ಗುಲಾಬಿಯು ತುಂಬಾ ಸುಂದರವಾದ ಹೂ, ಪ್ರೀತಿ, ಸ್ನೇಹ ವ್ಯಕ್ತಪಡಿಸಲು ಗುಲಾಬಿ ಹೂ ಬಳಕೆ ಮಾಡುವರು. ಗುಲಾಬಿ ಹೂ ಹೂದೋಟದಲ್ಲಿ ಇದ್ದರೆ ಆಗ ನಾನಾ ಅದು ಹೂದೋಟದ ಸೌಂದರ್ಯವನ್ನು ಎದ್ದು ಕಾಣುವಂತೆ ಮಾಡುವುದು. ಸೌಂದರ್ಯಕ್ಕಾಗಿ ಗುಲಾಬಿಯನ್ನು ಮುಡಿಗೆ ಇಟ್ಟುಕೊಳ್ಳುವ ಜನರು ಇದನ್ನು ಹಲವಾರು ರೀತಿಯ ಸೌಂದರ್ಯವರ್ಧಕವಾಗಿಯೂ ಬಳಕೆ ಮಾಡಿಕೊಂಡು ಬಂದಿರುವರು. ಗುಲಾಬಿ ಎಸಲುಗಳನ್ನು ಬಳಸಿಕೊಂಡು ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು.
ಮುಖ್ಯವಾಗಿ ಇದು ಲೈಂಗಿಕ ಜೀವನ ಸುಧಾರಿಸುವುದು, ಒತ್ತಡ ತಗ್ಗಿಸುವುದು ಮತ್ತು ತೂಕ ಇಳಿಸಲು ಕೂಡ ಸಹಕಾರಿ ಆಗಿದೆ. ಗುಲಾಬಿ ಎಸಲುಗಳಿಂದ ಯಾವೆಲ್ಲಾ ಆರೋಗ್ಯ ಲಾಭಗಳು ಸಿಗುವುದು ಎಂದು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.
ತೂಕ ಇಳಿಸಲು ಸಹಕಾರಿ
- ಗುಲಾಬಿಯು ಚಯಾಪಚಯ ವೃದ್ಧಿಸುವುದು ಹಾಗೂ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವುದು. ಇದರಿಂದ ತೂಕ ಇಳಿಸಲು ತುಂಬಾ ಸಹಕಾರಿ ಆಗಿರುವುದು.
- ಗುಲಾಬಿ ಎಸಲುಗಳನ್ನು ತಿಂದರೆ ಅದರಿಂದ ಹೊಟ್ಟೆಯು ತುಂಬಿದಂತೆ ಆಗುವುದು ಮತ್ತು ನೈಸರ್ಗಿಕವಾಗಿ ತೂಕ ಇಳಿಸಲು ಇದು ಸಹಕಾರಿ.
ಸೇವನೆ ಹೇಗೆ?
10-15 ತಾಜಾ ಗುಲಾಬಿ ಎಸಲುಗಳನ್ನು ಕುದಿಯುವ ನೀರಿಗೆ ಹಾಕಿ ಮತ್ತು ಇದು ಗುಲಾಬಿ ಬಣ್ಣಕ್ಕೆ ತಿರುಗುವುದನ್ನು ನೋಡಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಒಂದು ಚಿಟಿಕೆ ದಾಲ್ಚಿನಿ ಹುಡಿ ಹಾಕಿ. ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ತೂಕ ಇಳಿಸಬಹುದು.
ನೈಸರ್ಗಿಕ ಕಾಮೋತ್ತೇಜಕ
ಇದು ಪ್ರೀತಿಯ ಸಂಕೇತ ಮಾತ್ರವಲ್ಲದೆ, ಇದು ನೈಸರ್ಗಿಕ ಕಾಮೋತ್ತೇಜಕವಾಗಿ ಕೆಲಸ ಮಾಡುವುದು. ಗುಲಾಬಿ ಎಸಲುಗಳನ್ನು ಬಳಸಿದರೆ ಆಗ ಲೈಂಗಿಕ ಚಟುವಟಿಕೆಯು ಉತ್ತಮವಾಗುವುದು.
ಆಯುರ್ವೇದದ ಪ್ರಕಾರ ಗುಲಾಬಿ ದೇಹದಲ್ಲಿ ಎರಡು ದೋಷಗಳಂತೆ ಕೆಲಸ ಮಾಡುವುದು, ಇದರಿಂದ ಹೃದಯ, ಮನಸ್ಸು ಮತ್ತು ನರ ವ್ಯವಸ್ಥೆಯು ಉತ್ತಮವಾಗುವುದು.
