ರೋಹಿತ್ ಶರ್ಮಾ ಟೀಮ್ ಇಂಡಿಯಾದ ಅದೃಷ್ಟ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಗುಣಗಾನ ಮಾಡಿದ್ದಾರೆ.
ಕಳೆದ ಟಿ20 ವಿಶ್ವಕಪ್ ಟೂರ್ನಿಯ ಗೆಲುವಿನ ಹಿನ್ನೆಲೆಯಲ್ಲಿ ಮಿಡ್ಡೇಗೆ ಬರೆದಿದ್ದ ಅಂಕಣದಲ್ಲಿ ಸುನೀಲ್ ಗವಾಸ್ಕರ್ ಈ ವಿಚಾರ ಬರೆದುಕೊಂಡಿದ್ದಾರೆ. “ಕ್ರಿಕೆಟ್ ಅಭಿಮಾನಿಗಳು ರೋಹಿತ್ ಅವರ ವೈಯಕ್ತಿಕ ಪ್ರದರ್ಶನ ಮಾತ್ರವಲ್ಲದೆ, ಅವರ ಕೌಶಲಭರಿತ ನಾಯಕತ್ವ ಮತ್ತು ಅವರ ಚುರುಕುತನವನ್ನು ಕೂಡ ಶ್ಲಾಘಿಸಿದ್ದಾರೆ. ಅವರು ಕೆಲವೊಂದು ತ್ವರಿತ ನಿರ್ಧಾರಗಳು ತಲೆಯಲ್ಲಿ ಹುಳ ಬಿಟ್ಟಂತೆ ಇರಬಹುದು. ಆದರೆ, ಅವರ ನಿರ್ಧಾರಗಳು ತಂಡಕ್ಕೆ ಅಗತ್ಯಕ್ಕಿಂತೆ ಹೆಚ್ಚಿನದಾಗಿರುತ್ತದೆ” ಎಂದು ಗವಾಸ್ಕರ್ ಹೇಳಿದ್ದಾರೆ
ರೋಹಿತ್ ಈ ಬಾರಿಯ ವಿಶ್ವಕಪ್ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ಎದುರಾಳಿ ಬೌಲರ್ಗಳ ಎಲ್ಲ ಯೋಜನೆಗಳನ್ನು ವಿಫಲಗೊಳಿಸುವ ಮೂಲಕ ತಾನು ಔಟಾದ ಬಳಿಕ ಬರುವ ಆಟಗಾರರಿಗೆ ಉತ್ತಮ ವಾತಾವರಣ ನಿರ್ಮಿಸುತ್ತಿದ್ದರು. ಅವರ ಈ ಯೋಜನೆ ಫಲ ನೀಡಿತು. ಒಂದೇ ಒಂದು ಪಂದ್ಯ ಸೋಲದೆ ಕಪ್ ಗೆದ್ದಿರುವುದು ಅವರ ನಾಯಕತ್ವದ ಮೌಲ್ಯವನ್ನು ತೋರಿಸಿಕೊಡುತ್ತದೆ ಎಂದು ಗವಾಸ್ಕರ್ ಬರೆದುಕೊಂಡಿದ್ದಾರೆ