ರೋಹಿತ್ ಶರ್ಮ ಬೌಲಿಂಗ್ ಸ್ಟೈಲ್ಗೆ ಪತ್ನಿ ಕ್ಲೀನ್ ಬೋಲ್ಡ್ ಆಗಿದ್ದು, ರಿತಿಕಾ ರಿಯಾಕ್ಷನ್ ಭಾರೀ ವೈರಲ್ ಆಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 2 ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು. ಅವು ಯಾವುವೆಂದರೆ, ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಹಾಲಿ ನಾಯಕ ರೋಹಿತ್ ಶರ್ಮ ಬೌಲಿಂಗ್ ಮಾಡಿದ್ದು, ಅಲ್ಲದೆ, ಇಬ್ಬರೂ ಕೂಡ ಒಂದೊಂದು ವಿಕೆಟ್ ಪಡೆದಿದ್ದು.
ಕೊಹ್ಲಿ 9 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ನಲ್ಲಿ ವಿಕೆಟ್ ಪಡೆದರೆ, ರೋಹಿತ್ 4284 ದಿನಗಳ ಬಳಿಕ ಅಂದರೆ, 7 ವರ್ಷಕ್ಕೂ ಅಧಿಕ ಸಮಯದ ನಂತರ ಬೌಲಿಂಗ್ ಮಾಡಿದರು. ಅಲ್ಲದೆ, ವಿಕೆಟ್ ಕೂಡ ಪಡೆದರು.
ರೋಹಿತ್ ಶರ್ಮ ಅವರು ಪಂದ್ಯದ ಎರಡನೇ ಇನಿಂಗ್ಸ್ನ 48ನೇ ಓವರ್ ಎಸೆದರು. ತಮ್ಮ 5ನೇ ಎಸೆತದಲ್ಲಿ ನೆದರ್ಲೆಂಡ್ಸ್ ಬ್ಯಾಟರ್ ತೇಜ ನಿಡಮನೂರು ವಿಕೆಟ್ ಪಡೆದರು. 54 ರನ್ ಬಾರಿಸಿದ್ದ ನಿಡಮನೂರು ಸಿಕ್ಸರ್ ಬಾರಿಸಲು ಯತ್ನಿಸಿ, ಮೊಹಮ್ಮದ್ ಶಮಿಗೆ ಕ್ಯಾಚ್ ನೀಡಿ, ಡಗೌಟ್ಗೆ ಮರಳಿದರು. ಈ ವಿಕೆಟ್ ಮೂಲಕ ಟೀಮ್ ಇಂಡಿಯಾ ನೆದರ್ಲೆಂಡ್ಸ್ ತಂಡವನ್ನು 250 ರನ್ಗಳಿಗೆ ಆಲೌಟ್ ಮಾಡಿ 160 ರನ್ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ.
ರೋಹಿತ್ ಶರ್ಮ ಬೌಲಿಂಗ್ಗೆ ಅವರ ಪತ್ನಿ ರಿತಿಕಾ ಸಾಜ್ದೇಹ್ ಅವರು ಕ್ಲೀನ್ ಬೋಲ್ಡ್ ಆಗಿದ್ದಾರೆ. ರಿತಿಕಾ ಕೊಟ್ಟ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿದೆ. ಬರೋಬ್ಬರಿ 7 ವರ್ಷಗಳಿಗೂ ಅಧಿಕ ಸಮಯದ ಬಳಿಕ ರೋಹಿತ್ ಬೌಲ್ ಮಾಡಿದರು. ಅಲ್ಲದೆ, ಒಂದು ವಿಕೆಟ್ ಸಹ ಪಡೆದರು. ಇನ್ನು ಕೊಹ್ಲಿ ಕೂಡ 9 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ನಲ್ಲಿ ಒಂದು ವಿಕೆಟ್ ಪಡೆದರು. ಈ ವೇಳೆ ಕ್ರೀಡಾಂಗಣದಲ್ಲಿದ್ದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ, ಅಚ್ಚರಿಯೊಂದಿಗೆ ಸಂಭ್ರಮಾಚರಣೆ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ವೈರಲ್ ಆಗಿದೆ.