ಕೆಜಿಎಫ್ ಸಿನಿಮಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಗೆ ಪರಭಾಷೆಯಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಈಗಾಗಲೇ ಯಶ್ ಹಿಂದಿಯಲ್ಲಿ ‘ರಾಮಾಯಣ’ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಯಶ್ ಗೆ ಮತ್ತೊಂದು ಆಫರ್ ಬಂದಿದೆ ಎನ್ನಲಾಗಿದೆ.
ರಾಮಾಯಣ್ ಸಿನಿಮಾದ ಬಳಿಕ ಯಶ್ ಗೆ ಮತ್ತೊಂದು ಹಿಂದಿ ಸಿನಿಮಾದಿಂದ ಆಫರ್ ಬಂದಿದೆ. ಸುಭಾಷ್ ಘಾಯ್ ನಿರ್ದೇಶನದ ‘ಖಳನಾಯಕ್’ ಸಿನಿಮಾ 1993ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಸಂಜಯ್ ದತ್, ಮಾಧುರಿ ದೀಕ್ಷಿತ್, ಜಾಕಿ ಶ್ರಾಫ್ ಮೊದಲಾದವರು ನಟಿಸಿದ್ದರು. ಈ ಸಿನಿಮಾ ಗೆದ್ದಿತ್ತು. ಸುಮಾರು 31 ವರ್ಷಗಳ ಬಳಿಕ ಸೀಕ್ವೆಲ್ ಮಾಡಲಾಗುತ್ತಿದೆ. ಈಗ ಸುಭಾಷ್ ಹೊಸ ಪಾತ್ರವರ್ಗದೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಿನಿಮಾದ ಸ್ಕ್ರಿಪ್ಟ್ ಕೂಡ ಫೈನಲ್ ಆಗಿದೆ ಎನ್ನಲಾಗುತ್ತಿದೆ.
ಸಂಜಯ್ ದತ್ ಮಾಡಿದ ಬಲ್ಲು ಬಲರಾಮ್ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಈ ಪಾತ್ರಕ್ಕೆ ಸುಭಾಷ್ ಘಾಯ್ ಅವರು ರಣವೀರ್ ಸಿಂಗ್, ರಣಬೀರ್ ಕಪೂರ್ ಅವರನ್ನು ಅಪ್ರೋಚ್ ಮಾಡುವ ಪ್ಲ್ಯಾನ್ನಲ್ಲಿದ್ದಾರೆ. ಇಷ್ಟೇ ಅಲ್ಲ, ದಕ್ಷಿಣದ ನಟರಿಗೂ ಆಫರ್ ಕೋಡೋ ಆಲೋಚನೆ ಅವರಿಗೆ ಇದೆ. ಯಶ್ ಹಾಗೂ ಅಲ್ಲು ಅರ್ಜುನ್ ಅವರು ಕೂಡ ಲಿಸ್ಟ್ನಲ್ಲಿದ್ದಾರೆ.
ಇತ್ತೀಚೆಗೆ ಸಿನಿಮಾದ ಬಗ್ಗೆ ಮಾತನಾಡಿದ್ದ ಸುಭಾಷ್ ಘಾಯ್, ‘ಹೊಸ ಪಾತ್ರಗಳೊಂದಿಗೆ ನಾನು ಖಳನಾಯಕ್ ಸೀಕ್ವೆಲ್ ಮಾಡಲು ಬಯಸುತ್ತಿದ್ದೇನೆ. ಸಂಜಯ್ ದತ್ ಅವರೇ ಬಲ್ಲಿ ಬಲರಾಮ್ ಪಾತ್ರ ಮಾಡುತ್ತಾರೆ. ಬಲ್ಲುಗೆ ಈಗ 55 ವರ್ಷ’ ಎಂದು ಅವರು ಹೇಳಿದ್ದರು. ಈಗ ಅವರು ಯಶ್, ಅಲ್ಲು ಅರ್ಜನ್ ಅವರನ್ನು ಅಪ್ರೋಚ್ ಮಾಡುತ್ತಿರುವುದು ಯಾವ ಪಾತ್ರಕ್ಕೆ ಅನ್ನೋ ಕುತೂಹಲ ಶುರುವಾಗಿದೆ.