ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿರುವ ರಶ್ಯ, ಅವರನ್ನು ವಾಂಟೆಡ್ ಪಟ್ಟಿಯಲ್ಲಿ ಸೇರಿಸಿದೆ ಎಂದು ಸರಕಾರಿ ಸ್ವಾಮ್ಯದ `ತಾಸ್’ ಸುದ್ಧಿಸಂಸ್ಥೆ ವರದಿ ಮಾಡಿದೆ.
2022ರ ಫೆಬ್ರವರಿಯಲ್ಲಿ ಉಕ್ರೇನ್ ಜೊತೆಗಿನ ಸಂಘರ್ಷ ಆರಂಭಗೊಂಡಂದಿನಿಂದ ರಶ್ಯವು ಯುರೋಪ್ ಮತ್ತು ಉಕ್ರೇನ್ನ ಹಲವು ರಾಜಕಾರಣಿಗಳ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿದೆ. ಎಸ್ಟೋನಿಯಾದ ಪ್ರಧಾನಿ ಕಾಜ ಕಲ್ಲಾಸ್, ಲಿಥ್ವೇನಿಯಾದ ಸಾಂಸ್ಕೃತಿಕ ಸಚಿವರು ಸೇರಿದಂತೆ ಹಲವರನ್ನು ಕಳೆದ ಫೆಬ್ರವರಿಯಲ್ಲಿ ವಾಂಟೆಡ್ ಪಟ್ಟಿಗೆ ಸೇರಿಸಿದ್ದು ಇದೀಗ ಝೆಲೆನ್ ಸ್ಕಿ ಅವರನ್ನು ಸೇರಿಸಿದೆ.