ಮಾಸ್ಕೊ: ಗೂಢಚರ್ಯೆ ನಡೆಸಿರುವ ಆರೋಪದ ಮೇಲೆ ಅಮೆರಿಕದ ‘ವಾಲ್ ಸ್ಟ್ರೀಟ್ ಜರ್ನಲ್’ನ ವರದಿಗಾರರೊಬ್ಬರನ್ನು ಬಂಧಿಸಿರುವುದಾಗಿ ರಷ್ಯಾದ ಉನ್ನತ ಭದ್ರತಾ ಏಜೆನ್ಸಿ ತಿಳಿಸಿದೆ.
ರಹಸ್ಯ ಮಾಹಿತಿಗಳನ್ನು ಕಲೆಹಾಕಲು ಯತ್ನಿಸುತ್ತಿದ್ದ ವರದಿಗಾರ ಇವಾನ್ ಗೆರ್ಸ್ಕೊವಿಚ್ ಎಂಬುವವರನ್ನು ಯೆಕಟೆರಿನ್ ಬರ್ಗ್ ನಗರದಲ್ಲಿ ಬಂಧಿಸಲಾಯಿತು ಎಂದು ಫೆಡರಲ್ ಸೆಕ್ಯುರಿಟಿ ಸರ್ವೀಸ್ ಹೇಳಿದೆ.
ಅಮೆರಿಕದ ನಿರ್ದೇಶನದ ಮೇರೆಗೆ ಗೆರ್ಸ್ಕೊವಿಚ್ ರಷ್ಯಾ ಸೇನೆಯ ಕೈಗಾರಿಕಾ ಸಂಕೀರ್ಣದಲ್ಲಿರುವ ಉದ್ಯಮವೊಂದರ ಚಟುವಟಿಕೆಗಳ ಬಗ್ಗೆ ರಹಸ್ಯ ಮಾಹಿತಿಗಳನ್ನು ಕಲೆ ಹಾಕುತ್ತಿದ್ದರು ಎಂದು ಎಫ್ಎಸ್ಬಿ ಆರೋಪ ಮಾಡಿದೆ.
ಅವರು ಶೀತಲ ಸಮರದ ನಂತರ ಗೂಢಚರ್ಯೆ ಆರೋಪದ ಮೇಲೆ ರಷ್ಯಾದಲ್ಲಿ ಬಂಧನಕ್ಕೆ ಒಳಗಾದ ಅಮೆರಿಕ ಸುದ್ದಿಸಂಸ್ಥೆಯ ಮೊದಲ ವರದಿಗಾರ ಗೆರ್ಸ್ಕೊವಿಚ್ ಆಗಿದ್ದಾರೆ.