ನವದೆಹಲಿ: ಇತ್ತೀಚೆಗಷ್ಟೇ ಬ್ರಿಟನ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಚೀನಾದ ಕುರಿತು ಮಾಡಿದ ಟೀಕೆಗಳಿಗಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನಾಯಕ ಭಾರತದ ಬಗ್ಗೆ ತಿರಸ್ಕಾರ ಮಾತನಾಡುತ್ತಿದ್ದು, ಚೀನಾದ ಮೇಲೆ ಜೊಲ್ಲು ಸುರಿಸುತ್ತಿರುವುದನ್ನು ಕಂಡು ಬೇಸರವಾಗಿದೆ ಎಂದಿದ್ದಾರೆ.
ಇಂಡಿಯಾ ಟುಡೇ ಕಾನ್ಕ್ಲೇವ್ನಲ್ಲಿ ನಡೆದ ಸಂವಾದಾತ್ಮಕ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಎಸ್ ಜೈಶಂಕರ್, ‘ಯಾರೋ ಚೀನಾದ ಮೇಲೆ ಜೊಲ್ಲು ಸುರಿಸುವುದನ್ನು ಭಾರತದ ಪ್ರಜೆಯಾಗಿ ನೋಡುವುದು ಕಷ್ಟವಾಗುತ್ತಿದೆ. ಪಾಂಡಾವೊಂದು ಚೀನಾದ ಗಿಡುಗವಾಗಲು ಪ್ರಯತ್ನಿಸಿದರೆ ಅದು ಹಾರುವುದಿಲ್ಲ ಎಂದು ಹೇಳಿದರು.
ಅಮೆರಿಕ ಮೂಲದ ಲೇಖಕ ಮೈಕೆಲ್ ಪಿಲ್ಸ್ಬರಿ ಹೇಳಿಕೆಗಳನ್ನು ಉಲ್ಲೇಖಿಸಿದ ಸಚಿವರು, “ಪಾಂಡಾ ಹಗ್ಗರ್ಗಳು ಚೀನಾ ಗಿಡುಗಗಳಾಗಿರಲು ಪ್ರಯತ್ನಿಸಿದಾಗ ಅದು ಹಾರುವುದಿಲ್ಲ. ರಾಹುಲ್ ಗಾಂಧಿ ಅವರು ಬ್ರಿಟನ್ ನಲ್ಲಿದ್ದಾಗ ಹೇಳಿದ ಕೆಲವನ್ನು ನಾನು ಕೂಡ ಇತರರಂತೆ ನೋಡಿದ್ದೇನೆ. ನಿಸ್ಸಂಶಯವಾಗಿ, ಅದರಲ್ಲಿ ಬಹಳಷ್ಟು ರಾಜಕೀಯವಾಗಿದೆ. ಯಾರಾದರೂ ಚೀನಾದ ಮೇಲೆ ಜೊಲ್ಲು ಸುರಿಸುತ್ತಿರುವುದನ್ನು ಮತ್ತು ಭಾರತದ ಬಗ್ಗೆ ತಿರಸ್ಕಾರ ಮಾಡುವುದನ್ನು ನಾನು ನೋಡಿದಾಗ ಭಾರತದ ಪ್ರಜೆಯಾಗಿ ನನಗೆ ಗೊಂದಲವಾಗುತ್ತದೆ ಎಂದು ಜೈಶಂಕರ್ ಹೇಳಿದರು.