ಹಿಟ್ಮ್ಯಾನ್ ಖ್ಯಾತಿಯ ಸ್ಪೋಟಕ ಆರಂಭಿಕ ಬ್ಯಾಟ್ಸ್ಮನ್ ಹಾಗೂ ಮುಂಬೈ ಇಂಡಿಯನ್ಸ್ ಮತ್ತು ಭಾರತ ತಂಡ ಕಪ್ತಾನ ರೋಹಿತ್ ಶರ್ಮಾ ತಮ್ಮ 36ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಏಪ್ರಿಲ್ 30 (ಭಾನುವಾರ) ರೋಹಿತ್ ಶರ್ಮಾ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿರುವ ಹೈದರಾಬಾದ್ ಫ್ಯಾನ್ಸ್ ಬಳಗ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿ ಎಂಬಂತೆ 60 ಅಡಿ ಎತ್ತರದ ಬೃಹತ್ ಕಟೌಟ್ ನಿರ್ಮಾಣ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಕ್ರಿಕೆಟಿಗನೊಬ್ಬನಿಗೆ ಇಟ್ಟು ದೊಡ್ಡ ಕಟೌಟ್ ನಿರ್ಮಾಣ ಮಾಡಲಾಗಿರುವುದು ಇದೇ ಮೊದಲ ಬಾರಿ ಆಗಿದೆ. ಹೀಗಾಗಿ ರೋಹಿತ್ ಶರ್ಮಾ ಅವರಿಗೆ ಹುಟ್ಟುಹಬ್ಬದ ದಿನದಂದು ಭರ್ಜರಿ ಗಿಫ್ಟ್ ಸಿಕ್ಕಿದೆ ಎನ್ನಲ್ಲಾಗಿದೆ.
ಕೇವಲ ಭಾರತದಲ್ಲಿ ಮಾತ್ರವಲ್ಲಿ ರೋಹಿತ್ ಶರ್ಮಾ ಅಭಿಮಾಣಿಗಳು ವಿಶ್ವ ವ್ಯಾಪಿ. 2007ರ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಗೆಲುವಿನಲ್ಲಿ ರೋಹಿತ್ ಶರ್ಮಾ ಅವರ ಅಳಿಲು ಸೇವೆಯಿದೆ. 2011ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಲಭ್ಯವಾಗಿರಲಿಲ್ಲ. ಬಳಿಕ 2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಭಾಗವಾಗಿದ್ದರು. ಪದಾರ್ಪಣಡೆಯ ದಿನದಿಂದಲೂ ಗಮನ ಸೆಳೆದಿರುವ ರೋಹಿತ್, ಇಂದು ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಭಾರತ ತಂಡದ ಕ್ಯಾಪ್ಟನ್ ಕೂಡ ಆಗಿದ್ದಾರೆ.
“ಪೋಸ್ಟರ್ ಹರಿದು ಹೀರೋ ಬಂದಿದ್ದಾನೆ ನೋಡಿ, ಇದು ವಿಶೇಷ ದಿನ,” ಎಂದು ಮುಂಬೈ ಇಂಡಿಯನ್ಸ್ ಪೋಸ್ಟರ್ ಅನಾವರಣದ ವಿಡಿಯೋ ಹಂಚಿಕೊಂಡು ತನ್ನ ಟ್ವಿಟರ್ ಗೋಡೆಯ ಮೇಲೆ ಬರೆದುಕೊಂಡಿದೆ.
36 ವರ್ಷದ ಅನುಭವಿ ಬ್ಯಾಟರ್ ರೋಹಿತ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಈವರೆಗೆ 234 ರನ್ಗಳನ್ನು ಬಾರಿಸಿದ್ದಾರೆ. ಒದ್ದಾರೆ 6060 ರನ್ ಬಾರಿಸಿರುವ ಅವರು, ಐಪಿಎಲ್ ಇತಿಹಾಸದಲ್ಲಿ 6 ಸಾವಿರ ರನ್ ಗಡಿ ದಾಟಿದ 3ನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಅವರ ಐಪಿಎಲ್ ವೃತ್ತಿಬದುಕಿನಲ್ಲಿ 1 ಶತಕದ ಜೊತೆಗೆ ಬರೋಬ್ಬರಿ 41 ಅರ್ಧಶತಕಗಳನ್ನು ಸಿಡಿಸಿದ್ದಾರೆ. 2013ರ ಐಪಿಎಲ್ ಟೂರ್ನಿಯ ನಡುವೆ ರಿಕಿ ಪಾಂಟಿಂಗ್ ಅವರಿಂದ ನಾಯಕತ್ವ ಪಡೆದುಕೊಂಡ ರೋಹಿತ್ ಶರ್ಮಾ, ತಂಡಕ್ಕೆ 2013, 2015, 2017, 2019, 2020ರ ಆವೃತ್ತಿಗಳಲ್ಲಿ ಚಾಂಪಿಯನ್ಸ್ ಕಿರೀಟ ತೊಡಿಸಿದ್ದಾರೆ.