ಸಲಹೆ
ಗುಲಾಬಿ ಎಸಲುಗಳನ್ನು ತೆಗೆದುಕೊಂಡು ಅದನ್ನು ಸರಿಯಾಗಿ ತೊಳೆಯಿರಿ ಮತ್ತು ಪ್ರತಿನಿತ್ಯವೂ ಇದನ್ನು ಸೇವಿಸಿ. ಇದರಿಂದ ದೇಹಕ್ಕೆ ಶಕ್ತಿ ಹಾಗೂ ಉಲ್ಲಾಸ ಬರುವುದು. ಲೈಂಗಿಕವಾಗಿಯೂ ಇದರಿಂದ ಬಲ ಸಿಗುವುದು.
ಒತ್ತಡ ಹಾಗೂ ಖಿನ್ನತೆ ದೂರ ಮಾಡುವುದು
ದೇಹದಲ್ಲಿ ನಿಶ್ಯಕ್ತಿ ಮತ್ತು ಒತ್ತಡವು ನಿದ್ರಾಹೀನತೆ ಉಂಟು ಮಾಡುವುದು ಹಾಗೂ ಇದರಿಂದ ಕಿರಿಕಿರಿ ಹೆಚ್ಚಾಗುತ್ತದೆ. ಗುಲಾಬಿ ಎಸಲುಗಳನ್ನು ಬಳಸಿಕೊಂಡರೆ ಆಗ ಈ ಸಮಸ್ಯೆಗಳನ್ನು ದೂರ ಮಾಡಬಹುದು. ಇದು ಕಾಮೋತ್ತೇಜಕವಾಗಿ ಕೆಲಸ ಮಾಡುವುದು ಎಂದು ಅಧ್ಯಯನಗಳು ಕೂಡ ಹೇಳಿವೆ.
ಸಲಹೆ
ಬಿಸಿ ನೀರಿಗೆ ಗುಲಾಬಿ ಎಸಲುಗಳನ್ನು ಹಾಕಿ. ಬಿಸಿಯಿಂದಾಗಿ ಗುಲಾಬಿಯ ಸುವಾಸನೆಯು ಬರುವುದು. ಇದು ನಿಮ್ಮ ದೇಹ ಹಾಗೂ ಮನಸ್ಸನ್ನು ಉಲ್ಲಾಸಿತವಾಗಿಸುವುದು.
ಪೈಲ್ಸ್ ನಿವಾರಣೆ
ಪೈಲ್ಸ್ ಗೆ ಗುಲಾಬಿ ಎಸಲುಗಳನ್ನು ಬಳಸಿದರೆ ಅದು ಲಾಭಕಾರಿ. ಇದರಲ್ಲಿ ಹೆಚ್ಚಿನ ನಾರಿನಾಂಶ ಹಾಗೂ ನೀರಿನಾಂಶವಿದ್ದು, ಇದು ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಹಾಕುವುದು. ರಕ್ತಸ್ರಾವವಾಗುವ ಪೈಲ್ಸ್ ಗೆ ಇದು ಆರಾಮ ನೀಡುವುದು.
ಸಲಹೆ
ಗುಲಾಬಿ ಎಸಲುಗಳನ್ನು ಸರಿಯಾಗಿ ಜಜ್ಜಿಕೊಂಡು ಅದನ್ನು ಪೇಸ್ಟ್ ಮಾಡಿ. ಇದರ ಬಳಿಕ 50 ಮಿ. ಲೀ. ನೀರಿಗೆ ಗುಲಾಬಿ ಎಸಲುಗಳ ಪೇಸ್ಟ್ ಹಾಕಿಕೊಂಡು ಖಾಲಿ ಹೊಟ್ಟೆಯಲ್ಲಿ ಮೂರು ದಿನಗಳ ಕಾಲ ಸೇವನೆ ಮಾಡಿದರೆ ಅದು ಪರಿಣಾಮಕಾರಿ.
ಸಂಕೋಚನಕಾರಿ
ರೋಸ್ ವಾಟರ್ ಚರ್ಮದ ಕಿರಿಕಿರಿ, ಚರ್ಮದಲ್ಲಿನ ಎಣ್ಣೆಯಂಶ ನಿಯಂತ್ರಣ, ಚರ್ಮವನ್ನು ನಯ ಹಾಗೂ ಬಣ್ಣ ಬರುವಂತೆ ಮಾಡುವುದು.ಅದೇ ರೀತಿಯಾಗಿ ಇದು ಸಂಕೋಚನಕಾರಿ ಕೂಡ. ಇದು ಚರ್ಮವನ್ನು ಶುಚಿಗೊಳಿಸುವುದು ಮತ್ತು ಟೋನರ್ ಆಗಿ ಕೆಲಸ ಮಾಡಿ ಯೌವನಯುತವಾಗಿ ಕಾಣುವಂತೆ ಮಾಡುವುದು.
