ಗದಗ:- ಜಿಲ್ಲೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗಮಿಸಿದ್ರು. ಗದಗ ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಪ್ರತಿಭಟನೆ ಮಾಡುತ್ತಿರುವ ಟೆಂಟ್ ಗಳಿಗೆ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ಒಂದ್ಕಡೆ ಆರ್.ಡಿ.ಪಿ.ಆರ್ ಇಲಾಖೆ ನೌಕರರು ಹಾಗೂ ಗ್ರಾ.ಪಂ ಸದಸ್ಯರುಗಳ ಹೋರಾಟ ನಡೆಯುತ್ತಿದೆ.
ಇನ್ನೊಂದು ಟೆಂಟ್ ನಲ್ಲಿ ಖಾಸಗಿ ಕಂಪನಿಗಳಲ್ಲಿ ಹಣ ತುಂಬಿ ವಂಚನೆಗೆ ಒಳಗಾದ ಫಲಾನುಭವಿಗಳ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು.
ಈ ವೇಳೆ ರಾಜ್ಯ ಸರ್ಕಾರ ಹಾಗೂ ಆರ್.ಡಿ.ಪಿ.ಆರ್ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು. ಗ್ರಾಮೀಣ ಭಾಗದ ಬೆನ್ನೆಲುಬು ಆದ ಗ್ರಾಮ ಪಂಚಾಯತ ನೌಕರರು, ಸದಸ್ಯರು ನ್ಯಾಯಯುತ ಬೇಡಿಕೆಗಾಗಿ ಹೋರಾಟ ಮಾಡ್ತಿದ್ದಿರಿ. ನಿಮ್ಮ ಧ್ವನಿಯಾಗಿರಬೇಕು ಎಂಬ ಉದ್ದೇಶಕ್ಕೆ ಇಲ್ಲಿಗೆ ಬಂದಿದ್ದೆನೆ.
ಜವಾಬ್ದಾರಿಯುತ ಸರ್ಕಾರ ಹೇಗೆ ನಡೆದುಕೊಳ್ಳಬೇಕು ಎಂಬುದು ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತಿಲ್ಲ. ಇಷ್ಟು ದಿನದಿಂದ ಪ್ರತಿಭಟನೆ ಮಾಡ್ತಿದ್ದೀರಲ್ಲಾ, ಸಂಬಂಧಿಸಿದ ಮಂತ್ರಿ ಸೌಜನ್ಯಕ್ಕಾದ್ರೂ ಭೇಟಿಯಾಗಿ ಮನವಿ ಸ್ವೀಕರಿಸಲಿಲ್ಲ. ನಿಮ್ಮ ಸೌಜನ್ಯ ಆಲಿಸದ ದುರಹಂಕಾರ ವರ್ತನೆಯನ್ನು ಯಾರೂ ಕ್ಷಮಿಸುವುದಿಲ್ಲ.
ಆರ್.ಡಿ.ಪಿ.ಆರ್ ಸಚಿವರಿಗೆ ರಾಜ್ಯದ ಎಲ್ಲಾ ಇಲಾಖೆಯ ಬಗ್ಗೆ ಮೂಗು ತೋರಿಸಲು ಗೊತ್ತಾಗುತ್ತೆ. ಅವುಗಳ ಬಗ್ಗೆ ಚರ್ಚೆ ಮಾಡ್ತಾರೆ. ಜಗತ್ತಿನ ರಾಜಕಾರಣದ ಬಗ್ಗೆ ಮಾತನಾಡ್ತಾರೆ. ಆದ್ರೆ ಅವರ ಇಲಾಖೆಯಲ್ಲಿ ಎಷ್ಟು ಸಮಸ್ಯೆ ಇದೆ. ಬೇಡಿಕೆಗಳು ಸಮಂಜಸ ಇದೆಯೋ, ಇಲ್ಲವೋ, ತಜ್ಞರಿಂದ ಮಾಹಿತಿ ಪಡೆದು ಸ್ಪಂದಿಸುವ ಸೌಜನ್ಯ ತೋರಿಸುತ್ತಿಲ್ಲ. ರಾಜ್ಯ ಸರ್ಕಾರ ತತಕ್ಷಣ ಎಚ್ಚೆತ್ತುಕೊಳ್ಳಬೇಕು. ಸಿಎಂ ಹಾಗೂ ಸಂಬಂಧಿಸಿದ ಸಚಿವರು ಈ ಬಗ್ಗೆ ಸಭೆ ಕರೆದು ಮನವಿ ಬಗ್ಗೆ ಚರ್ಚೆ ಮಾಡಿ. ಕೂಲಕುಂಶವಾಗಿ ಪರಿಶೀಲಿಸಿ ಯಾವ ಸಮಸ್ಯೆ ಬಗೆ ಹರಿಸಬಹುದು ಅದರ ಬಗ್ಗೆ ಕ್ರಮ ಕೈಗೊಳ್ಳಿ. ಇಲ್ಲವಾದ್ರೆ ಆರ್.ಡಿ.ಪಿ.ಆರ್ ಇಲಾಖೆಯವರು ನಡೆಸುವ ನ್ಯಾಯ ಬದ್ಧ ಹೋರಾಟಕ್ಕೆ ನಿಮ್ಮ ಜೊತೆಗೆ ನಾವಿದ್ದೆವೆ.
ನಿಮ್ಮ ಹೋರಾಟದಲ್ಲಿ ನಾವು ಪಾಲ್ಗೊಳ್ಳುತ್ತೆವೆ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಬರವಸೆ ನೀಡಿದರು. ಈ ವೇಳೆ ಮಾಜಿ ಸಚಿವ ಹಾಗೂ ನರಗುಂದ ಶಾಸಕ ಸಿ.ಸಿ ಪಾಟೀಲ, ಮಾಜಿ ಸಚಿವ ಕಳಕಪ್ಪ ಬಂಡಿ, ಪರಿಷತ್ ಸದಸ್ಯ ಎಸ್.ವಿ ಸಂಕನೂರ, ಜಿಲ್ಲಾಧ್ಯಕ್ಷ ರಾಜು ಕುರುಡಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.