ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ (ಸೆ.15) ನಡೆದಿದ್ದ ಏಷ್ಯಾ ಕಪ್ ಟೂರ್ನಿಯ ಸೂಪರ್-4ರ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ್ದ 266 ರನ್ ಗುರಿ ಹಿಂಬಾಲಿಸಿದ ಭಾರತ ತಂಡದ ಪರ ರೋಹಿತ್ ಶರ್ಮಾ ತಾವು ಎದುರಿಸಿದ ಎರಡನೇ ಎಸೆತದಲ್ಲಿಯೇ ಬಾಂಗ್ಲಾ ವೇಗಿ ತಂಝಿಮ್ ಹಸನ್ ಶಕಿಬ್ಗೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ಗೋಲ್ಡನ್ ಡಕ್ಔಟ್ ಆದರು.
ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ತಮ್ಮ ಒಡಿಐ ವೃತ್ತಿ ಜೀವನದಲ್ಲಿ 15 ಬಾರಿ ಗೋಲ್ಡನ್ ಡಕ್ ಔಟ್ ಆಗಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ (15 ಬಾರಿ) ಅವರ ಹೆಸರಿನಲ್ಲಿದ್ದ ಅನಗತ್ಯ ದಾಖಲೆಯನ್ನು ಸರಿದೂಗಿಸಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 20 ಬಾರಿ ಗೋಲ್ಡನ್ ಡಕ್ಔಟ್ ಆಗಿ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ಭಾರತದ ಪರ ಒಡಿಐ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಗೋಲ್ಡನ್ ಡಕ್ಔಟ್ ಆದವರು
ಸಚಿನ್ ತೆಂಡೂಲ್ಕರ್- 20 ಬಾರಿ
ಜಾವಗಲ್ ಶ್ರೀನಾಥ್- 19 ಬಾರಿ
ಅನಿಲ್ ಕುಂಬ್ಳೆ-18 ಬಾರಿ
ಯುವರಾಜ್ ಸಿಂಗ್-17 ಬಾರಿ
ಹರ್ಭಜನ್ ಸಿಂಗ್-17 ಬಾರಿ
ಸೌರವ್ ಗಂಗೂಲಿ- 16 ಬಾರಿ
ವಿರಾಟ್ ಕೊಹ್ಲಿ-15 ಬಾರಿ
ರೋಹಿತ್ ಶರ್ಮಾ-15 ಬಾರಿ
ಏಷ್ಯಾ ಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲ್ಡನ್ ಡಕ್ ಔಟ್
3- ರುಬೆಲ್ ಹುಸೇನ್ ( ಬಾಂಗ್ಲಾದೇಶ)
3- ಸಲ್ಮಾನ್ ಬಟ್ ( ಪಾಕಿಸ್ತಾನ)
3-ಅಮಿನುಲ್ ಇಸ್ಲಾಮ್ (ಬಾಂಗ್ಲಾದೇಶ)
3- ಮಹೇಲಾ ಜಯವರ್ಧನೆ (ಶ್ರೀಲಂಕಾ)
3- ರೋಹಿತ್ ಶರ್ಮಾ (ಭಾರತ)