ಕನ್ನಡದ ಹಿರಿಯ ನಟ ಮಂಡ್ಯ ರಮೇಶ್ ಇತ್ತೀಚೆಗೆ ಅಪಘಾತಕ್ಕೆ ಒಳಗಾಗಿದ್ದರು. ಕಳೆದ ಎಂಟು ತಿಂಗಳ ಹಿಂದೆ ಸಿನಿಮಾದ ಶೂಟಿಂಗ್ ನಲ್ಲಿ ನಡೆದ ದುರಂತದಿಂದ ಮಂಡ್ಯ ರಮೇಶ್ ಅವರಿಗೆ ಎದ್ದು ನಿಲ್ಲೋದು ಸಾಧ್ಯವಾಗುತ್ತಿರಲಿಲ್ಲ. ಈ ವೇಳೆ ನನಗೆ ಸಹಾಯ ಮಾಡಿದ್ದು ದರ್ಶನ್ ಹಾಗೂ ರಿಷಬ್ ಶೆಟ್ಟಿ ಮಾತ್ರ ಎಂದು ಮಂಡ್ಯ ರಮೇಶ್ ಹೇಳಿದ್ದಾರೆ.
ನಾನು ಬೆಡ್ ಮೇಲೆ ಇದ್ದಾಗ ನನ್ನ ಕಡೆಯವರು ಚಿತ್ರೋದ್ಯಮದ ಕೆಲವರ ಬಳಿ ಹಣದ ಸಹಾಯಕ್ಕಾಗಿ ಬೇಡಿಕೆ ಇಟ್ಟು ಕಾಲ್ ಮಾಡಿದ್ರು. ಆಗ ಒಬ್ಬರ ಹೊರತೂ ಬೇರೆ ಯಾರೂ ಕೂಡ ಆಗ ಸಹಾಯಕ್ಕೆ ಮುಂದೆ ಬಂದಿಲ್ಲ. ಕನ್ನಡ ಆ ಒಬ್ಬ ನಟ-ನಿರ್ದೇಶಕ ಮಾತ್ರ ನನ್ನ ಸಹಾಯಕ್ಕೆ ಬಂದ್ರು. ಅಚ್ಚರಿ ಅಂದ್ರೆ ನಾನು ಅವರ ಜೊತೆ ಯಾವ ಸಿನಿಮಾದಲ್ಲೂ ನಟಿಸಿಲ್ಲ. ಅವರೇ ನನಗೆ ಫೋನ್ ಮಾಡಿ ‘ಭೀಕರ ಅಪಘಾತದಲ್ಲಿ ಬದುಕುಳಿದಿದ್ದೆ ದೊಡ್ಡದು, ಕಳೆದ ಒಂದು ತಿಂಗಳಿಂದ ಹಾಸಿಗೆ ಹಿಡಿದಿದ್ದೀರಾ, ಜೀವನ ಹೇಗೆ ನಡಿತಿದೆ ಅಣ್ಣಾ ಅಂತ ಮಾತಾಡಿ, ಕಾಲ್ ಕಟ್ ಮಾಡಿದ್ರು. ಫೋನ್ ಕಟ್ ಆದ ತಕ್ಷಣ ನನ್ನ ಅಕೌಂಟ್ಗೆ ಹಣ ಬಂದಿತ್ತು. ಆ ನಟ ಬೇರೆ ಯಾರು ಅಲ್ಲ ನಟ ರಿಷಬ್ ಶೆಟ್ಟಿ ಎಂದು ಮಂಡ್ಯ ರಮೇಶ್ ಹೇಳಿದ್ದಾರೆ.
‘ಈ ಹಿಂದೆ ರಂಗಮಂದಿರ ನಿರ್ಮಿಸುವಾಗ ಸಮಯದಲ್ಲಿ ಜನರೇಟರ್ ಅಳವಡಿಸಲು ನನ್ನ ಬಳಿ ಹಣವಿಲ್ಲದೇ ಒದ್ದಾಡ್ತಿದ್ದೆ ಆಗ ಜನರೇಟರ್ ತೆಗೆದುಕೊಳ್ಳಿ ಅಂತ ನಟ ದರ್ಶನ್ (Darshan) ನನ್ನ ಜೇಬಿಗೆ ಹಣ ಇಟ್ಟು ಹೋಗಿದ್ದರು . ಹೀಗೆ ಕೆಲವರು ಮಾತ್ರ ಕಷ್ಟದ ಸಮಯದಲ್ಲಿ ಸಹಾಯ ಮಾಡಿದ್ದಾರೆ’ ಎಂದು ಮಂಡ್ಯ ರಮೇಶ್ ಹೇಳಿದ್ದಾರೆ.