ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಆಸ್ತಿ ಮೌಲ್ಯವು ಹೆಚ್ಚಳವಾಗಿದ್ದು, “ಸಂಡೇ ಟೈಮ್ಸ್ ರಿಚ್ಲಿಸ್ಟ್’ನಲ್ಲಿ ದಂಪತಿ 275ನೇ ಸ್ಥಾನದಿಂದ 245ನೇ ಸ್ಥಾನಕ್ಕೆ ಏರಿದ್ದಾರೆ.
2022-23ರಲ್ಲಿ ದಂಪತಿ ಪಡೆದ ಲಾಭಾಂಶವೂ ಹೆಚ್ಚಳವಾಗಿದ್ದು, ರಿಷಿ ಸುನಕ್ 23.24 ಕೋಟಿ ರೂ. ಲಾಭಾಂಶ ಪಡೆದಿದ್ದರೆ, ಅಕ್ಷತಾ 137.30 ಕೋಟಿ ರೂ. ಲಾಭಾಂಶ ಗಳಿಸಿದ್ದಾರೆ.
ಇದರೊಂದಿಗೆ ದಂಪತಿಯ ನಿವ್ವಳ ಆಸ್ತಿ ಮೌಲ್ಯವು 6,873 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಬೆಂಗಳೂರು ಮೂಲದ ಇನ್ಫೋಸಿಸ್ನಲ್ಲಿ ಅಕ್ಷತಾ ಮೂರ್ತಿ ಹೊಂದಿರುವ ಷೇರುಗಳೇ ದಂಪತಿಯ ಅತ್ಯಂತ ಮೌಲ್ಯಯುತ ಆಸ್ತಿ ಯಾಗಿದೆ. ಬ್ರಿಟನ್ನಲ್ಲಿರುವ ಅತ್ಯಂತ ಶ್ರೀಮಂತ ಕುಟುಂಬಗಳ ಸಾಲಿನಲ್ಲಿ ಈ ಬಾರಿಯೂ ಭಾರತೀಯ ಮೂಲದ ಹಿಂದುಜಾ ಕುಟುಂಬ ಅಗ್ರ ಸ್ಥಾನದಲ್ಲಿದೆ.