ರನ್ನು ಸಂದರ್ಶನ ಮಾಡಲು ಕುಂದಾಪುರದ ಕೆರಾಡಿಗೆ ಭೇಟಿ ಕೊಟ್ಟಿರೋದು ವಿಶೇಷ. ಇವರೊಂದಿಗೆ ಕುಡ್ಲದ ಬೆಡಗಿ ನೇಹಾ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ. ಕುಂದಾಪುರದಲ್ಲಿ `ಕಾಂತಾರ ಚಾಪ್ಟರ್ 1′ ಶೂಟಿಂಗ್ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೆರಾಡಿಯ ಸರ್ಕಾರಿ ಶಾಲೆಗೆ ತೆರಳಿ ಕನ್ನಡ ಕಲಿಯುವ ಪ್ರಯತ್ನ ಮಾಡಿದ್ದಾರೆ ರಾಣಾ ದಗ್ಗುಬಾಟಿ. ರಾಜ್ಕುಮಾರ್ ಅವರ ‘ಹೇಳು ಪಾರ್ಥ’ ಡೈಲಾಗ್ ಅನ್ನು ರಾಣಾಗೆ ರಿಷಬ್ ಹೇಳಿ ಕೊಟ್ಟಿದ್ದಾರೆ. ಇದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡ ಕಲಿಯುವ ಆಸಕ್ತಿ ತೋರಿದ ರಾಣಾಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.