ಇತ್ತೀಚೆಗೆ ನಡೆದಿದ್ದ ರಶ್ಯ ಅಧ್ಯಕ್ಷೀಯ ಚುನಾವಣೆಯ ಮತಪತ್ರದಲ್ಲಿ `ಯುದ್ಧಬೇಡ’ ಎಂದು ಬರೆದಿದ್ದ ಮಹಿಳೆಗೆ 8 ದಿನಗಳ ಜೈಲುಶಿಕ್ಷೆ ವಿಧಿಸಲಾಗಿದೆ.
ಚುನಾವಣೆಯಲ್ಲಿ ವ್ಲಾದಿಮಿರ್ ಪುಟಿನ್ ಗೆಲುವು ಸಾಧಿಸಿದ್ದು 6ನೇ ಭಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಚುನಾವಣೆಯ ದಿನದಂದು ಮತ ಹಾಕಲು ಬಂದಿದ್ದ ಸೈಂಟ್ ಪೀಟರ್ಸ್ಬರ್ಗ್ ನ ಅಲೆಕ್ಸಾಂಡ್ರಾ ಚಿರ್ಯಟ್ಯೆವಾ ಮತಪತ್ರದ ಹಿಂಬದಿಯಲ್ಲಿ ಕೆಂಪು ಮಾರ್ಕರ್ ಪೆನ್ನಿಂದ `ಯುದ್ಧಬೇಡ’ ಎಂದು ಬರೆದು ಅದನ್ನು ಮತಪೆಟ್ಟಿಗೆಯೊಳಗೆ ಹಾಕಿದ್ದಳು.
ಗೂಂಡಾಗಿರಿ ಮತ್ತು ರಶ್ಯದ ಸಶಸ್ತ್ರ ಪಡೆಗಳನ್ನು ಅಪಖ್ಯಾತಿಗೊಳಿಸಿದ ಅಪರಾಧಕ್ಕೆ ಆಕೆಗೆ 40,000 ರೂಬಲ್ಸ್(436 ಡಾಲರ್ಗಳು) ದಂಡ ಮತ್ತು 8 ದಿನಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಈ ಕೃತ್ಯದ ಮೂಲಕ ಸರಕಾರದ ಆಸ್ತಿಗೆ ಹಾನಿ ಎಸಗಲಾಗಿದೆ ಎಂದು ಸೈಂಟ್ ಪೀಟರ್ಸ್ಬರ್ಗ್ ನ ಜಿಲ್ಲಾ ನ್ಯಾಯಾಲಯದ ಆದೇಶ ತಿಳಿಸಿದೆ.