ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಗೆ ಬ್ರೇಕ್ ಹಾಕಿದ್ದು ಹೊಸ ವರ್ಷವನ್ನು ಕುಟುಂಬದ ಜೊತೆ ಸೆಲೆಬ್ರೇಟ್ ಮಾಡಿದ್ದಾರೆ. ಫ್ಯಾಮಿಲಿ ಜೊತೆಗಿನ ಸುಂದರ ಫೋಟೋಗಳನ್ನು ನಟ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಮ್ಮ ಪುಟ್ಟ ಕುಟುಂಬದ ಕಡೆಯಿಂದ ಹೊಸ ವರ್ಷಕ್ಕೆ ಶುಭಾಶಯಗಳು. ನಿಮ್ಮೆಲ್ಲರಿಗೂ ಸಂತೋಷ, ಪ್ರೀತಿ ಮತ್ತು ನಗು ತುಂಬಿರಲಿ ಎಂದು ಹಾರೈಸುತ್ತೇನೆ. ನಮ್ಮ ಕಡೆಯಿಂದ ನಿಮಗೆ ಹೊಸ ವರ್ಷದ ಶುಭಾಶಯಗಳು ಎಂದು ಯಶ್ ದಂಪತಿ ಫ್ಯಾನ್ಸ್ಗೆ ವಿಶ್ ಮಾಡಿದ್ದಾರೆ.
ಇನ್ನೂ ಯಶ್ ಕಂದು ಬಣ್ಣದ ಧಿರಿಸಿನಲ್ಲಿದ್ರೆ, ರಾಧಿಕಾ ಬಿಳಿ ಬಣ್ಣದ ಉಡುಗೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ಬ್ಯೂಟಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಸದ್ಯ ಯಶ್ ಅವರು ಟಾಕ್ಸಿಕ್ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಕೆಲಸಗಳಿಗೆ ಕೊಂಚ ಬ್ರೇಕ್ ಹಾಕಿರುವ ಯಶ್ ಫ್ಯಾಮಿಲಿ ಜೊತೆ ಹೊಸ ವರ್ಷವನ್ನು ಭರ ಮಾಡಿಕೊಂಡಿದ್ದಾರೆ.