ಗುಲಾಬಿ ಎಸಲುಗಳಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮವನ್ನು ನಯಗೊಳಿಸುವುದು ಹಾಗೂ ಚರ್ಮದ ಕಿರಿಕಿರಿ ತಪ್ಪಿಸುವುದು.
ಸಲಹೆ
ಸ್ವಲ್ಪ ರೋಸ್ ವಾಟರ್ ನ್ನು ಚರ್ಮಕ್ಕೆ ಹಚ್ಚಿಕೊಂಡರೆ ಆಗ ಇದು ಪರಿಣಾಮಕಾರಿ. ಇದನ್ನು ನಿಯಮಿತವಾಗಿ ಬಳಸಬೇಕು.
ಮೊಡವೆ ನಿವಾರಣೆ
ಮೊಡವೆ ನಿವಾರಣೆ ಮಾಡಲು ಯಾವುದಾದರೂ ನೈಸರ್ಗಿಕ ಮನೆಮದ್ದನ್ನು ಹುಡುಕುತ್ತಲಿದ್ದರೆ ಆಗ ನೀವು ಗುಲಾಬಿ ಎಸಲುಗಳನ್ನು ಬಳಸಬಹುದು. ಇದು ಒಳ್ಳೆಯ ಮೊಶ್ಚಿರೈಸ್ ಆಗಿ ಕೆಲಸ ಮಾಡುವುದು.
ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮೊಡವೆಯನ್ನು ಒಣಗಿಸುವುದು. ಫೆನಿಲೆಥೆನಾಲ್ ಅಂಶವು ನಂಜುನಿರೋಧಕವಾಗಿ ಕೆಲಸ ಮಾಡಿ ಮೊಡವೆ ನಿವಾರಣೆಗೆ ಪರಿಣಾಮಕಾರಿ.
ಸಲಹೆ
ಮೆಂತ್ಯೆ ಕಾಳುಗಳನ್ನು ರಾತ್ರಿ ವೇಳೆ ನೆನೆಯಲು ಹಾಕಿ ಬೆಳಗ್ಗೆ ಅದನ್ನು ತೆಗೆದು ಪೇಸ್ಟ್ ಮಾಡಿ ಅದಕ್ಕೆ ರೋಸ್ ವಾಟರ್ ಹಾಕಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಕಾಲ ಹಾಗೆ ಬಿಡಿ. ಇದನ್ನು ರೋಸ್ ವಾಟರ್ ನಿಂದ ತೊಳೆಯಿರಿ.
ತುಟಿಯ ಬಣ್ಣ ವೃದ್ಧಿಸುವುದು
ಗುಲಾಬಿಯು ತುಟಿಗಳ ಬಣ್ಣ ವೃದ್ಧಿಸಲು ಪ್ರಮುಖ ಪಾತ್ರ ವಹಿಸುವುದು. ಚರ್ಮವನ್ನು ಮೊಶ್ಚಿರೈಸರ್ ಮಾಡಿ ಬಣ್ಣ ಸುಧಾರಣೆ ಮಾಡುವುದು. ಗುಲಾಬಿ ಎಸಲುಗಳು ತುಟಿಯಲ್ಲಿನ ಸತ್ತ ಚರ್ಮದ ಕೋಶಗಳನ್ನು ಕಿತ್ತು ಹಾಕುವುದು ಮತ್ತು ಚರ್ಮವನ್ನು ಬಿಗಿಯಾಗಿಸುವುದು.
ಸಲಹೆ
ಗುಲಾಬಿ ಎಸಲುಗಳ ಪೇಸ್ಟ್ ಮಾಡಿ ಮತ್ತು ಇದಕ್ಕೆ ಹಾಲಿನ ಕೆನೆ ಸೇರಿಸಿ. ಕೆಲವು ಹನಿ ಜೇನುತುಪ್ಪ ಕೂಡ ಹಾಕಿ. ಇದನ್ನು ತುಟಿಗಳಿಗೆ ಹಚ್ಚಿಕೊಳ್ಳಿ. 15-20 ನಿಮಿಷ ಹಾಗೆ ಬಿಡಿ. ಇದರ ಬಳಿಕ ನೀವು ನೀರಿನಿಂದ ತೊಳೆಯಿರಿ.